ಕಣ್ಣಿಗೆ ಕುಕ್ಕುವಂತಿದೆ ಅಂಬಾನಿಯ ಐಷಾರಾಮಿ ಜಿಯೋ ವರ್ಲ್ಡ್ ಮಾಲ್, ವಿನ್ಯಾಸ ಮಾಡಿದ್ದು ಇವರೇ ನೋಡಿ

First Published Nov 5, 2023, 5:43 PM IST

ಏಷ್ಯಾದ ಶ್ರೀಮಂತ ವ್ಯಕ್ತಿ ಆಗಿರುವ ಮುಕೇಶ್ ಅಂಬಾನಿ ಅವರ ಮೆಗಾ-ಮಾಲ್ ಜಿಯೋ ವರ್ಲ್ಡ್ ಪ್ಲಾಜಾವನ್ನು ಅಂತರಾಷ್ಟ್ರೀಯ ವಾಸ್ತುಶಿಲ್ಪ ಸಂಸ್ಥೆಯು ವಿನ್ಯಾಸಗೊಳಿಸಿದೆ. ಮಾಲ್‌ನ ಐಷಾರಾಮಿ ಶೈಲಿ ಮತ್ತು ವಿನ್ಯಾಸ ಕಣ್ಣಿಗೆ ಕುಕ್ಕುವಂತಿದೆ. ಈ ಮಾಲ್‌ ವಿನ್ಯಾಸಗೊಳಿಸಿದ ಕಂಪೆನಿ ಯಾವುದು ಎಷ್ಟು ಖರ್ಚಾಗಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇತ್ತೀಚೆಗೆ ತಮ್ಮ ಮೆಗಾ-ಮಾಲ್ ಜಿಯೋ ವರ್ಲ್ಡ್ ಪ್ಲಾಜಾ ಲೋಕಾರ್ಪಣೆಗೊಳಿಸಿದರು, ಈ ಮೂಲಕ ಪ್ರಪಂಚದಾದ್ಯಂತದ ಕೆಲವು ಐಷಾರಾಮಿ ಬ್ರಾಂಡ್‌ಗಳು ಮತ್ತು ಕಂಪನಿಗಳನ್ನು ಭಾರತಕ್ಕೆ ತಂದರು. ಮೆಗಾ-ಮಾಲ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿದೆ, ಇದು ನಗರದ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ಒಂದಾಗಿದೆ.

ಪ್ರಪಂಚದ ಟಾಪ್ ಡಿಸೈನರ್ ಫ್ಯಾಶನ್ ಮತ್ತು ಆಕ್ಸೆಸರೀಸ್ ಬ್ರ್ಯಾಂಡ್‌ಗಳ ಹೊಸ ಮನೆಯಾಗಿರುವುದರ ಹೊರತಾಗಿ, ಜಿಯೋ ವರ್ಲ್ಡ್ ಪ್ಲಾಜಾದ ನಿರ್ಮಾಣ ಮತ್ತು ವಿನ್ಯಾಸವು ಐಷಾರಾಮಿಯಾಗಿ ಕಣ್ಣಿಗೆ ಕುಕ್ಕುವಂತಿದೆ. ಸಂಕೀರ್ಣವಾದ ವಿವರಗಳು ಮತ್ತು ಚಿನ್ನದ ಒಳಾಂಗಣ ಕೆಲಸವು ವ್ಯಕ್ತಿಯನ್ನು ಅವರು ಕಾಲಿಟ್ಟ ತಕ್ಷಣ ಮಂತ್ರಮುಗ್ಧರನ್ನಾಗಿಸುತ್ತದೆ. 

ಜಿಯೋ ವರ್ಲ್ಡ್ ಪ್ಲಾಜಾ, ಮುಖೇಶ್ ಅಂಬಾನಿಯವರ ಹೊಸ ಅಲ್ಟ್ರಾ-ಐಷಾರಾಮಿ ಯೋಜನೆಯಾಗಿದ್ದು, ಯುನೈಟೆಡ್ ಸ್ಟೇಟ್ಸ್ ಮೂಲದ ವಾಸ್ತುಶಿಲ್ಪ ಮತ್ತು ವಿನ್ಯಾಸ ಸಂಸ್ಥೆಯಾದ ಟಿವಿಎಸ್ ವಿನ್ಯಾಸಗೊಳಿಸಿದೆ, ಇದು ಜಾಗತಿಕ ಅಸ್ತಿತ್ವವನ್ನು ಹೊಂದಿದೆ ಮತ್ತು ವಾಣಿಜ್ಯ ವ್ಯವಹಾರ ಕಟ್ಟಡಗಳಲ್ಲಿ ತೀಕ್ಷ್ಣವಾದ ಮತ್ತು ಐಷಾರಾಮಿ ವಿಚಾರಗಳಿಗೆ ಗಮನ ಸೆಳೆಯುತ್ತದೆ.
 

TVS ಆರ್ಕಿಟೆಕ್ಚರ್ US ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯಾಗಿದೆ ಮತ್ತು ದೇಶದ ಅತ್ಯಂತ ಪ್ರತಿಷ್ಠಿತ ವಿನ್ಯಾಸ ಕಂಪನಿಗಳಲ್ಲಿ ಒಂದಾಗಿದೆ. ಟಿವಿಎಸ್ ಜಿಯೋ ವರ್ಲ್ಡ್ ಪ್ಲಾಜಾವನ್ನು ವಿನ್ಯಾಸಗೊಳಿಸಲು ರಿಲಯನ್ಸ್‌ನೊಂದಿಗೆ ಬಹುಕೋಟಿ ಒಪ್ಪಂದವನ್ನು ಮಾಡಿಕೊಂಡಿತು ಮತ್ತು ಇದರ ಫಲಿತಾಂಶ ಅತ್ಯದ್ಭುತವಾಗಿ ಮೂಡಿಬಂದಿದೆ.

ಈ ಜಿಯೋ ಐಷಾರಾಮಿ ಮಾಲ್‌ನ ರಚನೆಯು ಕಮಲದ ಹೂವು ಮತ್ತು ಪ್ರಕೃತಿಯ ಇತರ ಅಂಶಗಳಿಂದ ಪ್ರೇರಿತವಾಗಿದೆ.  ಈ ಮಾಲ್‌ 7,50,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು ಅಮೃತಶಿಲೆಯ ಬಹುಮಹಡಿಗಳೊಂದಿಗೆ ಚಿನ್ನದ ಬೆಳಕಿನಲ್ಲಿ ಸ್ನಾನ ಮಾಡಿದ ರೀತಿ ಇದೆ ಜೊತೆಗೆ ಎತ್ತರದ ಕಮಾನು ಛಾವಣಿಗಳನ್ನು ಹೊಂದಿದೆ. 

ಮಾಲ್‌ನ ನೀಲಿ,  ಬಿಳಿ ಮತ್ತು ಹೊನ್ನಿನ  ಬಣ್ಣದಿಂದ ಒಳಭಾಗವು ಐಷಾರಾಮಿ ತನಕ್ಕೆ  ಹಿಡಿದ ಕೈಗನ್ನಡಿಯಂತಿದೆ.  ಮಾಲ್‌ ಒಳಗಿರುವ ಪ್ರತಿ ಅಂಗಡಿಯ  ಅಲಂಕಾರವು ಅದರ ದುಬಾರಿ ಗ್ರಾಹಕರನ್ನು ಪೂರೈಸುತ್ತದೆ. TVS ಆರ್ಕಿಟೆಕ್ಚರ್ 360 ಮಿಲಿಯನ್‌ ಅಮೆರಿಕನ್‌ ಡಾಲರ್‌ ಗಿಂತಲೂ ಹೆಚ್ಚಿನ ಆದಾಯವನ್ನು ಹೊಂದಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 2993 ಕೋಟಿ ರೂ. 

ಜಿಯೋ ವರ್ಲ್ಡ್ ಪ್ಲಾಜಾವನ್ನು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದವರು ನವೆಂಬರ್ 1 ರಂದು ಪ್ರಾರಂಭಿಸಿದರು, ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಟಾಪ್ ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಲೂಯಿ ವಿಟಾನ್, ಗುಸ್ಸಿ, ಅರ್ಮಾನಿ ಮತ್ತು ಬಾಲೆನ್ಸಿಯಾಗದಂತಹ ಬ್ರ್ಯಾಂಡ್‌ಗಳು ಈ ಐಷಾರಾಮಿ ಮೆಗಾ-ಮಾಲ್‌ನಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲಿವೆ. 

ಈ ಮಾಲ್‌ನಲ್ಲಿ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಒಡೆತನದ ಪ್ರಮುಖ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಸೇರಿದಂತೆ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ವಿವಿಧ 66 ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಈಗಾಗಲೇ ಮಳಿಗೆಗಳನ್ನು ಗುತ್ತಿಗೆ ಪಡೆದಿವೆ. ಬರ್ನಾರ್ಡ್ ಅರ್ನಾಲ್ಟ್  211 ಬಿಲಿಯನ್‌ ಡಾಲರ್‌  (ಅಂದಾಜು 17.55 ಲಕ್ಷ ಕೋಟಿ ರೂ. ) ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ವರದಿಗಳ ಪ್ರಕಾರ, ಐಷಾರಾಮಿ ಮಾಲ್ ಕಾರ್ಟಿಯರ್, ಬಲ್ಗರಿ, ಲೂಯಿ ವಿಟಾನ್, ಡಿಯರ್, ಗುಸ್ಸಿ, IWC ಸ್ಕಾಫ್‌ಹೌಸೆನ್ ಮತ್ತು ಲಗೇಜ್ ತಯಾರಕ ರಿಮೋವಾ ಸೇರಿದಂತೆ ಹಲವಾರು ಜನಪ್ರಿಯ ಬ್ರಾಂಡ್‌ಗಳ ಶೋರೂಮ್‌ಗಳನ್ನು ಹೊಂದಿರುತ್ತದೆ. ಈ ಜನಪ್ರಿಯ ಬ್ಯಾಂಡ್‌ ಕಂಪೆನಿಗಳು ಚದರ ಅಡಿ ಲೆಕ್ಕದಲ್ಲಿ ಮಳಿಗೆ ತೆಗೆದುಕೊಂಡಿದ್ದು, 20 ಲಕ್ಷ ದಿಂದ 50 ಲಕ್ಷ ವರೆಗೂ ತಿಂಗಳ ಬಾಡಿಗೆ ಅಂಬಾನಿಗೆ ನೀಡಬೇಕು.
 

ಒಟ್ಟು 66 ಅಂತರಾಷ್ಟ್ರೀಯ ಐಷಾರಾಮಿ ಬ್ರಾಂಡ್‌ಗಳು ಈ ಮಾಲ್‌ನಲ್ಲಿ ಇರಲಿದ್ದು, ಬಾಲೆನ್ಸಿಯಾಗ, ಜಾರ್ಜಿಯೊ ಅರ್ಮಾನಿ ಕೆಫೆ, ಪಾಟರಿ ಬಾರ್ನ್ ಕಿಡ್ಸ್, ಸ್ಯಾಮ್‌ಸಂಗ್ ಎಕ್ಸ್‌ಪೀರಿಯೆನ್ಸ್ ಸೆಂಟರ್, EL&N ಕೆಫೆ ಮತ್ತು ರಿಮೋವಾ ಮುಂತಾದ ಹೊಸ ಅಂತರರಾಷ್ಟ್ರೀಯ ಬ್ರಾಂಡ್‌  ಬರಲಿದೆ.

ಜೊತೆಗೆ ಮುಂಬೈ ತನ್ನ ಮೊದಲ ಮಳಿಗೆಗಳಾದ ವ್ಯಾಲೆಂಟಿನೋ, ಟೋರಿ ಬರ್ಚ್, ವೈಎಸ್‌ಎಲ್, ವರ್ಸೇಸ್, ಟಿಫಾನಿ, ಲಾಡುರೀ ಮತ್ತು ಪಾಟರಿ ಬಾರ್ನ್‌ಗಳನ್ನು ಸ್ವಾಗತಿಸುತ್ತದೆ, ಆದರೆ ಪ್ರಮುಖ ಫ್ಲ್ಯಾಗ್‌ಶಿಪ್‌ಗಳಲ್ಲಿ ಇತರ ಐಕಾನಿಕ್ ಬ್ರಾಂಡ್‌ಗಳಾದ ಲೂಯಿ ವಿಟಾನ್, ಗುಸ್ಸಿ, ಕಾರ್ಟಿಯರ್, ಬ್ಯಾಲಿ, ಜಾರ್ಜಿಯೊ ಅರ್ಮಾನಿ, ಡಿಯರ್, ವೈಎಸ್‌ಎಲ್ ಮತ್ತು ಬಲ್ಗರಿ ಸೇರಿವೆ.

click me!