ಮತ್ತೆ 5,000 ರೂ., 10,000 ರೂ. ನೋಟುಗಳನ್ನ ಚಲಾವಣೆಗೆ ತರೋ ಬಗ್ಗೆ ಕೆಲವು ಚರ್ಚೆಗಳು ನಡೆದವು. ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್, ಹೆಚ್ಚು ಮೌಲ್ಯದ ನೋಟುಗಳನ್ನ ಮತ್ತೆ ತರಬಹುದು ಅಂತ ಸಲಹೆ ನೀಡಿದ್ರು ಅಂತ ಹಾಗೂ ಆಮೇಲೆ ಅವರೇ ಆ ಯೋಚನೆಯನ್ನ ಕೈಬಿಟ್ಟರು ಅಂತ ಹೇಳಲಾಗುತ್ತದೆ.
2016ರಲ್ಲಿ ಮೋದಿ ಏಕಾಏಕಿ ಘೋಷಿಸಿದ ನೋಟು ರದ್ದತಿ ಕ್ರಮದಲ್ಲಿ 500 ರೂ. ಮತ್ತು 1,000 ರೂ. ನೋಟುಗಳನ್ನ ವಾಪಸ್ ಪಡೆಯಲಾಯಿತು. ಅದರ ಬದಲಾಗಿ ಮೊದಲು 2,000 ರೂ. ನೋಟುಗಳನ್ನ ಬಿಡುಗಡೆ ಮಾಡಲಾಯಿತು. ಆದ್ರೆ, 2023 ರಲ್ಲಿ 2,000 ರೂ. ನೋಟುಗಳನ್ನೂ ಚಲಾವಣೆಯಿಂದ ವಾಪಸ್ ಪಡೆಯುವುದಾಗಿ ರಿಸರ್ವ್ ಬ್ಯಾಂಕ್ ಘೋಷಿಸಿದೆ.
2,000 ರೂ. ನೋಟಿನ ಬದಲಾಗಿ ಹೊಸ 1,000 ರೂ. ನೋಟು ಬಿಡುಗಡೆಯಾಗುತ್ತೆ ಅಂತ ಸುದ್ದಿ ಇತ್ತು. ಆದ್ರೆ, ಇಲ್ಲಿಯವರೆಗೂ ಅಧಿಕೃತವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇವಾಗ ಭಾರತದಲ್ಲಿ 500 ರೂ. ನೋಟೇನೆ ಅತಿ ಹೆಚ್ಚು ಮೌಲ್ಯದ ನೋಟಾಗಿದೆ.