ಅಂತರಾಷ್ಟ್ರೀಯ ಫ್ಯಾಷನ್‌ ಲೋಕದಲ್ಲಿ ಗುರುತಿಸಿಕೊಂಡ ಭಾರತದ ಶ್ರೀಮಂತ ಮಹಿಳಾ ಉದ್ಯಮಿ

First Published | Oct 12, 2023, 12:14 PM IST

ಈಕೆ ದೇಶದ ಶ್ರೀಮಂತ ಬಿಲಿಯನೇರ್‌ ಉದ್ಯಮಿಯ ಪತ್ನಿ, 1,71,330 ಕೋಟಿ ರೂ ಬೆಲೆ ಬಾಳುವ ವಿಶ್ವದ ಟಾಪ್‌ ಕಂಪೆನಿಯನ್ನು ಸ್ಥಾಪಿಸಿದ ಭಾರತದ ಶ್ರೀಮಂತ ಉದ್ಯಮಿಯ ಸೊಸೆ. ಸ್ವತಃ ಮಹಿಳಾ ಉದ್ಯಮಿಯಾಗಿದ್ರೂ, ಫ್ಯಾಷನ್‌ ಬಗ್ಗೆ ಇನ್ನಿಲ್ಲದ ಒಲವು 41 ವರ್ಷ ವಯಸ್ಸಿನ ಈಕೆಗೆ ಇಬ್ಬರು ಮಕ್ಕಳು. ಯಾವ ಸಿನೆಮಾ ತಾರೆಗೂ ಕಮ್ಮಿ ಇಲ್ಲ ಈಕೆಯ ಸೌಂದರ್ಯ. ಹಲವಾರು ಫ್ಯಾಶನ್‌ ಶೋಗಳಲ್ಲಿ  ಈಕೆ ಹೆಜ್ಜೆ ಹಾಕಿದ್ದಾಳೆ ಕೂಡ. ಯಾರೀಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನತಾಶಾ ಪೂನವಾಲಾ ಭಾರತದ ಪ್ರಸಿದ್ಧ ಮಹಿಳಾ ಉದ್ಯಮಿಗಳಲ್ಲಿ ಒಬ್ಬಾಕೆ. ಫ್ಯಾಷನ್‌ ಮತ್ತು ಡಿಸೈನ್ ಬಗ್ಗೆ ಎಲ್ಲಿಲ್ಲದ ಒಲವು  ಹೊಂದಿದ್ದಾಳೆ. ನತಾಶಾ ಅವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಭಾರತದ ಈ ಕಂಪನಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಕಂಪೆನಿಯಲ್ಲಿ ಒಂದಾಗಿದೆ. 

ಈಕೆ ಬೇರಾರು ಅಲ್ಲ 1966 ರಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್  ಅನ್ನು ಸ್ಥಾಪಿಸಿದ ಫಾರ್ಮಾ ಬಿಲಿಯನೇರ್ ಸೈರಸ್ ಪೂನವಲ್ಲ ಅವರ ಸೊಸೆ. ಅವರು ಅಕ್ಟೋಬರ್ 11 ರ ವೇಳೆಗೆ 1,71,330 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ ಸೈರಸ್ ಪೂನವಲ್ಲ. 

Tap to resize

ನತಾಶಾ ಅವರು ಸೈರಸ್  ಅವರ ಮಗ ಅದಾರ್ ಪೂನವಲ್ಲ (ಸೀರಮ್ ಇನ್‌ಸ್ಟಿಟ್ಯೂಟ್ ಸಿಇಓ ) ಅವರನ್ನು ವಿವಾಹವಾಗಿದ್ದಾರೆ.  ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಸೈರಸ್ ಮತ್ತು ಡೇರಿಯಸ್ ಎಂದು ಹೆಸರಿಟ್ಟರಿದ್ದಾರೆ. 

ನತಾಶಾಗೆ ಫ್ಯಾಷನ್‌ಗೆ ಎಲ್ಲಿಲ್ಲದ ಒಲವು. ಆಗಾಗ ಬೆಲೆಬಾಳುವ ಕೈಚೀಲಗಳಾದ ಗುಸ್ಸಿ, ಡಿಯರ್, ಲೂಯಿ ವಿಟಾನ್, ಹರ್ಮೆಸ್ ಇತ್ಯಾದಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. 

ಪುಣೆಯಲ್ಲಿ ಹುಟ್ಟಿ ಬೆಳೆದ ನತಾಶಾ ತನ್ನ ಶಾಲಾ ಶಿಕ್ಷಣ ಮತ್ತು ಪದವಿ ಮುಗಿಸಿದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸಾಂಸ್ಥಿಕ ನಡವಳಿಕೆ ( Organisational Behaviour) ಎಂಬ ವಿಷಯದಲ್ಲಿ ಎಂ.ಎಸ್ಸಿ ಮಾಡಿದ್ದಾರೆ. 

ನತಾಶಾ ಸೀರಮ್ ಲೈಫ್ ಸೈನ್ಸಸ್‌ನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ, ಇದು ಸಾಂಕ್ರಾಮಿಕ ಲಸಿಕೆಗಳನ್ನು ಅಭಿವೃದ್ಧಿಪಡಿಸುವುದು, ಉತ್ಪಾದಿಸುವುದು ಮತ್ತು ಸರಬರಾಜು ಮಾಡುವ ವ್ಯವಹಾರವಾಗಿದೆ. ಇದರ ಜೊತೆಗೆ ಸೈರಸ್ ಪೂನಾವಲ್ಲ ಗ್ರೂಪ್ ಕಂಪನಿಗಳಿಗೆ ಸೃಜನಶೀಲ ಮತ್ತು ವ್ಯಾಪಾರ ತಂತ್ರಗಳಲ್ಲಿ ಕೆಲಸ ಮಾಡುತ್ತಾರೆ. 

ಬರ್ಗಂಡಿ ಖಾಸಗಿ ಹುರುನ್ ಇಂಡಿಯಾದ ಪ್ರಕಾರ, ಈ ವರ್ಷದ ಆರಂಭದಲ್ಲಿ ಸೀರಮ್ ಸಂಸ್ಥೆ 1.92 ಲಕ್ಷ ಕೋಟಿ ರೂ. ಮೌಲ್ಯ ಹೊಂದಿದೆ. ನತಾಶಾ ಅವರ ನಿವ್ವಳ ಮೌಲ್ಯ 660 ಕೋಟಿ ರೂಪಾಯಿ. ಎಂದು ವರದಿಯಾಗಿದೆ.

ನತಾಶಾ 2006 ರಲ್ಲಿ ಬಿಲಿಯನೇರ್ ಆದರ್ ಪೂನಾವಲ್ಲ ಅವರನ್ನು ವಿವಾಹವಾದರು. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ದಂಪತಿ ಪರಸ್ಪರ ಭೇಟಿಯಾದರು. ಇದನ್ನು ವಿಜಯ್ ಮಲ್ಯ ಆಯೋಜಿಸಿದ್ದರು. 

ನತಾಶಾ ಅವರು ಶಿಕ್ಷಣ, ಆರೋಗ್ಯ, ಸುರಕ್ಷಿತ ನೀರು ಮತ್ತು ಪರಿಸರ ನೈರ್ಮಲ್ಯವನ್ನು ಹೆಚ್ಚಿಸುವ ಮೂಲಕ ಜೀವನವನ್ನು ಸುಧಾರಿಸಲು 2012 ರಲ್ಲಿ ಪ್ರಾರಂಭಿಸಲಾದ ವಿಲ್ಲೂ ಪೂನಾವಲ್ಲ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ.

ವಿಲ್ಲೂ ಪೂನವಲ್ಲ ರೇಸಿಂಗ್ ಮತ್ತು ಬ್ರೀಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ, ಜೊತೆಗೆ  ನೆದರ್‌ಲ್ಯಾಂಡ್ಸ್‌ನ ಪೂನಾವಲ್ಲ ಸೈನ್ಸ್ ಪಾರ್ಕ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಭಾರತಕ್ಕಾಗಿ ಬ್ರಿಟಿಷ್ ಏಷ್ಯನ್ ಮಕ್ಕಳ ರಕ್ಷಣಾ ನಿಧಿಯ ಅಧ್ಯಕ್ಷರಾಗಿದ್ದಾರೆ. ಇದೆಲ್ಲದರ ಜೊತೆಗೆ ಬ್ರಿಟಿಷ್ ಏಷ್ಯನ್ ಟ್ರಸ್ಟ್‌ನ ಇಂಡಿಯಾ ಅಡ್ವೈಸರಿ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ.  ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

2012 ರಲ್ಲಿ, ಅವರು ತಮ್ಮ ಅತ್ತೆ ವಿಲ್ಲೂ ಪೂನಾವಲ್ಲ ಅವರ ನೆನಪಿಗಾಗಿ ವಿಲ್ಲೂ ಪೂನಾವಲ್ಲ ಚಾರಿಟೇಬಲ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಇದರ ಜೊತೆಗೆ ಶಿಕ್ಷಣ, ಪರಿಸರ, ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸುವ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ.

ಪ್ರಸ್ತುತ ಪುಣೆಯಲ್ಲಿ ವಾಸಿಸುತ್ತಿದ್ದು, 1.3 ಲಕ್ಷ ಕೋಟಿ ರೂ.ಗಳ ಒಡೆತನದ ಸಾಮ್ರಾಜ್ಯಕ್ಕೆ ಸೊಸೆಯಾಗಿದ್ದಾರೆ. ಮೆಟ್ ಗಾಲಾ, ವೋಗ್ ಮತ್ತು ಹಲೋ ನಿಯತಕಾಲಿಕೆಗಳ ಮುಖಪುಟಗಳಲ್ಲಿ ಮಾಡೆಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಫ್ಯಾಷನ್ ಜಗತ್ತಿನಲ್ಲಿ ಪ್ರಸಿದ್ಧ ಮುಖವಾಗಿ ಹೊರಹೊಮ್ಮಿದ್ದಾರೆ.

ಬಾಲಿವುಡ್‌ ದಿಗ್ಗಜರು ಮಾತ್ರವಲ್ಲ,ವಿಶ್ವದ ಅನೇಕ ಸೆಲೆಬ್ರಟಿಗಳು, ರಾಜಮನೆತನಗಳು, ರಾಜಕಾರಣಿಗಳು, ಉದ್ಯಮಿಗಳ ಜೊತೆಗೆ ನತಾಶಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. 

Latest Videos

click me!