ಒಂದೇ ವರ್ಷದಲ್ಲಿ ಎಂಆರ್‌ಪಿಎಲ್‌ ಆದಾಯ 4,119 ಕೋಟಿ ಏರಿಕೆ: ದಾಖಲಿಸಿದ ಒಟ್ಟು ಹಣ ಎಷ್ಟು?

Published : Jan 15, 2026, 12:23 PM IST

ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಮೂರನೇ ತ್ರೈಮಾಸಿಕದಲ್ಲಿ 29,720 ಕೋಟಿ ರೂ. ಆದಾಯ ಮತ್ತು 1,445 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ. ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

PREV
14
ಎಷ್ಟು ಆದಾಯ?

ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಮೂರನೇ ತ್ರೈಮಾಸಿಕ ಅವಧಿಯಲ್ಲಿ ತೈಲಾಗಾರದ ಆಪರೇಷನ್ಸ್‌ನಿಂದ 29,720 ಕೋಟಿ ರು. ಆದಾಯ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 25,601 ಕೋಟಿ ರು. ಆದಾಯ ಗಳಿಸಿತ್ತು.

24
ಈಕ್ವಿಟಿ ರೇಶ್ಯೋದಲ್ಲಿ ಸುಧಾರಣೆ

ಇದರಲ್ಲಿ ತೆರಿಗೆ ಮುಂಚಿನ ಆದಾಯ 2,214 ಕೋಟಿ ರು. ಆಗಿದ್ದು, ಕಳೆದ ಅವಧಿಯಲ್ಲಿ ಇದು 469 ಕೋಟಿ ರು. ಆಗಿತ್ತು. ತೆರಿಗೆಯೇತರದಲ್ಲಿ 1,445 ಕೋಟಿ ರು. ಆದಾಯ ಬಂದಿದ್ದು, ಕಳೆದ ಬಾರಿ 304 ಕೋಟಿ ರು. ಆಗಿತ್ತು. ಕಂಪನಿಯ ಡೆಬಿಟ್‌ ಈಕ್ವಿಟಿ ರೇಶ್ಯೋದಲ್ಲಿ ಸುಧಾರಣೆ ಕಂಡಿದ್ದು, ಕಳೆದ ಬಾರಿ 0.63 ಇದ್ದರೆ, ಈ ಬಾರಿ 0.79 ದಾಖಲಿಸಿದೆ.

34
76,661 ಕೋಟಿ ರು. ಆದಾಯ

ಕಳೆದ ಒಂಭತ್ತು ತಿಂಗಳಲ್ಲಿ ಆಪರೇಷನ್ಸ್‌ನಿಂದ 76,661 ಕೋಟಿ ರು. ಆದಾಯ ದಾಖಲಿಸಿದ್ದು, ಹಿಂದಿನ ಇದೇ ಅವಧಿಯಲ್ಲಿ ಇದು 81,676 ಕೋಟಿ ರು. ಆಗಿತ್ತು. ತೆರಿಗೆ ಪೂರ್ವದಲ್ಲಿ 2,786 ಕೋಟಿ ರು.(ಕಳೆದ ಬಾರಿ 471 ಕೋಟಿ ರು.), ತೆರಿಗೇತರದಲ್ಲಿ 1,812 ಕೋಟಿ ರು.(ಕಳೆದ ಬಾರಿ 313 ಕೋಟಿ ರು.) ಆದಾಯ ದಾಖಲಿಸಿದೆ. 

ಈ ಅವಧಿಯಲ್ಲಿ ಸಾಲ ಪಡೆಯುವಿಕೆಯಲ್ಲಿ ಈ ಬಾರಿ 12,867 ಕೋಟಿ ರು.ನಿಂದ 9,290 ಕೋಟಿ ರು.ಗೆ ಇಳಿಕೆಯಾಗಿದೆ. ಡೆಬಿಟ್‌ ಈಕ್ವಿಟಿ ರೇಶ್ಯೋ ಕೂಡ 0.63 ರಿಂದ 0.99ರ ವರೆಗೆ ಸುಧಾರಣೆಯಾಗಿದೆ.

ಇದನ್ನೂ ಓದಿ: ಕೆಲಸಗಳನ್ನು ವೈಟ್ ಕಾಲರ್, ರೆಡ್ ಕಾಲರ್ ಎಂದು ಬಣ್ಣಗಳಿಂದ ಗುರುತಿಸೋದು ಯಾಕೆ?

44
ಲಿಬಿಯಾದಿಂದ ಕಚ್ಚಾ ತೈಲ ಆಮದು

ಕಚ್ಚಾ ತೈಲ ಸಂಗ್ರಹಣೆ ತ್ರೈಮಾಸಿಕದಲ್ಲಿ 4.70 ಮಿಲಿಯನ್‌ ಮೆಟ್ರಿಕ್‌ ಟನ್‌ ಆಗಿದ್ದು, ಒಂಭತ್ತು ತಿಂಗಳಲ್ಲಿ ಒಟ್ಟು 13.54 ಮಿ.ಮೆ.ಟನ್‌ ಆಗಿದೆ. ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾ ತೈಲ ಆಮದಾಗಿದ್ದು, ಡಿಸೆಂಬರ್‌ 25 ರಂದು ಐಎಸ್‌ಪಿಆರ್‌ನ ಭೂಗತ ತೈಲಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸಲಾಗಿದೆ ಎಂದು ಎಂಆರ್‌ಪಿಎಲ್‌ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಜೀವನ ಪಾಠ ಕಲಿಸಲು 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories