ರಿಲಯನ್ಸ್ ಜಿಯೋ ಭರ್ಜರಿ ಪ್ಲಾನ್, 90 ದಿನ ವ್ಯಾಲಿಟಿಡಿ ಜೊತೆ 200 ಜಿಬಿ ಡೇಟಾ, ಐಪಿಎಲ್ ಉಚಿತ

Published : Jan 16, 2026, 03:17 PM IST

ರಿಲಯನ್ಸ್ ಜಿಯೋ ಭರ್ಜರಿ ಪ್ಲಾನ್, ಸದ್ಯ ಲಭ್ಯವಿರುವ ಉತ್ತಮ ರೀಚಾರ್ಜ್ ಪಾನ್ ಹಾಗೂ ಆಫರ್‌ಗಳಲ್ಲಿ ಜಿಯೋ ಹೊರತಂದ 899 ರೂಪಾಯಿ ಪ್ಲಾನ್ ಮುಂಚೂಣಿಯಲ್ಲಿದೆ. 90 ದಿನ ವ್ಯಾಲಿಟಿಡಿ ಜೊತೆಗೆ 200 ಜಿಬಿ ಉಚಿತ. 

PREV
15
ರಿಲಯನ್ಸ್ ಜಿಯೋ ರೀಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೋ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಪ್ಲಾನ್ ಮೂಲಕ ಗ್ರಾಹಕರ ಹಿಡಿದಿಟ್ಟುಕೊಂಡಿದೆ. ಈಗಾಗಲೇ ಕಡಿಮೆ ಬೆಲೆ, ಗರಿಷ್ಠ ಡೇಟಾ, ಹೈಸ್ಪೀಡ್ ಇಂಟರ್ನೆಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ರಿಲಯನ್ಸ್ ಜಿಯೋ ನೀಡುತ್ತಿದೆ. ಇದರ ನಡುವೆ ರಿಲಯನ್ಸ್ 90 ದಿನಗಳ ವ್ಯಾಲಿಟಿಡಿ ಪ್ಲಾನ್ ಭಾರಿ ಸಂಚಲನ ಸೃಷ್ಟಿಸಿದೆ.

25
899 ರೂಪಾಯಿ ರೀಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೋ ಕೆಲ ತಿಂಗಳ ಹಿಂದೆ 899 ರೂಪಾಯಿ ಪ್ಲಾನ್ ಘೋಷಿಸಿದೆ. ಪ್ರತಿ ತಿಂಗಳ ರೀಚಾರ್ಜ್ ಮಾಡುವು ಕಿರಿಕಿರಿ ಜೊತೆಗೆ ಕಡಿಮೆ ಬೆಲೆಗೆ 90 ದಿನಗಳ ವ್ಯಾಲಿಟಿಡಿ ಲಭ್ಯವಾಗಲಿದೆ. ಸಾಮಾನ್ಯವಾಗಿ ತಿಂಗಳ ರೀಚಾರ್ಜ್‌ನಲ್ಲಿ ಗರಿಷ್ಠ 28 ದಿನ ವ್ಯಾಲಿಟಿಡಿ ಇರಲಿದೆ. ಆದರೆ ಈ ಪ್ಲಾ್ ಮೂಲಕ ಭರ್ಜರಿ 3 ತಿಂಗಳು ವ್ಯಾಲಿಟಿಡಿ ಇರಲಿದೆ.

35
200 ಜಿಬಿ ಉಚಿತ ಡೇಟಾ

ಮೂರು ತಿಂಗಳ ಅವಧಿಗೆ ರಿಲಯನ್ಸ್ ಜಿಯೋ 200 ಜಿಬಿ ಉಚಿತ ಹೈಸ್ಪೀಡ್ ಡೇಟಾ ನೀಡುತ್ತಿದೆ. ಇದರ ಜೊತೆಗೆ ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್ ಸೇರಿದಂತೆ ಇತರ ಸೌಲಭ್ಯಗಳು ಲಭ್ಯವಿದೆ. ಉತಿಚ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರೀಪ್ಶನ್ ಕೂಡ ಈ ರೀಚಾರ್ಜ್ ಮೂಲಕ ಲಭ್ಯವಾಗಲಿದೆ.

45
ಉಚಿತ ಕ್ಲೌಡ್ ಸ್ಟೋರೇಜ್

ಈ ಪ್ಲಾನ್ ಮೂಲಕ ಗ್ರಾಹಕರಿಗೆ ಸಾಮಾನ್ಯ ಡೇಟಾ, ಕಾಲ್ ಆಫರ್ ಮಾತ್ರವಲ್ಲ, ಇದರ ಜೊತೆಗೆ 50 ಜಿಬಿ ಕ್ಲೌಡ್ ಸ್ಟೋರೇಜ್ ಕೂಡ ಲಭ್ಯವಾಗಲಿದೆ. ಇದರಿಂದ ಗ್ರಾಹಕರ ಸ್ಟೋರೇಜ್ ಸಮಸ್ಯೆಗೂ ಉತ್ತರ ಸಿಗಲಿದೆ.

ಉಚಿತ ಕ್ಲೌಡ್ ಸ್ಟೋರೇಜ್

55
ಐಪಿಎಲ್ ಆನಂದಿಸಲು ಉತ್ತಮ ಪ್ಲಾನ್

ಐಪಿಎಲ್ ಟೂರ್ನಿ ಆರಂಭಕ್ಕೆ ತಯಾರಿಗಳು ನಡೆಯುತ್ತಿದೆ. ಜಿಯೋ 899 ರೂಪಾಯಿ ಆಫರ್ ರೀಚಾರ್ಜ್ ಮಾಡಿದರೆ ಗ್ರಾಹಕರು ಉಚಿತವಾಗಿ ಹಾಗೂ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡದೇ ಸಂಪೂರ್ಣ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸಲು ಸಾಧ್ಯವಿದೆ. 2 ತಿಂಗಳ ಐಪಿಎಲ್ ಟೂರ್ನಿಯ ಪ್ರತಿ ದಿನದ ಪಂದ್ಯ ವೀಕ್ಷಿಸಲು ಸಾಧ್ಯವಿದೆ.

ಐಪಿಎಲ್ ಆನಂದಿಸಲು ಉತ್ತಮ ಪ್ಲಾನ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories