ರಿಲಯನ್ಸ್ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್' ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ 100Mbps ವೇಗದ ಅನ್‌ಲಿಮಿಟೆಡ್ ಇಂಟರ್‌ನೆಟ್, ಹಲವು OTT ಪ್ಲಾಟ್‌ಫಾರಂಗಳ ಚಂದಾದಾರಿಕೆ ಲಭ್ಯವಿದೆ.
ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ನಿರಂತರವಾಗಿ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ಮತ್ತು ಹಾಲಿ ಗ್ರಾಹಕರನ್ನು ಉಳಿಸಿಕೊಳ್ಳಲು ಜಿಯೋ ತನ್ನ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ಫ್ರೀಡಂ ಪ್ಲಾನ್ ಎಂಬ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ.
26
Reliance Jio Freedom Plan
Reliance Jio Freedom Plan ಬಳಕೆದಾರರು ಸೀಮಿತ ಅವಧಿಯವರಗೆ ಹಲವು ಬೆನೆಫಿಟ್ಸ್ ಪಡೆಯಲಿದ್ದಾರೆ. ಹಾಗಾಗಿ ಈ ಪ್ಲಾನ್ ಟೆಲಿಕಾಂ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಬಳಕೆದಾರರು 100Mbps ವರೆಗೆ ಸ್ಪೀಡ್‌ನಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡಬಹುದಾಗಿದೆ. ಪ್ಲಾನ್ ವ್ಯಾಲಿಡಿಟಿವರೆಗೆ ಗ್ರಾಹಕರು ಅನ್‌ಲಿಮಿಟೆಡ್ ಇಂಟರ್‌ನೆಟ್ ಆನಂದಿಸಬಹುದಾಗಿದೆ.
36
ಹಲವು OTT ಪ್ಲಾಟ್‌ಫಾರಂಗಳಿಗೆ ಆಕ್ಸೆಸ್
ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಇಂಟರ್‌ನೆಟ್ ಜೊತೆ ಟಿವಿ ಎಂಟರ್‌ಟೈನ್ಮೆಂಟ್ ಲಾಭ ಸಿಗಲಿದೆ. ಜಿಯೋ ಟಿವಿ ಸೇರಿದಂತೆ OTT ಪ್ಲಾಟ್‌ಫಾರಂಗಳಿಗೆ ಆಕ್ಸೆಸ್ ಪಡೆದುಕೊಳ್ಳಬಹುದಾಗಿದೆ. JioHotstar, SonyLIV, Zee5, Sun NXT, Hoichoi, Discovery+, TimesPlay ಮತ್ತು ShemarooMe ಆಪ್‌ಗಳು ಈ ಪ್ಯಾಕ್‌ನಲ್ಲಿ ಸೇರಿಕೊಂಡಿವೆ.
Freedom Plan ಬಳಕೆದಾರರಿಗೆ ಜಿಯೋದಿಂದ ಸೆಟ್ ಟಾಪ್ ಬಾಕ್ಸ್ ನೀಡಲಾಗುತ್ತದೆ. ನೀವು ಅತ್ಯಧಿಕ ಇಂಟರ್‌ನೆಟ್ ಬಳಕೆ ಮಾಡುತ್ತಿದ್ರೆ, ಆನ್‌ಲೈನ್ ಕಂಟೆಂಟ್ ವರ್ಕರ್ ಆಗಿದ್ರೆ, ವರ್ಕ್ ಫ್ರಂ ಹೋಮ್ ಮಾಡುತ್ತಿದ್ರೆ Freedom Plan ಒಳ್ಳೆಯ ಆಯ್ಕೆಯಾಗುತ್ತದೆ.
56
ವ್ಯಾಲಿಡಿಟಿ ಮತ್ತು ಪ್ಲಾನ್ ಬೆಲೆ
ಈ ಹೊಸ ಪ್ಲಾನ್‌ನ್ನು JioFiber ಮತ್ತು Jio AirFiber ಬಳಕೆದಾರರಿಗೆ ನೀಡಲಾಗಿದೆ. ಗ್ರಾಹಕರು ಅಫಿಷಿಯಲ್ ವೆಬ್‌ಸೈಟ್ ಮತ್ತು MyJio App ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದು. ಈ ಪ್ಲಾನ್ 15 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 10 ಸಾವಿರ ಬೆಲೆಯನ್ನು ನಿಗದಿ ಮಾಡಲಾಗಿದೆ.
66
ಏರ್‌ಟೆಲ್ ತತ್ತರ
ಜಿಯೋ ನೀಡುತ್ತಿರುವ ಈ ಹೊಸ Freedom Planಗೆ Bharti Airtel ತತ್ತರವಾಗಿದೆ. ಏರ್ಟೆಲ್ ತನ್ನ ಗ್ರಾಹಕರಿಗೆ 499 ರೂಪಾಯಿ ಬ್ರಾಡ್‌ಬ್ಯಾಂಡ್ ನಲ್ಲಿ 40mbps ಸ್ಪೀಡ್ ಇಂಟರ್‌ನೆಟ್ ನೀಡುತ್ತದೆ. ಈ ಪ್ಲಾನ್ 1 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಸ್ಪೀಡ್ ಕಡಿಮೆಯಾಗಿರುವ ಕಾರಣ ಏರ್‌ಟೆಲ್‌ಗೆ ಜಿಯೋ ಹೊಸ ಪ್ಲಾನ್‌ಗೆ ಕಂಟಕವಾಗಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.