ಒಂದು ರೂಪಾಯಿ ನಾಣ್ಯ ಅಮೂಲ್ಯ
ಹೆಚ್ಚು ಹಣ ಸಂಪಾದಿಸುವ ಆಸೆ ಯಾರಿಗೆ ಇಲ್ಲ? ಅಂಬಾನಿ, ಅದಾನಿಗಳಂತೆ ಆದಾಯ ಇಲ್ಲದಿದ್ದರೂ, ಜೀವನದಲ್ಲಿ ಚೆನ್ನಾಗಿ ಬದುಕಲು ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತೇವೆ.
1 ರೂಪಾಯಿಯಿಂದ 10 ಕೋಟಿ ರೂಪಾಯಿ
ನಾವು ವಿವಿಧ ರೀತಿಯಲ್ಲಿ ಹಣ ಸಂಪಾದಿಸುತ್ತೇವೆ. ಕೆಲವರು ಅಂಬಾನಿ, ಅದಾನಿಗಳಂತೆ ಸ್ವಂತ ವ್ಯವಹಾರ ಮಾಡುವ ಮೂಲಕ ಹಣ ಸಂಪಾದಿಸುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತಾರೆ. ಇದಲ್ಲದೆ, ಅನೇಕರು ತಮ್ಮ ಶಿಕ್ಷಣ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಹಣ ಸಂಪಾದಿಸುತ್ತಾರೆ. ಅದೇ ರೀತಿ ಅನೇಕರು ಅವಕಾಶಗಳ ಲಾಭ ಪಡೆದು ಮುಂದೆ ಬಂದಿದ್ದಾರೆ. ಅವರು ಕೋಟ್ಯಾಧಿಪತಿಗಳೂ ಆಗಿದ್ದಾರೆ.
ಆದರೆ, ಯಾವುದೇ ರೀತಿಯ ದೈಹಿಕ ಶ್ರಮವಿಲ್ಲದೆ ಕೋಟಿ ಕೋಟಿ ಹಣ ಸಂಪಾದಿಸುವುದು ಸಾಧ್ಯ ಎಂದರೆ ನೀವು ನಂಬ್ತೀರಾ? ಹೌದು, ಇದು ಸತ್ಯ. ಆದರೆ ಇದಕ್ಕೆ ಅದೃಷ್ಟ ಬೇಕು. ಏನಂಥ ನಿಮರ್ಗೆ ಅರ್ಥ ಆಗ್ತಿಲ್ಲಾ ಅಲ್ವಾ.. ನಿಮ್ಮ ಬಳಿ ಈ ಒಂದು ರೂಪಾಯಿ ನಾಣ್ಯವಿದ್ದರೆ ನೀವು ಸುಲಭವಾಗಿ ಕೋಟ್ಯಾಧಿಪತಿಯಾಗಬಹುದು. ನೀವು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಬಹುದು.
ಸಾಮಾನ್ಯವಾಗಿ ನಮ್ಮ ಬಳಿ ಇರುವ ಹಳೆಯ ವಸ್ತುಗಳಿಗೆ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚು. ವಿಶೇಷವಾಗಿ ವಿದೇಶಗಳಲ್ಲಿ ಹಳೆಯ ವಸ್ತುಗಳನ್ನು ಹರಾಜು ಮಾಡಿ ಮಾರಾಟ ಮಾಡುವ ಮೂಲಕ ಅನೇಕರು ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ.
ಅದೇ ರೀತಿ, ನಮ್ಮ ದೇಶದಲ್ಲಿ ಪ್ರಸ್ತುತ ಹಳೆಯ ನಾಣ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಲವೊಮ್ಮೆ ಇವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ರೂಪಾಯಿ, ಕೆಲವೊಮ್ಮೆ ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೂಡಿಕೆ ಮಾಡಬೇಕಾಗಿಲ್ಲ.
ಉದಾಹರಣೆಗೆ, ನಿಮ್ಮ ಬಳಿ ಇರುವ ಹಳೆಯ ಐದು ರೂಪಾಯಿ ನೋಟಿನ ಚಿತ್ರವನ್ನು ತೆಗೆದು ಇ-ಕಾಮರ್ಸ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದರೆ, ಖರೀದಿದಾರರು ನಿಮ್ಮಿಂದ ಆ ನೋಟಿಗೆ ಹಣ ನೀಡಿ ಖರೀದಿಸುತ್ತಾರೆ.
ಅದೇ ರೀತಿ, ಪ್ರಸ್ತುತ ನಮ್ಮ ದೇಶದಲ್ಲಿ ಹಳೆಯ ಒಂದು ರೂಪಾಯಿ ನಾಣ್ಯಕ್ಕೆ ಭಾರಿ ಬೇಡಿಕೆ ಇದ್ದು, ಇದನ್ನು ಮಾರಾಟ ಮಾಡುವ ಮೂಲಕ ನೀವು ಕೋಟಿ ಕೋಟಿ ರೂಪಾಯಿ ಗಳಿಸುವ ಅವಕಾಶವಿದೆ. ಅಂದರೆ, 1885 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಮುದ್ರಿಸಲಾದ ಆ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ, ಅದು 10 ಕೋಟಿ ರೂಪಾಯಿಗೆ ಹರಾಜಾಗಬಹುದು ಎಂದು ವರದಿಯಾಗಿದೆ. ಹಾಗಾಗಿ ನೀವು ಈ ನಾಣ್ಯವನ್ನು ಮಾರಾಟ ಮಾಡಿ ಹತ್ತು ಕೋಟಿ ರೂಪಾಯಿ ಪಡೆಯಬಹುದು.
ನಿಮ್ಮ ಬಳಿ ಇರುವ ಹಳೆಯ ಒಂದು ರೂಪಾಯಿ ನಾಣ್ಯದ ಚಿತ್ರವನ್ನು ತೆಗೆದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದರೆ ಸಾಕು. ಇದಕ್ಕಾಗಿ ನೀವು ಇ-ಬೇ, ಒಎಲ್‌ಎಕ್ಸ್, ಕ್ವಿಕರ್, ಇಂಡಿಯಾಮಾರ್ಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ನಾಣ್ಯಗಳನ್ನು ಮಾರಾಟ ಮಾಡಬಹುದು. ಈ ಹಳೆಯ ನಾಣ್ಯಗಳಿಗೆ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಈ ಅದೃಷ್ಟ ಎಲ್ಲರಿಗೂ ಸಿಗದಿರಬಹುದು.
ಆನ್‌ಲೈನ್‌ನಲ್ಲಿ ಈ ರೀತಿ ಹಣದ ನೋಟು, ನಾಣ್ಯಗಳನ್ನು ಮಾರಾಟ ಮಾಡುವುದನ್ನು ರಿಸರ್ವ್ ಬ್ಯಾಂಕ್ ಬೆಂಬಲಿಸೋದಿಲ್ಲ. ಆದ್ದರಿಂದ, ಈ ಆನ್‌ಲೈನ್ ವಹಿವಾಟಿನಲ್ಲಿ ಲಾಭ, ನಷ್ಟ ಏನೇ ಆಗಲಿ, ಅದರ ಸಂಪೂರ್ಣ ಜವಾಬ್ದಾರಿ ನಿಮ್ಮದೇ. ಅಲ್ಲದೆ, ಆನ್‌ಲೈನ್‌ನಲ್ಲಿ ಹಲವು ವಂಚನೆಗಳು ನಡೆಯುತ್ತಿರುವುದರಿಂದ, ಚೆನ್ನಾಗಿ ತಿಳಿಯದೆ ಯಾವುದೇ ಕೆಲಸದಲ್ಲಿ ತೊಡಗಬೇಡಿ. ಎಚ್ಚರಿಕೆಯಿಂದಿರಿ.