G20 ಸಭೆಯಲ್ಲಿ ಮೋದಿ ಗೆಲುವು, ಹೂಡಿಕೆಯಲ್ಲಿ ಅದಾನಿ ಕಂಪನಿ ಗೆಲುವು: ಒಂದೇ ದಿನದಲ್ಲಿ 3.4 ಲಕ್ಷ ಕೋಟಿ ಲಾಭ

Published : Sep 11, 2023, 07:24 PM ISTUpdated : Sep 11, 2023, 07:28 PM IST

ಜಿ20 ಶೃಂಗಸಭೆ ಬಳಿಕ ಇಂದು ಮೊದಲ ಬಾರಿ ಷೇರು ಮಾರುಕಟ್ಟೆ ವಹಿವಾಟು ನಡೆದಿದ್ದು, ಭರ್ಜರಿ ಲಾಭ ಕಂಡಿದೆ. ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಸಹ ದೊಡ್ಡ ಲಾಭದೊಂದಿಗೆ ಅಂತ್ಯಗೊಂಡಿದೆ.

PREV
18
G20 ಸಭೆಯಲ್ಲಿ ಮೋದಿ ಗೆಲುವು, ಹೂಡಿಕೆಯಲ್ಲಿ ಅದಾನಿ ಕಂಪನಿ ಗೆಲುವು: ಒಂದೇ ದಿನದಲ್ಲಿ 3.4 ಲಕ್ಷ ಕೋಟಿ ಲಾಭ

ಜಿ20 ಶೃಂಗಸಭೆ ಬಳಿಕ ಇಂದು ಮೊದಲ ಬಾರಿ ಷೇರು ಮಾರುಕಟ್ಟೆ ವಹಿವಾಟು ನಡೆದಿದ್ದು, ಭರ್ಜರಿ ಲಾಭ ಕಂಡಿದೆ. ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಸಹ ದೊಡ್ಡ ಲಾಭದೊಂದಿಗೆ ಅಂತ್ಯಗೊಂಡಿದೆ. ನಿಫ್ಟಿ ಇದೇ ಮೊದಲ ಬಾರಿಗೆ 20 ಸಾವಿರ ಗಟಿ ದಾಟಿದ್ರೆ ಸೆನ್ಸೆಕ್ಸ್ 67,000 ಗಡಿ ದಾಟಿದೆ.  

28

ಸೋಮವಾರದ ದಿನದ ವಹಿವಾಟಿನಲ್ಲಿ ತನ್ನ ಹೊಸ ದಾಖಲೆಯ 20,008.15 ಅನ್ನು ನಿಫ್ಟಿ ತಲುಪಿದೆ. ನಿಫ್ಟಿಯ ಕೊನೆಯ ಸಾರ್ವಕಾಲಿಕ ಗರಿಷ್ಠ ಮಟ್ಟವು 19,991.85 ಆಗಿತ್ತು, ಇದು ಈ ವರ್ಷ ಜುಲೈ 20 ರಂದು ತಲುಪಿದ್ದು, 36 ಸೆಷನ್‌ಗಳ ನಂತರ ಹೊಸ ಉತ್ತುಂಗಕ್ಕೇರಿದೆ.

38

ಇನ್ನೊಂದೆಡೆ, ಈ ವರ್ಷ ಜುಲೈ 20 ರಂದು ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 67,619.17 ಅನ್ನು ತಲುಪಿದ್ದು, ಪ್ರಸ್ತುತ ಈ ಮಟ್ಟದಿಂದ 492 ಸೂಚ್ಯಂಕ ಕಡಿಮೆ ಇದೆ. 

48

ಜಿ20 ಎಫೆಕ್ಟ್‌
ಜಿ 20 ಶೃಂಗಸಭೆಯ ನಂತರ ನಿಫ್ಟಿ ಹೊಸ ಎತ್ತರ ತಲುಪಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಜಿ 20 ದೆಹಲಿ ಘೋಷಣೆಯ ಅಂಗೀಕಾರವು ಭಾರತದ ಬೆಳೆಯುತ್ತಿರುವ ರಾಜತಾಂತ್ರಿಕ ಶಕ್ತಿಯನ್ನು ಒತ್ತಿಹೇಳಿದ್ದು, ಮಾರುಕಟ್ಟೆಯ ಭಾವನೆಗೆ ಉತ್ತೇಜನ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

58

G20 ದೆಹಲಿ ಘೋಷಣೆ ಮತ್ತು ಭಾರತದ ರಾಜತಾಂತ್ರಿಕ ವಿಜಯವು ಸಕಾರಾತ್ಮಕ ಮಾರುಕಟ್ಟೆ ಮನಸ್ಥಿತಿ ಮತ್ತು ಆವೇಗದ ಮುಂದುವರಿಕೆಗೆ ಕಾರಣವಾಗಬಹುದು. ಹೆಚ್ಚು ಮುಖ್ಯವಾಗಿ, G20 ಯಲ್ಲಿ ಆಫ್ರಿಕನ್ ಒಕ್ಕೂಟದ ಸೇರ್ಪಡೆ ಮತ್ತು ಭಾರತ- ಮಧ್ಯಪ್ರಾಚ್ಯ - ಯೂರೋಪ್ ಕಾರಿಡಾರ್ ಧನಾತ್ಮಕ ಆರ್ಥಿಕ ಮತ್ತು ಮಾರುಕಟ್ಟೆ ಅರ್ಥಗಳನ್ನು ಹೊಂದಿದೆ.  ವಿಶಾಲವಾದ ಧನಾತ್ಮಕ ಜಾಗತಿಕ ಸೂಚನೆಗಳು ಸಹ ಹೆಚ್ಚು ಹೂಡಿಕೆಗೆ ಕಾರಣವಾಗಿದೆ.

68

ಷೇರು ಮಾರುಕಟ್ಟೆಯಲ್ಲಿ ಗೂಳಿಯ ಜಿಗಿತ
ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸತತ ಏಳನೇ ಅವಧಿಗೆ ತಮ್ಮ ಗೆಲುವಿನ ಸರಣಿಯನ್ನು ವಿಸ್ತರಿಸಿದವು. ಸೆಪ್ಟೆಂಬರ್‌ನಲ್ಲಿ ಇಲ್ಲಿಯವರೆಗೆ, ಸುಮಾರು ಶೇಕಡಾ 4 ರಷ್ಟು ಲಾಭ ಗಳಿಸಿದೆ. ಇನ್ನು, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಮ್ಮ ದಾಖಲೆಯ ಅಬ್ಬರವನ್ನು ಮುಂದುವರಿಸಿವೆ. 
 

78

BSE ಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಸಹ ಹೆಚ್ಚಾಗಿದೆ. ಈ ಹಿಂದಿನ ಅಧಿವೇಶನದಲ್ಲಿ 320.9 ಲಕ್ಷ ಕೋಟಿ ರೂ. ಇದ್ದ ಬಂಡವಾಳ ಸುಮಾರು  324.3 ಲಕ್ಷ ಕೋಟಿ ರೂ. ಗೆ ಏರಿದೆ. ಈ ಮೂಲಕ ಹೂಡಿಕೆದಾರರನ್ನು ಒಂದೇ ಅವಧಿಯಲ್ಲಿ ಸುಮಾರು 3.4 ಲಕ್ಷ ಕೋಟಿ ರೂ. ಗಳಷ್ಟು ಶ್ರೀಮಂತರನ್ನಾಗಿ ಮಾಡಿದೆ.

88

ಅದಾನಿ ಕಂಪನಿಗಳಿಗೆ ಭರ್ಜರಿ ಲಾಭ!
ಇಂದು ನಿಫ್ಟಿ ಸೂಚ್ಯಂಕದಲ್ಲಿ ಕೋಲ್ ಇಂಡಿಯಾ, ಬಜಾಜ್ ಫೈನಾನ್ಸ್, ಒಎನ್‌ಜಿಸಿ ಮತ್ತು ಲಾರ್ಸೆನ್ ಆಂಡ್ ಟೂಬ್ರೋ ಹೊರತುಪಡಿಸಿ ಉಳಿದ ಎಲ್ಲ ಷೇರುಗಳ ಮೌಲ್ಯ ಹೆಚ್ಚಾಗಿದೆ. ಅದಾನಿ ಪೋರ್ಟ್ಸ್ ಷೇರುಗಳು ಶೇಕಡಾ 7.10 ರಷ್ಟು ಜಿಗಿದಿದ್ದು, ಟಾಪ್ ಗೇನರ್ ಆಗಿದೆ. ನಂತರದ ಸ್ಥಾನದಲ್ಲಿ ಅದಾನಿ ಎಂಟರ್‌ಪ್ರೈಸಸ್ (ಶೇ. 3.68) ಮತ್ತು ಆಕ್ಸಿಸ್ ಬ್ಯಾಂಕ್ (ಶೇ. 2.32) ಷೇರುಗಳು ಅನುಸರಿಸಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories