ಆರ್‌ಬಿಐ ಹೊಸ ನಿಯಮ, ಇನ್ಮುಂದೆ ಹಣ ವರ್ಗಾಯಿಸುವಾಗ ತಪ್ಪಿ ಇನ್ಯಾರಿಗೋ ಹೋಗಲ್ಲ

First Published | Jan 2, 2025, 2:41 PM IST

ಖಾತೆಯಿಂದ ಹಣ ವರ್ಗಾಯಿಸುವಾಗ ಇನ್ಯಾರದ್ದೋ ಖಾತೆಗೆ ತಪ್ಪಿ ಹಣ ವರ್ಗಾವಣೆಯಾದ, ತರಾತುರಿಯಲ್ಲಿ ಮತ್ಯಾರಿಗೋ ಕಳುಹಿಸಿ ಪರದಾಡಿದ ಹಲವು ಘಟನೆಗಳು ನಡೆದಿದೆ. ಇದೀಗ ಈ ಸಮಸ್ಯೆಗೆ ಮುಕ್ತಿ ಹಾಡಲು ಆರ್‌ಬಿಐ ಹೊಸ ನಿಯಮ ಜಾರಿಗೆ ತಂದಿದೆ. 
 

ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಸೇರಿದಂತೆ ಇದೀಗ ಎಲ್ಲವೂ ಡಿಜಿಟಲ್ ವಹಿವಾಟು. ಹಣ ಪಾವತಿ, ಶುಲ್ಕ ಪಾವತಿ, ಹಣ ವರ್ಗಾವಣೆ ಸೇರಿದಂತೆ ಎಲ್ಲವೂ ಡಿಜಿಟಲ್ ವ್ಯವಹಾರ. ಆದರೆ ಈ ಹಣ ವರ್ಗಾವಣೆಯಲ್ಲಿ ತಪ್ಪಿ ಇನ್ಯಾರದ್ದೋ ಖಾತೆಗೆ ವಗ್ಗಾವಣೆ ಮಾಡಿದ ಹಲವು ಘಟನೆಗಳು ನಡೆದಿದೆ. ಇದೀಗ ನಿಮ್ಮ ಕಳುಹಿಸುವ, ವರ್ಗಾಯಸುವ ಹಣ ಸರಿಯಾದ ವ್ಯಕ್ತಿಗೆ ತಲುಪುವಂತೆ ಮಾಡಲು ಆರ್‌ಬಿಐ ಹೊಸ ಹಾಗೂ ಕಡ್ಡಾಯ ನಿಯಮ ಜಾರಿಗೆ ತರುತ್ತಿದೆ.

ಯುಪಿಐ ಪಾವತಿ ವೇಳೆ ನೀವು ಹಣ ಕಳುಹಿಸುವ ವ್ಯಕ್ತಿಯ ಯುಪಿಐ ಐಡಿ ಸ್ಪಷ್ಟವಾಗಿರುತ್ತದೆ. ಅದು ಮೊತ್ತ ದಾಖಲಿಸುವಾಗ, ಹಣವನ್ನು ಸೆಂಡ್ ಬಟನ್ ಮೂಲಕ ವರ್ಗಾಯಿಸುವಾಗಲು ಈ ಯುಪಿಐ ಐಡಿ ಗೋಚರವಿರುತ್ತದೆ. ಆದರೆ  ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಆರ್‌ಟಿಜಿಎಸ್(RTGS) ಹಾಗೂ ಎನ್‌ಇಎಫ್‌ಟಿ(NEFT) ಟ್ರಾನ್ಸಾಕ್ಷನ್‌ಗಳಲ್ಲಿ ತಪ್ಪಿ ಇನ್ಯಾರಿಗೋ ಹೋದ ಹಲವು ಘಟನೆಗಳು, ದೂರುಗಳು ವರದಿಯಾಗಿದೆ.

Tap to resize

ಈ ಸಮಸ್ಯೆಗೆ ಮುಕ್ತಿ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಎಪ್ರಿಲ್ 1, 2025ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದಡಿಯಲ್ಲಿ ಎಲ್ಲಾ ಬ್ಯಾಂಕ್‌ಗಳು RTGS ಹಾಗೂ NEFT ವಹಿವಾಟುಗಳನ್ನು ಅಪ್‌ಡೇಟ್ ಮಾಡುತ್ತಿದೆ. ಈ ಮೂಲಕ  ತಪ್ಪಿ ಇನ್ಯಾರದ್ದೋ ಖಾತೆಗೆ ಹಣ ವರ್ಗಾವಣೆ ಮಾಡುವ ಸಮಸ್ಯೆ ತಪ್ಪಿಸಲು ಈ ಮಹತ್ವದ ಕ್ರಮ ಕೈಗೊಂಡಿದೆ.

 RTGS ಹಾಗೂ NEFT ಮೂಲಕ ಹಣ ಕಳುಹಿಸುವಾಗ ಯಾರು ಹಣಕಳುಹಿಸುತ್ತಾರೋ ಅವರಿಗೆ ಯಾರಿಗೆ ಕಳುಹಿಸಬೇಕೋ ಅವರ ಖಾತೆ ವಿವರ ಹಾಗೂ ಮಾಹಿತಿ ಕೊನೆಯ ಬಟನ್ ಟ್ಯಾಪ್ ಮಾಡುವರೆಗೆ ಸ್ಪಷ್ಟವಾಗಿರಬೇಕು ಎಂದು ಆರ್‌ಬಿಐ ಸೂಚಿಸಿದೆ. ಇದರಿಂದ ಸೆಂಡರ್ ಯಾವುದೇ ಕ್ಷಣದಲ್ಲಿ ತಪ್ಪಾಗಿ ಖಾತೆ ವಿವರ ಆಯ್ಕೆ ಮಾಡಿಕೊಂಡಿದ್ದರು. ವಹಿವಾಟು ಅರ್ಧಕ್ಕೆ ನಿಲ್ಲಿಸಲು ಸಹಾಯ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಗೆ ಈ ನಿಟ್ಟಿನಲ್ಲಿ  RTGS ಹಾಗೂ NEFT ಬೆನಿಫೀಶಿಯರಿ ಅಪ್‌ಡೇಟ್ ಮಾಡುವಂತೆ ಸೂಚಿಸಿದೆ. ಎಪ್ರಿಲ್ 1, 2025ರಂದು ಹೊಸ ಅಪ್‌ಡೇಟ್ ಜಾರಿಯಾಗಬೇಕು ಎಂದು ಸೂಚಿಸಿದೆ. ಸೆಂಡರ್ ಹಣ ಕಳುಹಿಸುವಾಗ ರಿಸೀವರ್ ಖಾತೆ ಮಾಹಿತಿಯನ್ನು ವೆರಿಫಿಕೇಶನ್ ಮಾಡಲು ಅವಕಾಶ ಇರಬೇಕು ಎಂದು ಆರ್‌ಬಿಐ ಸೂಚಿಸಿದೆ.

ಹಣ ವರ್ಗಾವಣೆಯ ಯಾವುದೇ ಹಂತದಲ್ಲೂ ಹಣ ಕಳುಹಿಸವು ಖಾತೆ ವಿವರ ವೆರಿಫಿಕೇಶನ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಪ್ಪಿ ಇನ್ಯಾರದ್ದೋ ಖಾತೆಗೆ ಹಣ ವರ್ಗಾವಣೆ ಮಾಡುವ, ತಪ್ಪು ಖಾತೆ ಸಂಖ್ಯೆಗಳಿಂದ ಸಂಕಷ್ಟಕ್ಕೆ ಸಿಲುಕುವ ಆತಂಕ ಇರುವುದಿಲ್ಲ. ವೆರಿಫಿಕೇಶನ್ ಆಯ್ಕೆ ಇರುವುದರಿಂದ ನೀವು ನಮೂದಿಸಿದ ಖಾತೆ ಸಂಖ್ಯೆ, ನಂಬರ್ ಸರಿಯಾಗಿದೆಯಾ? ಈ ಖಾತೆ ಯಾರ ಹೆಸರಲ್ಲಿದೆ, ಬ್ರಾಂಚ್ ಸೇರಿದಂತೆ ಎಲ್ಲಾ ಮಾಹಿತಿಗಳು ವೆರಿಫಿಕೇಶನ್ ಮೂಲಕ ಸೆಂಡರ್‌ಗೆ ನೀಡಲಿದೆ.

ಪ್ರಮುಖವಾಗಿ ತಪ್ಪು ಖಾತೆ ಸಂಖ್ಯೆ ಸಮಸ್ಯೆ, ಇನ್ಯಾರದ್ದೋ ಖಾತೆಗೆ ಹಣ ವರ್ಗಾವಣೆ ಹಾಗೂ ರಿಯಲ್ ಟೈಮ್ ರಿಸ್ಕ್ ಕಡಿಮೆ ಮಾಡಲು ಈ ಅಪ್‌ಡೇಟ್ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಹೊಸ ಅಪ್‌ಡೇಟ್ ಜನರ ಬಹುದಿನಗಳ ಸಂಕಷ್ಟ ಹಾಗೂ ತಲೆನೋವಿಗೆ ಉತ್ತರ ನೀಡುವ ಸಾಧ್ಯತೆ ಇದೆ.

Latest Videos

click me!