ರಿಲಯನ್ಸ್ ಇಂಡಸ್ಟ್ರೀ ಚೇರ್ಮೆನ್, ಉದ್ಯಮಿ ಮುಕೇಶ್ ಅಂಬಾನಿ ಉದ್ಯಮ ಸಾಮ್ರಾಜ್ಯ ದೇಶ ವಿದೇಶದಲ್ಲಿ ಹರಡಿಕೊಂಡಿದೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಹೆಸರು ದಾಖಲಿದೆ. ತಮ್ಮ ಉದ್ಯಮ, ಕಚೇರಿ ಕೆಲಸಗಳ ನಡುವೆ ಮುಕೇಶ್ ಅಂಬಾನಿ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವಲ್ಲಿ ಸದಾ ಮುಂದಿರುತ್ತಾರೆ.
ಇದೀಗ ಮುಕೇಶ್ ಅಂಬಾನಿ ಹಾಗೂ ಕುಟುಂಬ ಸದಸ್ಯರು ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಕೇದಾರನಾಥ್ ಹಾಗೂ ಬದ್ರಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಒಟ್ಟು 5.02 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಮುಖೇಶ್ ಅಂಬಾನಿ, ತಮ್ಮ ಭಾವಿ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶ್ರೀ ಬದರಿನಾಥ್ ಮತ್ತು ಕೇದಾರನಾಥ ಧಾಮ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಮುಕೇಶ್ ಅಂಬಾನಿ ಹಾಗೂ ಕುಟುಂಬಸ್ಥರನ್ನು ಕೇದಾರನಾಥ ಬದ್ರಿನಾಥ್ ದೇವಸ್ಥಾನ ಸಮಿತಿ ಅಧ್ಯಕ್ಷ ಕಿಶೋರ್ ಪವಾರ್ ಸ್ವಾಗತಿಸಿದರು.
ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬದ್ರಿನಾಥ ದೇವಸ್ಥಾನಕ್ಕೆ 2.51 ಕೋಟಿ ರೂಪಾಯಿ ಹಾಗೂ ಕೇದಾರನಾಥ್ ದೇವಸ್ಥಾನಕ್ಕೆ 2.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಇತ್ತೀಚೆಗೆ ಮುಕೇಶ್ ಅಂಬಾನಿ, ಪುತ್ರ ಆಕಾಶ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ, ಮೊಮ್ಮದ್ ಪೃಥ್ವಿ ಅಂಬಾನಿ ಸೇರಿ ಕುಟುಂಬಸ್ಥರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬೇಟಿ ನೀಡಿದ್ದರು.
ಇನ್ನು ಕಳೆದ ವರ್ಷ ಮುಕೇಶ್ ಅಂಬಾನಿ ಹಾಗೂ ಕುಟುಂಬಸ್ಥರು ಆಂಧ್ರ ಪ್ರದೇಧ ತಿರುಪತಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ 1.50 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.
ಇನ್ನು ಕಳೆದ ವರ್ಷ ಕೇರಳದ ಗುರುವಾಯೂರು ಶ್ರೀಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮುುಕೇಶ್ ಅಂಬಾನಿ, ವಿಶೇಷ ಪೂಜೆ ಸಲ್ಲಿಸಿದ್ದರು. ಇಷ್ಟೇ ಅಲ್ಲ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.