ಮುಕೇಶ್ ಅಂಬಾನಿ ಗೂಗ್ಲಿಗೆ ಅಮೆರಿಕ ಥಂಡಾ, ಜಿಯೋ ಇದೀಗ ವಿಶ್ವದ ನ. 1 FWA ಪೂರೈಕೆದಾರ

Published : Jul 21, 2025, 07:36 PM ISTUpdated : Jul 21, 2025, 07:47 PM IST

ಮುಕೇಶ್ ಅಂಬಾನಿ ಬ್ಯೂಸಿನೆಸ್ ಪ್ಲಾನ್‌ಗೆ ಅಮೆರಿಕ ಕೂಡ ನಡುಗಿದೆ. ಕಾರಣ ಇದೀಗ ಜಿಯೋ ವಿಶ್ವದ ನಂಬರ್ 1 ಫಿಕ್ಸೆಡ್ ವೈರ್ಲೆಸ್ ಆಕ್ಸೆಸ್ ಪೂರೆದಾರನಾಗಿ ಹೊರಹೊಮ್ಮಿದೆ. ಅಮೆರಿಕದ ಅತೀ ದೊಡ್ಡ ನೆಟ್‌ವರ್ಕ್ ಟಿ ಮೊಬೈಲ್‌ನ್ನು ಹಿಂದಿಕ್ಕಿದೆ. 

PREV
15

ಮುಕೇಶ್ ಅಂಬಾನಿ ಜಿಯೋ ಮೂಲಕ ಹಲವು ಕ್ರಾಂತಿ ಮಾಡಿದ್ದಾರೆ. ಭಾರತದಲ್ಲಿ ಡೇಟಾ ಕ್ರಾಂತಿ ಮಾಡಿ ಪ್ರತಿಯೊಬ್ಬರು ಚಿಂತೆ ಇಲ್ಲದ ಡೇಟಾ ಬಳಕೆ ಮಾಡುವಂತೆ ಮಾಡಿದ್ದು ಮುಕೇಶ್ ಅಂಬಾನಿ ಜಿಯೋ. ಇದೀಗ ಜಿಯೋ ಫಿಕ್ಸೆಡ್ ವೈರ್ಲೆಸ್ ಆಕ್ಸೆಸ್ (FWA)ಸೇವಾ ಕ್ಷೇತ್ರದಲ್ಲಿ ನಂಬರ್ 1 ಕಂಪನಿಯಾಗಿ ಹೊರಹೊಮ್ಮಿದೆ. 74 ಲಕ್ಷಕ್ಕೂ ಹೆಚ್ಚು ಗ್ರಾಹಕರು ಜಿಯೋದ ಎಫ್‌ಡಬ್ಲ್ಯೂಎ ಸೇವೆಗೆ ಸಂಪರ್ಕ ಹೊಂದಿದ್ದಾರೆ. ರಿಲಯನ್ಸ್ ಜಿಯೋ ಈಗ ಅಮೆರಿಕದ ಟಿ-ಮೊಬೈಲ್ ಕಂಪನಿಯನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ತಲುಪಿದೆ. ರಿಲಯನ್ಸ್ ಜಿಯೋ ತನ್ನ ಜಿಯೋ ಏರ್ ಫೈಬರ್ ಸೇವೆಯನ್ನು ಎಫ್‌ಡಬ್ಲ್ಯೂಎ ಅಡಿಯಲ್ಲಿ ನೀಡಲಾಗುತ್ತಿದೆ.

25

ರಿಲಯನ್ಸ್ ಇಂಡಸ್ಟ್ರೀಸ್‌ನ ತ್ರೈಮಾಸಿಕ ಫಲಿತಾಂಶದಲ್ಲಿ ಮುಖೇಶ್ ಅಂಬಾನಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಜಿಯೋ ಏರ್ ಫೈಬರ್ ಜೊತೆಗೆ, ಜಿಯೋ ಫೈಬರ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಜಿಯೋ 2 ಕೋಟಿಗೂ ಹೆಚ್ಚು ಕ್ಯಾಂಪಸ್‌ಗಳನ್ನು ಸಂಪರ್ಕಿಸಿದೆ.

35

21.3 ಕೋಟಿಗೂ ಹೆಚ್ಚು ಗ್ರಾಹಕರು ಜಿಯೋ ಟ್ರೂ 5ಜಿ ನೆಟ್ವರ್ಕ್‌ಗೆ ಸೇರಿದ್ದಾರೆ. ಕಂಪನಿಯು ಆರ್ಥಿಕ ಶಕ್ತಿಯಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದೆ. ಜಿಯೋದ ಮಾಸಿಕ ಸರಾಸರಿ ಆದಾಯವು 208.8 ರೂ.ಗೆ ಏರಿದರೆ, ಕಂಪನಿಯ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 24.8% ರಷ್ಟು ಏರಿಕೆಯಾಗಿ 7,110 ಕೋಟಿ ರೂ.ಗೆ ತಲುಪಿದೆ.

45

ನಮ್ಮ ಡಿಜಿಟಲ್ ಸೇವೆಗಳ ವ್ಯವಹಾರವು ಸ್ಥಿರವಾಗಿದ್ದು, ಬಲವಾದ ಹಣಕಾಸು ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯೊಂದಿಗೆ ತನ್ನ ಮಾರುಕಟ್ಟೆ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ. ಮೊಬಿಲಿಟಿ, ಬ್ರಾಡ್ ಬ್ಯಾಂಡ್, ಎಂಟರ್ಪ್ರೈಸ್ ಕನೆಕ್ಟಿವಿಟಿ, ಕ್ಲೌಡ್ ಮತ್ತು ಸ್ಮಾರ್ಟ್ ಹೋಮ್‌ಗಳಲ್ಲಿ ವೈವಿಧ್ಯಮಯ ಕೊಡುಗೆಗಳನ್ನು ನೀಡುವ ಮೂಲಕ ಜಿಯೋ ಕಂಪನಿಯನ್ನು ವಿಶ್ವಾಸಾರ್ಹ ಭಾರತೀಯ ತಂತ್ರಜ್ಞಾನ ಗ್ರಾಹಕ ಪಾಲುದಾರನಾಗಿ ಮಾಡಿದೆ ಎಂದಿದ್ದಾರೆ.

55

ಜೂನ್ 30, 2025 ರ ಹೊತ್ತಿಗೆ, ಒಟ್ಟು 49.81 ಕೋಟಿಗೂ ಹೆಚ್ಚು ಚಂದಾದಾರರು ಜಿಯೋ ನೆಟ್ವರ್ಕ್‌ಗೆ ಸಂಪರ್ಕ ಹೊಂದಿದ್ದಾರೆ. ಇದೇ ತ್ರೈಮಾಸಿಕದಲ್ಲಿ, ಕಂಪನಿಯು ನಿವ್ವಳ ಆಧಾರದ ಮೇಲೆ 99 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ತ್ರೈಮಾಸಿಕದಲ್ಲಿ, ಪ್ರತಿ ಗ್ರಾಹಕನ ಡೇಟಾ ಬಳಕೆಯು ತಿಂಗಳಿಗೆ 37 ಜಿಬಿ ಆಗಿತ್ತು. ಜಿಯೋದ ಒಟ್ಟು ಡೇಟಾ ಟ್ರಾಫಿಕ್ ಸಹ ಶೇಕಡಾ 24 ರಷ್ಟು ಏರಿಕೆಯಾಗಿ 54.7 ಬಿಲಿಯನ್ ಜಿಬಿಗೆ ತಲುಪಿದೆ.

Read more Photos on
click me!

Recommended Stories