ಅಂಬಾನಿ, ಅದಾನಿ, ಪ್ರೇಮ್‌ಜಿ ಅರ್ಧದಲ್ಲೇ ಶಿಕ್ಷಣ ತೊರೆದವರು!

First Published | Sep 11, 2023, 5:21 PM IST

ಭಾರತದಲ್ಲಿನ ಕೆಲವು ವ್ಯಕ್ತಿಗಳು ತಮ್ಮ ಬ್ಯುಸಿನೆಸ್‌ನಿಂದಾಗಿ ಮತ್ತು ಶ್ರೀಮಂತಿಕೆಯಿಂದಾಗಿ ದೇಶ -ವಿದೇಶಾದಾದ್ಯಂತ ತುಂಬಾನೆ ಜನಪ್ರಿಯತೆ ಪಡೆದಿದ್ದಾರೆ. ಈ ಕೋಟ್ಯಾಧಿಪತಿಗಳಲ್ಲಿ ಕೆಲವರು ಅರ್ಧದಲ್ಲಿ ವಿದ್ಯಾಭ್ಯಾಸ ಕೊನೆಗೊಳಿಸಿದವರೂ ಇದ್ದಾರೆ, ಇನ್ನೂ ಕೆಲವರು ಶಾಲೆಯ ವಿದ್ಯಾಭ್ಯಾಸವನ್ನೆ ಸರಿಯಾಗಿ ಮಾಡಿಲ್ಲ. ಅವರ ಬಗ್ಗೆ ತಿಳಿಯೋಣ. 
 

ವಿದ್ಯೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಮುಖ್ಯ ಅನ್ನೋದನ್ನು ನಾವು ಬಾಲ್ಯದಲ್ಲಿರೋವಾಗ್ಲೇ ಹಿರಿಯರು ನಮಗೆ ಹೇಳಿರ್ತಾರೆ. ಉತ್ತಮ ವಿದ್ಯಾಭ್ಯಾಸ ಇಲ್ಲದೇ ಜೀವನದಲ್ಲಿ ಏನು ಸಾಧಿಸಲು ಸಹ ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ವಿದ್ಯಾಭ್ಯಾಸ ಪೂರ್ತಿ ಮಾಡದೇ, ಕರಿಯರ್ ನಲ್ಲಿ ಉತ್ತುಂಗಕ್ಕೆ ಏರಿ, ವಿಶ್ವಾದ್ಯಂತ ಜನಪ್ರಿಯರಾಗಿರುವ ಹಲವು ಕೋಟ್ಯಾಧಿಪತಿಗಳು (billionaires) ನಮ್ಮಲ್ಲೇ ಇದ್ದಾರೆ, ಬನ್ನಿ ಅವರ ಬಗ್ಗೆ ತಿಳಿಯೋಣ. 
 

ಅನಿಲ್ ಅಗರ್ವಾಲ್  (Anil Agarwal)
ಅನಿಲ್ ಅಗರ್ವಾಲ್ ಭಾರತದ ಖ್ಯಾತ ಬ್ಯುಸಿನೆಸ್ ಮೆನ್ ಗಳಲ್ಲಿ ಒಬ್ಬರು. ಇವರು ವೇದಾಂತ ರಿಸೋರ್ಸಸ್ ನ ಸ್ಥಾಪಕ. ಇವರನ್ನು ಮೆಟಲ್ ಕಿಂಗ್ ಎಂದೇ ಕರೆಯಲಾಗುತ್ತೆ. ಆದರೆ ಇವರು ಹೈಸ್ಕೂಲ್ ಶಿಕ್ಷಣ ಕೂಡ ಪೂರ್ತಿ ಮಾಡಿಲ್ಲ ಗೊತ್ತಾ? ಇವರು ತಂದೆಯ ಜೊತೆಗೆ ಬ್ಯುಸಿನೆಸ್ ಮಾಡಿ ಇಂದು ಕೋಟ್ಯಾಧಿಪತಿಗಳಾಗಿದ್ದಾರೆ.

Tap to resize

ಅಜೀಂ ಪ್ರೇಮ್ ಜೀ (Azim Premji)
ಭಾರತದ ಐಟಿ ಕ್ಷೇತ್ರದಲ್ಲಿ ಮಹಾ ಸಾಧನೆ ಮಾಡಿರುವ ಬ್ಯುಸಿನೆಸ್ ಮ್ಯಾನ್ ಮತ್ತು ದಾನಿಯಾಗಿರುವ ಅಜೀಂ ಪ್ರೇಮ್ ಜೀ ಕೋಟ್ಯಾಧಿಪತಿ ಅನ್ನೋದು ಗೊತ್ತೇ ಇದೆ. ಇವರು ವಿಪ್ರೋ ಸಂಸ್ಥೆಯ ಚೇರ್ ಮೇನ್ ಕೂಡ ಆಗಿದ್ದರು. ಇವರ ತಂದೆ ತೀರಿಕೊಂಡಾಗ ವಿದೇಶದಲ್ಲಿ ಪದವಿ ಪಡೆಯುತ್ತಿದ್ದ ಇವರು, ಅರ್ಧದಲ್ಲೇ ಅದನ್ನು ಬಿಟ್ಟು, ತಂದೆಯ ಕೆಲಸವನ್ನು ಮುನ್ನಡೆಸಿದರು.

ಗೌತಮ್ ಅದಾನಿ (Gautam Adani)
ಗೌತಮ್ ಶಾಂತಿಲಾಲ್ ಅದಾನಿ ಇವರು ಭಾರತದ ಬಿಲೇನಿಯರ್ ಇಂಡಸ್ಟ್ರಿಯಲಿಸ್ಟ್. ಇವರು ಅದಾನಿ ಗ್ರೂಪ್ಸ್ ನ ಸ್ಥಾಪಕ ಚೇರ್ ಮ್ಯಾನ್ ಕೂಡ ಹೌದು. ಗೌತಮ್ ಅದಾನಿ ತಮ್ಮ ಬ್ಯುಸಿನೆಸ್ ಗಾಗಿ ಗ್ರಾಜುಯೇಶನ್ ಅರ್ಧದಲ್ಲೇ ಬಿಟ್ಟರು ಎಂದು ಹೇಳಲಾಗುತ್ತದೆ.

ನಿತಿನ್ ಕಾಮತ್ (Nitin Kamath)
ಝೆರೋಧಾ ದ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿರುವ ನಿತಿನ್ ಕಾಮತ್ ಬಿಲೇನಿಯರ್. ಝೆರೋಧಾ ಆಲ್ನ್ ಲೈನ್ ಸ್ಟಾಕ್ ಟ್ರೇಡಿಂಗ್ ಸಂಸ್ಥೆಯಾಗಿದೆ. ಇವರು ತಮ್ಮ 17ನೇ ವಯಸ್ಸಿನಲ್ಲಿ ವಿದ್ಯಾಬ್ಯಾಸಕ್ಕೆ ಗುಡ್ ಬೈ ಹೇಳಿ, ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. 

ಮುಖೇಶ್ ಅಂಬಾನಿ (Mukesh Ambani)
ವಿಶ್ವಾದ್ಯಂತದ ಬಿಲೇನಿಯರ್ ಗಳ ಸಾಲಿನಲ್ಲಿ ಕೇಳಿ ಬರುವಂತಹ ಹೆಸರು ಮುಖೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥರಾಗಿರುವ ಮುಖೇಶ್ ಅಂಬಾನಿ ಬ್ಯುಸಿನೆಸ್ ನಲ್ಲಿ ಏನಾದರೂ ಸಾಧನೆ ಮಾಡುವ ಹಿನ್ನೆಲೆಯಲ್ಲಿ ಸ್ಟ್ಯಾನ್ ಫಾರ್ಡ್ ಯುನಿವರ್ಸಿಟಿಯಲ್ಲಿ ಎಂಬಿಎ ಕಲಿಯುತ್ತಿದ್ದವರು ಅರ್ಧದಲ್ಲಿ ಬಿಟ್ಟು ಬಂದಿದ್ದರು. 

Latest Videos

click me!