ಜಗತ್ತಿನ 6ನೇ ಅತಿದೊಡ್ಡ ಶ್ರೀಮಂತರಾಗಿದ್ದ ಅನಿಲ್ ಅಂಬಾನಿ ದಿವಾಳಿಯಾಗಿದ್ದು ಆ ಒಂದು ತಪ್ಪಿನಿಂದ!

First Published | Nov 6, 2023, 12:31 PM IST

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ಹಿಂದೊಮ್ಮೆ ಮುಕೇಶ್ ಅಂಬಾನಿ ಸಹೋದರ, ಅನಿಲ್ ಅಂಬಾನಿ ಇವರಿಗಿಂತಲೂ ಹೆಚ್ಚು ಶ್ರೀಮಂತರಾಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ? ಇವರ ಉದ್ಯಮ ದಿಢೀರ್‌ ಎಂದು ನೆಲಕಚ್ಚಿ ಕೋಟಿ ಕೋಟಿ ನಷ್ಟವಾಗಿದ್ಹೇಗೆ. ಇಲ್ಲಿದೆ ಮಾಹಿತಿ.

ವಿಶ್ವದ ಅತೀ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿಯ ಬಗ್ಗೆ ಗೊತ್ತಿಲ್ಲದೇ ಇರುವವರೇ ಇಲ್ಲ. 90 ಶತಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ಹಿಂದೊಮ್ಮೆ ಮುಕೇಶ್ ಅಂಬಾನಿ ಸಹೋದರ, ಅನಿಲ್ ಅಂಬಾನಿ ಇವರಿಗಿಂತಲೂ ಹೆಚ್ಚು ಶ್ರೀಮಂತರಾಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

ಹೌದು, ಬೃಹತ್‌ ಕೈಗಾರಿಕೋದ್ಯಮಿ ಧೀರೂಭಾಯಿ ಅಂಬಾನಿ ಅವರ ಕಿರಿಯ ಮಗ ಅನಿಲ್ ಅಂಬಾನಿ, ಮುಕೇಶ್ ಅಂಬಾನಿಗಿಂತಲೂ ದೊಡ್ಡ ಮಟ್ಟದಲ್ಲಿ ವ್ಯವಹಾರಗಳನ್ನು ನಡೆಸುತ್ತಿದ್ದರು. ಆದರೆ ಈಗ ಹಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ನಿವ್ವಳ ಮೌಲ್ಯವು ಈಗ ಶೂನ್ಯವಾಗಿದೆ ಎಂದು ಅವರೇ ತಿಳಿಸಿದ್ದರು.

Tap to resize

ಒಂದು ಕಾಲದಲ್ಲಿ ಬಿಲಿಯನೇರ್‌ಗಳ ಟಾಪ್‌ ಲಿಸ್ಟ್‌ನಲ್ಲಿದ್ದ ಅನಿಲ್ ಅಂಬಾನಿಯವರ ಸಾಮ್ರಾಜ್ಯದ ಪತನದ ಹಿಂದಿನ ಕಾರಣಗಳೇನು ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸುವ ವಿಷಯವಾಗಿದೆ. ಈ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳಿವೆ. ಒಂದು ವರ್ಷದಲ್ಲಿ 30 ಬಿಲಿಯನ್ ಗಳಿಸುವುದರಿಂದ ಹಿಡಿದು ದಿವಾಳಿಯಾಗುವ ವರೆಗೆ ಅನಿಲ್ ಅಂಬಾನಿ ಹಲವು ಹಂತಗಳನ್ನು ದಾಟಿ ಬಂದಿದ್ದಾರೆ.

ಅನಿಲ್ ಅಂಬಾನಿಗೆ ದಕ್ಷಿಣ ಆಫ್ರಿಕಾ ಮೂಲದ ಟೆಲಿಕಾಂ ಕಂಪನಿಯಾದ MTN ನೊಂದಿಗೆ ಪ್ರಸ್ತಾಪಿಸಲಾದ ವ್ಯಾಪಾರ ಒಪ್ಪಂದವು ಮೊದಲ ದೊಡ್ಡ ಹಿನ್ನಡೆಯಾಗಿದೆ. ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ಸ್ ಒಂದು ಕಾಲದಲ್ಲಿ ಭಾರತದಲ್ಲಿ ಪ್ರಮುಖ ಮೊಬೈಲ್ ಸೇವಾ ಪೂರೈಕೆದಾರರಾಗಿದ್ದರು. 

ಆದರೆ ಅವರು ಹೆಚ್ಚುತ್ತಿರುವ ಸಾಲಗಳ ನಡುವೆ MTN ನೊಂದಿಗೆ ತಮ್ಮ ಕಂಪೆನಿಯನ್ನು ವಿಲೀನ ಮಾಡಿಕೊಳ್ಳಬೇಕಾಯಿತು. ಸಾಲದ ಹೊರೆಯಿಂದ ಹೊರಬಂದು ಮತ್ತೊಂದು ದೊಡ್ಡ ಕಂಪೆನಿಯನ್ನು ನಿರ್ಮಿಸುವ ಯೋಜನೆಯನ್ನು ಸಹ ಹಾಕಿಕೊಂಡಿದ್ದರು. ಆದರೆ ಕಾನೂನಾತ್ಮಕ ಸಮಸ್ಯೆಗಳ ನಡುವೆ ಒಪ್ಪಂದವು ವಿಫಲವಾಯಿತು.
 

ಅನಿಲ್ ಅಂಬಾನಿಯವರ ವ್ಯಾಪಾರ ಸಾಮ್ರಾಜ್ಯಕ್ಕೆ ಮುಂದಿನ ದೊಡ್ಡ ಹೊಡೆತವು 2011ರಲ್ಲಿ 2G ಹಗರಣವಾಗಿತ್ತು. ಪಿತೂರಿಯ ಶಂಕೆಯ ಮೇಲೆ ಉನ್ನತ ಅಧಿಕಾರಿಗಳನ್ನು ಬಂಧಿಸಲಾಯಿತು. ಬಿಲಿಯನೇರ್ ಉದ್ಯಮಿಯನ್ನೂ ಸಹ ವಿಚಾರಣೆಗೆ ಒಳಪಡಿಸಲಾಯಿತು. ಈ ವಿಷಯವು ಅವರ ಕಂಪನಿಗಳ ಷೇರುಗಳ ಬೆಲೆಯ ಮೇಲೆ ಹೊಡೆತ ಬೀಳಲು ಕಾರಣವಾಯಿತು. ಅಷ್ಟೇ ಅಲ್ಲ ಅನಿಲ್ ಅಂಬಾನಿ ಅವರ ನಿವ್ವಳ ಮೌಲ್ಯದ  ಗಂಭೀರವಾಗಿ ಪರಿಣಾಮ ಬೀರಿತು.

ಸಾಲಗಳು ಮತ್ತು ಹಗರಣಗಳ ಮಧ್ಯೆಯೇ ಅಂಬಾನಿ ಚೀನಾದ ಬ್ಯಾಂಕ್‌ಗಳಿಂದ ವೈಯಕ್ತಿಕ ಗ್ಯಾರಂಟಿ ಮೇಲೆ 1.2 ಶತಕೋಟಿ ಸಾಲವೊಂದನ್ನು ಪಡೆದರು. ಆದರೆ ಅಲ್ಲಿಯೂ ಅದೃಷ್ಟ ಕೈ ಕೊಟ್ಟಿತು. ಅನಿಲ್‌ ಅಂಬಾನಿ ಮತ್ತೊಮ್ಮೆ ಉದ್ಯಮದಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಯಿತು. ಅಂಬಾನಿಯಿಂದ ಪಾವತಿಗಳನ್ನು ನಿರೀಕ್ಷಿಸುತ್ತಿರುವ ಸಾಲಗಾರರ ಪಟ್ಟಿಯು ಇನ್ನಷ್ಟು ಹೆಚ್ಚಾಯಿತು.

2016ರಲ್ಲಿ ಟೆಲಿಕಾಂ ವಲಯದಲ್ಲಿ ಮುಖೇಶ್ ಅಂಬಾನಿ ಪ್ರವೇಶದೊಂದಿಗೆ ಮಾರುಕಟ್ಟೆಯಲ್ಲಿ ಅನಿಲ್ ಅಂಬಾನಿ ಮತ್ತಷ್ಟು ದೊಡ್ಡ ಸವಾಲನ್ನು ಎದುರಿಸಿದರು. ಜಿಯೋ ಅದೃಷ್ಟವು ಗಗನಕ್ಕೇರಿತು, ಆದರೆ ಅನಿಲ್‌ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಷನ್ಸ್ ತನ್ನ ಮಾರುಕಟ್ಟೆ ಪಾಲು 3 ವರ್ಷಗಳ ಹಿಂದೆ ಇದ್ದ ಸ್ಥಳದಿಂದ 2 ಪ್ರತಿಶತಕ್ಕೆ ಕುಸಿಯಿತು. 

Latest Videos

click me!