ಸಣ್ಣ ಆಲೋಚನೆಯಿಂದ ಬದಲಾಯಿತು ಬದುಕು, 28 ವರ್ಷಕ್ಕೆ ನಿವೃತ್ತಿ ಜೀವನ ಆರಂಭಿಸಿದ ದಂಪತಿ!

Published : Oct 11, 2023, 05:34 PM IST

ವಯಸ್ಸು 28, 38, 48 ಆದರೂ ಸೆಟಲ್ ಆಗಿಲ್ಲ ಅನ್ನೋ ಮಾತು ಪದೇ ಪದೇ ಕೇಳಿರುತ್ತೇವೆ. ಆದರೆ ಇಲ್ಲೊಂದು ದಂಪತಿ ತಮ್ಮ 28ನೇ ವಯಸ್ಸಿಗೆ ಕೆಲಸದಿಂದ ನಿವೃತ್ತಿಯಾಗಿದ್ದಾರೆ. ಸಣ್ಣ ಪ್ಲಾನ್ ಇವರ ಬದುಕನ್ನೇ ಬದಲಾಯಿಸಿದೆ. ಇದೀಗ ಈ ದಂಪತಿ ಹಾಯಾಗಿ ತಮ್ಮ ದಿನ ಕಳೆಯುತ್ತಿದ್ದಾರೆ.

PREV
17
ಸಣ್ಣ ಆಲೋಚನೆಯಿಂದ ಬದಲಾಯಿತು ಬದುಕು, 28 ವರ್ಷಕ್ಕೆ ನಿವೃತ್ತಿ ಜೀವನ ಆರಂಭಿಸಿದ ದಂಪತಿ!

ಭಿನ್ನ ಆಲೋಚನೆ, ಸಾಧಿಸುವ ಛಲವಿದ್ದರೆ ಬದುಕಿನಲ್ಲಿ ಎಲ್ಲವೂ ಸಾಧ್ಯ ಅನ್ನೋದು ಸಾಬೀತಾಗಿದೆ. ಹೀಗೆ ಇಲ್ಲೊಂದು ದಂಪತಿ ಸಣ್ಣ ಆಲೋಚನೆಯಿಂದ ಬದುಕನ್ನೇ ಬದಲಾಯಿಸಿದ್ದಾರೆ. 2019ರಲ್ಲಿ ತಾವು ಬಾಡಿಗೆ ಮನೆಯಲ್ಲಿದ್ದುಕೊಂಡು ಕೆಲಸಕ್ಕೆ ತೆರಳುತ್ತಿದ್ದ ದಂಪತಿ ಇದೀಗ ಶ್ರೀಮಂತ ಉದ್ಯಮಿಗಳಾಗಿದ್ದಾರೆ.

27

2019ರಲ್ಲಿ ಮಿಚೆಲ್ ಎಲಿಫ್ಯಾಂಟೆ ಹಾಗೂ ಪತ್ನಿ ಅಮೆರಿಕದ ನಶ್‌ವಿಲೆಗೆ ಸ್ಥಳಾಂತರಗೊಂಡಾಗ ಬಾಡಿಗೆ ಮನೆ ಪಡೆದುಕೊಂಡರು. ಇದೇ ವೇಳೆ ತಾವಿರುವುದು ಪ್ರವಾಸೋದ್ಯಮದ ಕೇಂದ್ರ ಬಿಂದು. ಹೀಗಿರುವಾಗ ಕೆಲಸದ ಜೊತೆಗೆ ಉದ್ಯಮ ಶುರುಮಾಡಿದರೆ ಹೇಗೆ ಅನ್ನೋ ಆಲೋಚನೆ ಮೆಚೆಲ್‌ಗೆ ಬಂದಿದೆ.

37

ಕೈಯಲ್ಲಿದ್ದ ಇದ್ದ ಹಣವೆಲ್ಲ ಒಗ್ಗೂಡಿಸಿ ಮನೆ ಖರೀದಿಸಿದ್ದಾರೆ. ಬಳಿಕ ಈ ಮನೆಯನ್ನು ಹೋಮ್ ಸ್ಟೇ ರೀತಿ, ತಿಂಗಳ ಬಾಡಿಗೆಗೆ, 15 ದಿನ ಬಾಡಿಗೆಗೆ ನೀಡಲು ಆರಂಭಿಸಿದ್ದಾರೆ. ಎರ್‌ಬಿಎನ್‌ಬಿ ವೆಬ್‌ಸೈಟ್‌ನಲ್ಲಿ ರೆಂಟಲ್ ಪ್ರಾಪರ್ಟಿ ಕುರಿತು ಪೋಸ್ಟ್ ಮಾಡಿದ್ದಾರೆ.

47

2020ರಲ್ಲಿ ಎರ್‌ಬಿಎನ್‌ಬಿ ವೆಬ್‌ಸೈಟ್‌ನಲ್ಲಿ ಹಾಕಿದ ತಕ್ಷಣವೇ ಬುಕಿಂಗ್ ಆರಂಭಗೊಂಡಿದೆ. ಆದರೆ ಅಷ್ಟೇ ವೇಗದಲ್ಲಿ ಕೊರೋನಾ ಅಪ್ಪಳಿಸಿದ ಕಾರಣ ಸಮಸ್ಯೆಗಳು ಎದುರಾಯಿತು. ಕೊರೋನಾ ಪರದೆ ಹಿಂದೆ ಸರಿಯುತ್ತಿದ್ದಂತೆ ಮಿಚೆಲ್ ಆದಾಯ ಡಬಲ್ ಆಗಿತ್ತು.
 

57

ಪ್ರವಾಸೋದ್ಯಮವನ್ನೇ ಬಂಡವಾಳ ಮಾಡಿಕೊಂಡ ಮಿಚೆಲ್ ಮನೆಯನ್ನು ತಿಂಗಳಿಗೆ ಬಾಡಿಗೆ ನೀಡುವ, ಹೋಮ್ ಸ್ಟೇ ರೀತಿ ಉಪಯೋಗಿಸಲು ನೀಡಲು ಆರಂಭಿಸಿದ್ದ. ಇದರಿಂದ ಬಂದ ಆದಾಯದಲ್ಲಿ ಮಿಚೆಲ್ ತನ್ನ ಉದ್ಯಮ ವಿಸ್ತರಿಸುತ್ತಲೇ ಹೋದ.

67

ಬಾಡಿಗೆ ಮನೆ ಪಡೆದು ಉದ್ಯಮ ಆರಂಭಿಸಿದ ಮಿಚೆಲ್ ಇದೀಗ ಫ್ಲೋರಿಡಾ ಸೇರಿದಂತೆ ಕೆಲ ಪ್ರವಾಸೋದ್ಯಮ ತಾಣಗಳಲ್ಲಿ 6 ಮನೆಗಳನ್ನು ಹೊಂದಿದ್ದಾರೆ. ಇಷ್ಟೇ ಅಲ್ಲ 6 ಮನೆಗಳಿಂದ 118,000 ಡಾಲರ್ ಹಣ ಸಂಪಾದಿಸುತ್ತಿದ್ದಾನೆ.
 

77

28ನೇ ವಯಸ್ಸಿಗೆ ಮೆಚೆಲ್ ಹಾಗೂ ಪತ್ನಿ ಕೆಲಸಕ್ಕೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ರೆಂಟಲ್ ಬ್ಯೂಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾನೆ. ಇದೀಗ ಮೆಚೆಲ್ ಮಧ್ಯಮ ವರ್ಗದ ಕುಟುಂಬಗಳು ಇದೇ ರೀತಿ ಆದಾಯಗಳಿಸಲು ಸಾಧ್ಯವಿದೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾನೆ. 

Read more Photos on
click me!

Recommended Stories