ಜಿಯೋ ಧಮಾಕ, ಕೇವಲ ₹100ಕ್ಕೆ 5ಜಿಬಿ ಡೇಟಾ,90 ದಿನ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ

Published : Mar 10, 2025, 05:10 PM ISTUpdated : Mar 10, 2025, 05:16 PM IST

ರಿಲಯನ್ಸ್ ಡಿಯೋ ಆಫರ್‌ಗೆ ಪ್ರತಿಸ್ಪರ್ಧಿಗಳು ನಡುಗಿದ್ದಾರೆ. ಕಾರಣ ಕೇವಲ 100 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, 5ಜಿಬಿ ಉಚಿತ ಡೇಟಾ, 90 ದಿನ ಜಿಯೋ  ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ ಸೇರಿದಂತೆ ಹಲವು ಸೌಲಭ್ಯಗಳಿದೆ. 

PREV
15
ಜಿಯೋ ಧಮಾಕ, ಕೇವಲ ₹100ಕ್ಕೆ 5ಜಿಬಿ ಡೇಟಾ,90 ದಿನ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ

ರಿಲಯನ್ಸ್ ಜಿಯೋ ಗ್ರಾಹಕರಿಗೆ ಹಲವು ಆಫರ್ ನೀಡುತ್ತಲೇ ಬಂದಿದೆ. ಇದೀಗ  ಪೋರ್ಟ್ ತಪ್ಪಿಸಲು ಹಾಗೂ ಗ್ರಾಹಕರನ್ನು ಜಿಯೋ ನೆಟ್‌ವರ್ಕ್‌ನಲ್ಲೇ ಹಿಡಿದಿಟ್ಟುಕೊಳ್ಳಲು ಜಿಯೋ ಹೊಸ ಆಫರ್ ಘೋಷಿಸಿದೆ. ಇದೀಗ ಐಪಿಎಲ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಗ್ರಾಹಕರಿಗೆ ತಮ್ಮ ಫೋನ್ ಕಾಲ್, ಡೇಟಾ ಬಳಕೆ ಜೊತೆಗೆ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ನೆರವಾಗುವಂತೆ ಸುಲಭ ಹಾಗೂ ಅತೀ ಕಡಿಮೆ ಬೆಲೆಯ ಆಫರ್ ಘೋಷಿಸಲಾಗಿದೆ.

25

ಕೇವಲ 100 ರೂಪಾಯಿ ಹೊಸ ಪ್ಲಾನ್ ಗ್ರಾಹಕರಿಗೆ ಫ್ಲೆಕ್ಸಿಬಲ್ ಆಯ್ಕೆ ನೀಡಲಿದೆ. ಕಾರಣ ಇದರಲ್ಲಿನ ಸ್ಟ್ರೀಮಿಂಗ್ ಸಬ್‌ಸ್ಕ್ರಿಪ್ಶನ್ ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗೂ ಅನ್ವಯವಾಗಲಿದೆ. ಹೀಗಾಗಿ ಐಪಿಎಲ್ ಸೇರಿದಂತೆ ಜಿಯೋ  ಹಾಟ್‌ಸ್ಟಾರ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಬಯಸುವ ಗ್ರಾಹಕರಿಗೆ ಈ ಪ್ಲಾನ್ ಹೆಚ್ಚು ಸೂಕ್ತವಾಗಿದೆ. ಇಷ್ಟೇ ಕೇವಲ 100 ರೂಪಾಯಿ ಬೆಲೆಯಲ್ಲಿ ಹಲವು ಸೌಲಭ್ಯ ಬಳಸಿಕೊಳ್ಳಬಹುದು.

35

ಈ ಪ್ಲಾನ್‌ನ ಮತ್ತೊಂದು ವಿಶೇಷ ಅಂದರೆ ಈಗಾಗಲೇ ರೀಚಾರ್ಜ್ ಮಾಡಿರುವ ಬೇಸ್ ಪ್ಲಾನ್ ಜೊತೆ 100 ರೂಪಾಯಿ ಪ್ಲಾನ್ ಕಂಬೈನ್ ಮಾಡಬಹುದು. 100 ರೂಪಾಯಿ ರೀಚಾರ್ಜ್ ಪ್ಲಾನ್ ಸ್ಟ್ರೀಮಿಂಗ್ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ. ಈ ಪ್ಲಾನ್‌ನಲ್ಲಿ ವಾಯ್ಸ್ ಕಾಲ್, ಎಸ್ಎಂಎಸ್ ಸರ್ವೀಸ್ ಇರುವುದಿಲ್ಲ. 

45
Mukesh Ambani

ಇದರ ವ್ಯಾಲಿಟಿಡಿ 90 ದಿನ.  ಹೀಗಾಗಿ 3 ತಿಂಗಳ ಕಾಲ ಜಿಯೋ ಹೋಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚತವಾಗಲಿದೆ. 90 ದಿನಗಳ ಕಾಲ ಯಾವುದೇ ಅಡೆ ತಡೆ ಇಲ್ಲದೆ ಲೈವ್ ಸ್ಟ್ರೀಮ್ ವೀಕ್ಷಿಸಲು ಸಾಧ್ಯವಿದೆ. ಈ ಪ್ಲಾನ್‌ನಲ್ಲಿ 5 ಜಿಬಿ ಡೇಟಾ ಉಟಿತವಾಗಿ ಸಿಗಲಿದೆ. ಹೆಚ್ಚಿನ ಅವ್ಯಕತೆ ಇದ್ದರೆ ಡೇಟಾ ಆ್ಯಡ್ ಆನ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಬೇಸ್ ಪ್ಲಾನ್‌ನಲ್ಲಿರುವ ಡೇಟಾ ಬಳಕೆ ಮಾಡಿಕೊಳ್ಳಬಹುದು.

55

ಹೆಚ್ಟಿನ ಡೇಟಾ ಬಳಕೆ ಮಾಡುವವರು 195 ರೂಪಾಯಿ ಕ್ರಿಕೆಟ್ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ ಮತ್ತಷ್ಟು ಸೌಲಭ್ಯಗಳು ಸಿಗಲಿದೆ. ಈ ಪ್ಲಾನ್‌ನಲ್ಲಿ 90 ದಿನ ಜಿಯೋ  ಹಾಟ್‌ಸ್ಟಾರ್ ಉಚಿತ ಸಬ್‌ಸ್ಕ್ರಿಪ್ಶನ್ ಹಾಗೂ 15 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಹೀಗಾಗಿ ಗ್ರಾಹಕರು ತಮ್ಮ ಅವಶ್ಯಕತೆಗೆ ತಕ್ಕಂತೆ ರೀಚಾರ್ಜ್ ಮಾಡಿಕೊಳ್ಳಬಹುದು.

Read more Photos on
click me!

Recommended Stories