ಆ ಒಂದು ಟೆಂಡರ್ ಪಡೆಯಲು ಮುಕೇಶ್ ಅಂಬಾನಿ -ಎಲಾನ್ ಮಸ್ಕ್ ನಡುವೆ ಜಿದ್ದಾಜಿದ್ದಿ; ಇಬ್ಬರ ಮಧ್ಯೆ ಯಾಕಿಷ್ಟು ಪೈಪೋಟಿ?

Published : Oct 24, 2024, 01:24 PM ISTUpdated : Oct 24, 2024, 01:32 PM IST

ಭಾರತದಲ್ಲಿ ಉಚಿತ ಸ್ಯಾಟಲೈಟ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಮುಕೇಶ್ ಅಂಬಾನಿ ಮತ್ತು ಎಲಾನ್ ಮಸ್ಕ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಪೈಪೋಟಿ ಭಾರತದ ಟೆಲಿಕಾಂ ಉದ್ಯಮದ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

PREV
15
ಆ ಒಂದು ಟೆಂಡರ್ ಪಡೆಯಲು ಮುಕೇಶ್ ಅಂಬಾನಿ -ಎಲಾನ್ ಮಸ್ಕ್ ನಡುವೆ ಜಿದ್ದಾಜಿದ್ದಿ; ಇಬ್ಬರ ಮಧ್ಯೆ ಯಾಕಿಷ್ಟು ಪೈಪೋಟಿ?

ಎಲಾನ್ ಮಸ್ಕ್ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸ್ಯಾಟಲೈಟ್ ಸ್ಪೆಕ್ಟ್ರಮ್ ಸೇವೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಒಪ್ಪಂದವನ್ನು ಪಡೆಯಲು ಮಸ್ಕ್ ಪ್ರಯತ್ನಿಸುತ್ತಿದ್ದಾರೆ.

25

ಸರ್ಕಾರ ಆಡಳಿತಾತ್ಮಕ ವಿಧಾನದ ಮೂಲಕ ಸ್ಯಾಟಲೈಟ್ ಸ್ಪೆಕ್ಟ್ರಮ್ ಸೇವೆಗಳನ್ನು ಒದಗಿಸಲು ನಿರ್ಧರಿಸಿದೆ. ಇದು ಮಸ್ಕ್‌ಗೆ ಅನುಕೂಲಕರವಾಗಿದೆ. ITU ಜೊತೆ ಮಸ್ಕ್‌ರ ಸ್ಪೇಸ್‌ಎಕ್ಸ್‌ಗೆ ಉತ್ತಮ ವ್ಯವಹಾರಿಕ ಸಂಬಂಧವನ್ನು ಹೊಂದಿದ್ದಾರೆ. ಹಾಗಾಗಿ ಸರ್ಕಾರ ಮಸ್ಕ್‌ಗೆ ಒಪ್ಪಂದ ನೀಡುವ ಸಾಧ್ಯತೆಗಳೇ ಹೆಚ್ಚಿವೆ ಎಂದು ವರದಿಯಾಗಿದೆ.

35
ಮುಕೇಶ್ ಅಂಬಾನಿ

ಆದ್ರೆ  ಸರ್ಕಾರದ ಈ ನಿರ್ಧಾರದ ಬಗ್ಗೆ ಅಂಬಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಹರಾಜು ವಿಧಾನವನ್ನು ಅನುಸರಿಸಲಾಗುತ್ತದೆ. ಆದರೆ ಸ್ಯಾಟಲೈಟ್ ಸ್ಪೆಕ್ಟ್ರಮ್‌ಗೆ ಹರಾಜು ಪ್ರಕ್ರಿಯೆ ಮಾಡುತ್ತಿಲ್ಲ. ಹಾಗಾಗಿ ಸರ್ಕಾರದ ನಿರ್ಧಾರವನ್ನು ಮುಕೇಶ್ ಅಂಬಾನಿ ಪ್ರಶ್ನೆ ಮಾಡುತ್ತಿದ್ದಾರಂತೆ. ಈ ಸಂಬಂಧ ಸರ್ಕಾರ ಮತ್ತು ಮಸ್ಕ್ ಜೊತೆ ಮಾತನಾಡಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

45

ಭಾರತದಲ್ಲಿ ಟೆಲಿಕಾಂ ಸೇವೆಗಳು ಟವರ್‌ಗಳು, ಕೇಬಲ್‌ಗಳು ಮತ್ತು ಬೂಸ್ಟರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಆದರೆ ಇವುಗಳು ಗ್ರಾಮೀಣ ಮತ್ತು ಪರ್ವತ ಪ್ರದೇಶಗಳಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಹೊಸ ಟೆಲಿಕಾಂ ಸೇವೆಗಳು ಉಪಗ್ರಹಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಮಸ್ಕ್‌ರ ಸ್ಟಾರ್‌ಲಿಂಕ್ ಈಗಾಗಲೇ 100 ದೇಶಗಳಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದೆ.

55

ಅಂಬಾನಿ ಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಜಿಯೋ SES ಆಸ್ಟ್ರಾ ಜೊತೆ ಪಾಲುದಾರಿಕೆ ಹೊಂದಿದೆ. ಇದು ಸ್ಟಾರ್‌ಲಿಂಕ್‌ಗಿಂತ ಉತ್ತಮ ಸೇವೆಗಳನ್ನು ಒದಗಿಸುತ್ತದೆ. ಆದರೆ ಸರ್ಕಾರದ ಆಡಳಿತಾತ್ಮಕ ವಿಧಾನ ಜಿಯೋಗೆ ನಷ್ಟವಾಗಬಹುದು.

Read more Photos on
click me!

Recommended Stories