ದಿವಂಗತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರನ್ನು ಭಾರತದ 'ಬಿಗ್ ಬುಲ್' ಎಂದೇ ಕರೆಯಲಾಗುತ್ತಿತ್ತು. ಅವರು ಪ್ರಭಾವಶಾಲಿ ಸ್ಟಾಕ್ ಪೋರ್ಟ್‌ಫೋಲಿಯೋವನ್ನು ಹೊಂದಿದ್ದರು. ಇನ್ನು, ಅವರ ನಿಧನದ ನಂತರ, ಅವರ ಪತ್ನಿ ರೇಖಾ ಜುನ್‌ಜುನ್‌ವಾಲಾ ಅವರು ಕುಟುಂಬದ ಹೂಡಿಕೆ ಸಾಮ್ರಾಜ್ಯವನ್ನು ನಿರ್ಮಿಸುವುದನ್ನು ಮುಂದುವರೆಸಿದ್ದಾರೆ. ಇವರು ಸಹ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಇದಕ್ಕೆ ಕಾರಣವೂ ಹೂಡಿಕೆ ಹಾಗೂ ಆದಾಯ ಹೆಚ್ಚಳ. ಇತ್ತೀಚೆಗೆ ಟಾಟಾ-ಮಾಲೀಕತ್ವದ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆದಿದ್ದಾರೆ. ಇತ್ತೀಚೆಗೆ ತಮ್ಮ ಪೋರ್ಟ್‌ಫೋಲಿಯೊದಲ್ಲಿನ ಪ್ರಮುಖ ಸ್ಟಾಕ್‌ಗಳಲ್ಲಿ ಒಂದಾದ ಟಾಟಾ ಕಂಪನಿಯ ಈ ಷೇರಿನಿಂದ ಒಂದು ತಿಂಗಳಲ್ಲಿ 1390 ಕೋಟಿ ರೂ. ಲಾಭಗಳಿಸಿದ್ದಾರೆ.
ಉದ್ಯಮಿ ರತನ್ ಟಾಟಾ ಅವರ ನೇತೃತ್ವದಲ್ಲಿದ್ದ ಟಾಟಾ ಗ್ರೂಪ್ ಒಡೆತನದ ವಾಚ್ ಕಂಪನಿ ಟೈಟಾನ್ ಕಂಪನಿ ಲಿಮಿಟೆಡ್‌ನಿಂದ ರೇಖಾ ಜುಂಜುನ್ವಾಲಾ 1390 ಕೋಟಿ ರೂ. ಲಾಭ ಗಳಿಸಿದ್ದಾರೆ. ಟೈಟಾನ್ ರೇಖಾ ಜುಂಜುನ್ವಾಲಾ ಅವರ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಲಾಭದಾಯಕ ಷೇರುಗಳಲ್ಲಿ ಒಂದಾಗಿದ್ದು, ಮಾರ್ಚ್ 2023 ರಿಂದ ಹೆಚ್ಚು ಲಾಭದಲ್ಲಿದೆ. ಈ ಕಾರಣದಿಂದ ಎಲ್ಲಾ ಹೂಡಿಕೆದಾರರು ಪ್ರಮುಖ ಆದಾಯ ಪಡೆಯುತ್ತಿದ್ದಾರೆ. ಟಾಟಾ ಗ್ರೂಪ್ ಕಂಪನಿಯ ಈ ಸ್ಟಾಕ್ ಮಾರ್ಚ್ ಮಧ್ಯದಲ್ಲಿ ಸುಮಾರು 2,355 ರ ಮಟ್ಟಕ್ಕೆ ಇಳಿಕೆಯಾಗಿತ್ತು. ಆದರೆ ನಂತರ ಹೆಚ್ಚು ಚೇತರಿಸಿಕೊಂಡಿದೆ.
ಈಗ ರೇಖಾ ಜುನ್‌ಜುನ್ವಾಲಾ ಪೋರ್ಟ್‌ಫೋಲಿಯೊ ಸ್ಟಾಕ್ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಎತ್ತರವನ್ನು ಕಾಣುತ್ತಿದ್ದು, ಒಂದು ಷೇರಿನ ಮೌಲ್ಯ 3300 ರೂ. ಗೆ ಮಾರಾಟವಾಗ್ತಿದೆ. ಟೈಟಾನ್‌ನ ಷೇರಿನ ಬೆಲೆಯು ಕಳೆದ ತಿಂಗಳ ಅವಧಿಯಲ್ಲಿ ಪ್ರತಿ ಷೇರಿಗೆ 3,010.65 ರೂ.ಗಳಿಂದ 3,302.45 ರೂ.ಗೆ ಏರಿಕೆಯಾಗಿದ್ದು, ಬೃಹತ್ ಬೆಳವಣಿಗೆಯನ್ನು ಕಂಡಿದೆ.
ಕಳೆದ ತಿಂಗಳ ಅವಧಿಯಲ್ಲಿ ಟೈಟಾನ್ ಕಂಪನಿಯ ಷೇರಿನ ಬೆಲೆಯಲ್ಲಿನ ಭಾರಿ ಏರಿಕೆಯಾಗಿದೆ. ಇದರಿಂದ ರೇಖಾ ಜುಂಜುನ್‌ವಾಲಾ ಅವರು ಕೇವಲ 30 ದಿನಗಳಲ್ಲಿ 1390 ಕೋಟಿ ರೂಪಾಯಿಗಳನ್ನು ಗಳಿಸುವಂತೆ ಮಾಡಿದ್ದು, ಇದು ಅವರ ಪ್ರಭಾವಶಾಲಿ ಮತ್ತು ಭಾರಿ ಲಾಭದಾಯಕ ಸ್ಟಾಕ್ ಪೋರ್ಟ್‌ಫೋಲಿಯೋ ಆಗಿದೆ.
ರೇಖಾ ಜುಂಜುನ್‌ವಾಲಾ ಅವರು ಟೈಟಾನ್ ಕಂಪನಿಯ 4,75,95,970 ಷೇರುಗಳನ್ನು ಹೊಂದಿದ್ದಾರೆ. ಇದು ಕಂಪನಿಯ ಒಟ್ಟು ಷೇರುಗಳ 5.36 ಪ್ರತಿಶತವಾಗಿದೆ. ಪ್ರತಿ ಟೈಟಾನ್ ಷೇರು ಮೌಲ್ಯ 291.80 ರೂ.ಗಳಷ್ಟು ಏರಿಕೆಯಿಂದಾಗಿ, ರೇಖಾ ಜುಂಜುನ್ವಾಲಾ ಅವರ ನಿವ್ವಳ ಮೌಲ್ಯವು 1390 ಕೋಟಿ ರೂ.ಗಳಷ್ಟು (4,75,95,970 x 291.80) ಹೆಚ್ಚಾಗಿದೆ ಎಂದು ತಿಳಿದುಬಂದಿದೆ.