ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ, ಆರ್‌ಬಿಐ ಗರ್ವನರ್ ಘೋಷಣೆಯಿಂದ ಇನ್ನುಮುಂದೆ ಸಾಲ ಸುಲಭ ಮಾತ್ರವಲ್ಲ ಅತೀ ಕಡಿಮೆ ಬಡ್ಡಿಯಲ್ಲಿ ಲಭ್ಯವಾಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೊ ದರ ಇಳಿಕೆ ಮಾಡಿದೆ. ಇಂದು ಬೆಳಗ್ಗೆ RBI ಗವರ್ನರ್ ಸಂಜಯ್ ಮಲ್ಹೋತ್ರ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಇದೀಗ 25 ಪಾಯಿಂಟ್‌ಗಳನ್ನು ರೆಪೊ ದರ ಇಳಿಕೆ ಮಾಡಲಾಗಿದೆ. ಶೇಕಡಾ 5.50 ರಷ್ಟಿದ್ದ ರೆಪೊ ದರ ಇದೀಗ 5.25ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಸಾಲದ ಮೇಲಿನ ಬಡ್ಡಿ ಮತ್ತಷ್ಟು ಇಳಿಕೆಯಾಗಲಿದೆ. ಜನರಿಗೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗಲಿದೆ.
26
ರೆಪೊ ದರ ಇಳಿಕೆಯಿಂದ ಪ್ರಯೋಜನವೇನು
ಆರ್‌ಬಿಐ ರೆಪೊ ದರ ಇಳಿಕೆಯಿಂದ ಗೃಹ ಸಾಲ, ವಾಹನ ಸಾಲ ಸೇರಿದಂತೆ ಚಿಲ್ಲರೆ ಸಾಲಗಾರರಿಗೆ ಕಡಿಮೆ ಬಡ್ಡಿ ದರ ಹಾಗೂ ಸುಲಭ ರೀತಿಯಲ್ಲಿ ಸಾಲ ಸೌಲಭ್ಯಗಳು ಲಭ್ಯವಾಗಲಿದೆ. ಈ ಮೂಲಕ ಸಾಲ ಪಡೆದುಕೊಳ್ಳುವ ಮಂದಿ ನಿರಾಳರಾಗಿದ್ದಾರೆ. ಸುಲಭ ಕಂತು, ಅತೀ ಕಡಿಮೆ ಇಎಂಐ ಸೇರಿದಂತೆ ಹಲವು ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.
36
ರೂಪಾಯಿ ಮೌಲ್ಯ ಕುಸಿತದ ನಡುವೆ ಆರ್ಥಿಕ ಬೆಳವಣಿಗೆ
ಇತ್ತೀಚೆಗೆ ರೂಪಾಯಿ ಮೌಲ್ಯ ಕುಸಿತ ತೀವ್ರ ಆತಂಕ ಸೃಷ್ಟಿಸಿದೆ. ಸತತ ಕುಸಿತದ ನಡುವೆ ಇದೀಗ ಆರ್‌ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ರೂಪಾಯಿ ಮೌಲ್ಯ ಕುಸಿತ ಆತಂಕದ ನಡುವೆ ಆರ್‌ಬಿಐ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ನಿಟ್ಟಿನಲ್ಲಿ ರೆಪೊ ದರ ಇಳಿಕೆ ಸೇರಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಆರ್‌ಬಿಐ ಮಾನಿಟರ್ ಪಾಲಿಸಿ ಕಮಿಟಿ (MPC) ಕಳೆದ ಕೆಲ ತಿಂಗಳಿನಿಂದ ರೂಪಾಯಿ ಮೌಲ್ಯ, ದೇಶದ ಆರ್ಥಿಕ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿ ಇಂದು ಒಮ್ಮತದ ನಿರ್ಧಾರ ಘೋಷಿಸಿದೆ.
ಒಮ್ಮತದ ನಿರ್ಧಾರ ಘೋಷಿಸಿದ ಆರ್‌ಬಿಐ
56
ಜೂನ್ ತಿಂಗಳಲ್ಲಿ ರೆಪೊ ದರ ಇಳಿಕೆ ಮಾಡಿದ್ದ ಆರ್‌ಬಿಐ
ಹಣದುಬ್ಬರದ ಪರಿಣಾಮ ಕಳೆದ ಜೂನ್ ತಿಂಗಳಲ್ಲಿ ಆರ್‌ಬಿಐ ರೆಪೊ ದರವನ್ನು ಶೇಕಡಾ 6 ರಿಂದ ಶೇಕಡಾ 5.5ಕ್ಕೆ ಇಳಿಕೆ ಮಾಡಿತ್ತು. ಈ ಬಾರಿ ಹಣದುಬ್ಬರ ಒತ್ತಡ ಕಡಿಮೆಯಾಗಿದೆ. 2025-26 ಸಾಲಿನ ಆರ್ಥಿಕ ವರ್ಷಕ್ಕೆ ಹಣದುಬ್ಬರವನ್ನು ಶೇಕಡಾ 2.0ಕ್ಕೆ ಇಳಿಕೆ ಮಾಡಲಾಗಿದೆ. 2026-27 ಆರ್ಥಿಕ ವರ್ಷದ ಹಣದುಬ್ಬರಳ ಲೆಕ್ಕಾಚಾರ ಮಾಡಿದರೆ ಲೋಹಗಳ ಬೆಲೆ ಏರಿಕೆಯಾಗುವ ಸಾಧ್ಯತ ಇದೆ.
66
ಜಿಡಿಪಿ ಹೆಚ್ಚಳ
ಪ್ರಸಕ್ತ ವರ್ಷದ ದೇಶಿಯ ಉತ್ಪನ್ನ(ಜಿಡಿಪಿ ) ಹೆಚ್ಚಳದ ಮೂನ್ಸೂಚನೆ ನೀಡಿದೆ. ಅಂದಾಜು ಪ್ರಕಾರ ಶೇಕಡಾ 6.8 ರಿಂದ ಶೇಕಡಾ 7.3ಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ತ್ರೈಮಾಸಿಕದ ವೇಳೆ(ಕ್ವಾರ್ಟರ್ 3) ಜಿಡಿಪಿ ಮನ್ಸೂಚನೆ ನೀಡಿದ 6.4 ರಿಂದ ಇದೀಗ ಶೇಕಡಾ 6.7ರಷ್ಟು ಏರಿಕೆಯಾಗಿದೆ.