ನಿಮಗೆ ಬಿಸಿನೆಸ್ ಮಾಡೋಕೆ ಇಷ್ಟನಾ? ಹಾಗಾದ್ರೆ ಸಮ್ಮರ್ ನಿಮಗೆ ಬೆಸ್ಟ್ ಟೈಮ್. ಈ ಸಮ್ಮರ್ನಲ್ಲಿ ಕಮ್ಮಿ ದುಡ್ಡು ಹಾಕಿ ಈ ಬಿಸಿನೆಸ್ ಸ್ಟಾರ್ಟ್ ಮಾಡಿದ್ರೆ, ಕಮ್ಮಿ ಟೈಮ್ನಲ್ಲಿ ಒಳ್ಳೆ ಲಾಭ ಮಾಡಬಹುದು. ಈ ಬಿಸಿನೆಸ್ ಸ್ಟಾರ್ಟ್ ಮಾಡೋಕೆ ಎಷ್ಟು ದುಡ್ಡು ಬೇಕು? ಲಾಭ ಹೆಂಗಿರುತ್ತೆ? ಹೇಗೆ ಸ್ಟಾರ್ಟ್ ಮಾಡೋದು ಅಂತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ತಿಳ್ಕೊಳ್ಳಿ.
ಬೇಸಿಗೆಯಲ್ಲಿ ಶುರು ಮಾಡೋಕೆ ಟ್ರಾವೆಲ್ & ಟೂರಿಸಂ ಬಿಸಿನೆಸ್ ಬೆಸ್ಟ್ ಐಡಿಯಾ. ಏಕೆಂದರೆ ಮಕ್ಕಳಿಗೆ ಸಮ್ಮರ್ ಹಾಲಿಡೇಸ್ ಇರುತ್ತೆ. ಟೀಚರ್ಸ್, ಲೆಕ್ಚರರ್ಸ್, ಪ್ರೊಫೆಸರ್ಸ್ಗೂ ಬೇಕಾಗಿರೋ ರಜೆ ಬೇಸಿಗೆಯಲ್ಲಿ ಸಿಗುತ್ತದೆ. ಇನ್ನು ಬಿಸಿನೆಸ್ ಮ್ಯಾನ್ ಫ್ಯಾಮಿಲಿಸ್ ಕೂಡ ಬೇಸಿಗೆಯಲ್ಲಿ ಟೂರ್ ಪ್ಲಾನ್ ಮಾಡ್ಕೊತಾರೆ. ಹೀಗೆ ಪ್ರತಿ ಕೆಟಗರಿಯಲ್ಲೂ ಜನ ಸಮ್ಮರ್ನಲ್ಲಿ ವೆಕೇಷನ್ಗೆ ಹೋಗೋಕೆ ಟ್ರೈ ಮಾಡ್ತಾರೆ. ಇಂಥ ಟೈಮ್ನಲ್ಲಿ ನೀವು ಟ್ರಾವೆಲ್ ಬಿಸಿನೆಸ್ ಸ್ಟಾರ್ಟ್ ಮಾಡಿದ್ರೆ ಒಳ್ಳೆ ಆದಾಯ ಮಾಡಬಹುದು.
ಟ್ರಾವೆಲ್ & ಟೂರಿಸಂ ಬಿಸಿನೆಸ್ಗೆ ದುಡ್ಡು: ಈ ಬಿಸಿನೆಸ್ ಶುರು ಮಾಡೋಕೆ ನಿಮ್ಮ ಹತ್ರ ರೂ.50,000 ಇದ್ದರೆ ಸಾಕು. ಅದರಲ್ಲಿ ಲ್ಯಾಪ್ಟಾಪ್ ತಗೊಂಡು, ಇಂಟರ್ನೆಟ್ ಕನೆಕ್ಷನ್ ಹಾಕಿಸ್ಕೊಂಡರೆ ನೀವು ಬಿಸಿನೆಸ್ ಸ್ಟಾರ್ಟ್ ಮಾಡಬಹುದು. ಆಮೇಲೆ ಬೇರೆ ಬೇರೆ ಏರಿಯಾಗಳಲ್ಲಿ ಟೂರಿಸ್ಟ್ ಕನೆಕ್ಷನ್ ಬೆಳೆಸಿಕೊಳ್ಳಿ. ಮೊದಲೇ ಆ ಟೂರಿಸ್ಟ್ ಪ್ಲೇಸ್ಗಳಲ್ಲಿ ಹೋಟೆಲ್ಸ್, ಲಾಡ್ಜ್ಗಳು, ಗೈಡ್ಗಳ ಜೊತೆ ಕಾಂಟ್ಯಾಕ್ಟ್ ಇಟ್ಕೊಳ್ಳಿ.
ಟಿಕೆಟ್ ಬುಕ್ ಮಾಡಿದರೆ ಸಾಕು..: ಬೇಸಿಗೆ ರಜೆಯಲ್ಲಿ ಜನ ಜಾಸ್ತಿ ಟ್ರಾವೆಲ್ ಮಾಡೋಕೆ ಇಷ್ಟಪಡ್ತಾರೆ. ಈ ಟೈಮ್ನಲ್ಲಿ ಅವರಿಗೆ ನೀವು ಇಂಟರ್ನೆಟ್ ಮೂಲಕ ಟ್ರಿಪ್ ಪ್ಲಾನಿಂಗ್ ಸಲಹೆ ಕೊಟ್ಟು ಚಾರ್ಜ್ ತಗೋಬಹುದು. ಬಸ್, ಟ್ರೈನ್, ಫ್ಲೈಟ್ ಟಿಕೆಟ್ ಬುಕಿಂಗ್, ಹೋಟೆಲ್ ಬುಕಿಂಗ್, ಲೋಕಲ್ ಟೂರ್ಸ್ ತರ ಸರ್ವಿಸ್ ಆಫರ್ ಮಾಡಿದರೆ ಒಳ್ಳೆ ಆದಾಯ ಮಾಡಬಹುದು.
ನೀವೇ ಟೂರಿಸ್ಟ್ ಬಸ್ ಓಡಿಸಿ..:
ಟಿಕೆಟ್ ಬುಕಿಂಗ್ಗಿಂತ ನೀವೇ ಒಂದು ಟೂರಿಸ್ಟ್ ಬಸ್ ಹಾಕಿದರೆ ಡಬಲ್ ಪ್ರಾಫಿಟ್ಸ್ ಮಾಡಬಹುದು. ಇದಕ್ಕೆ ಸೋಶಿಯಲ್ ಮೀಡಿಯಾನ ಚೆನ್ನಾಗಿ ಯೂಸ್ ಮಾಡಿ. ಫಸ್ಟ್ ನೀವು ಒಂದು ಪ್ರೈವೇಟ್ ಬಸ್ಸು, ಡ್ರೈವರ್ಗಳನ್ನ ಬಾಡಿಗೆಗೆ ತಗೊಳ್ಳಿ. ಸೋಶಿಯಲ್ ಮೀಡಿಯಾದಲ್ಲಿರೋ ಪ್ಲಾಟ್ಫಾರ್ಮ್ಗಳಲ್ಲಿ ಟೂರಿಸ್ಟ್ ಸರ್ವಿಸ್ ಬಗ್ಗೆ ಪೋಸ್ಟ್ ಹಾಕಿ. ಉದಾಹರಣೆಗೆ ಸಮ್ಮರ್ನಲ್ಲಿ ಹಂಪಿ, ಚಿಕ್ಕಮಗಳೂರು, ಕೊಡಗು, ಕೊಡೆಕೆನಾಲ್, ಊಟಿ, ಗೋವಾ, ಕೇರಳ, ಕುಲುಮನಾಲಿಗೆ ಬಸ್ ಏರ್ಪಾಡು ಮಾಡಿ.
ಟಿಕೆಟ್ ರೇಟ್ ಎಷ್ಟು?: ಅಲ್ಲಿಗೆ ಹೋಗೋ ದೂರ ನೋಡ್ಕೊಂಡು ಟಿಕೆಟ್ ರೇಟ್, ಊಟದ ಚಾರ್ಜ್ ಲೆಕ್ಕ ಹಾಕಿ ಟಿಕೆಟ್ ರೇಟ್ ಫಿಕ್ಸ್ ಮಾಡಿ. ನೀವು ಏರ್ಪಾಡು ಮಾಡಿರೋ ಬಸ್ನಲ್ಲಿರೋ ಸೌಕರ್ಯಗಳನ್ನ ವಿವರಿಸಿ. ಬೇಸಿಗೆ ಆಗಿರೋದ್ರಿಂದ ಎಸಿ ಬಸ್ ಆದ್ರೆ ಜಾಸ್ತಿ ಗ್ರಾಹಕರು ಬರುವ ಸಾಧ್ಯತೆ ಇರುತ್ತದೆ. ಈ ಡೀಟೇಲ್ಸ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ. ನೀವು ಅಂದಾಜು ಮಾಡೋದಕ್ಕಿಂತ ಜಾಸ್ತಿ ರೆಸ್ಪಾನ್ಸ್ ಬರುತ್ತದೆ. ಈ ಐಡಿಯಾ ಸಕ್ಸಸ್ ಆದರೆ ಟೂರ್ಸ್ ಅಂಡ್ ಟ್ರಾವೆಲ್ಸ್ನ್ನ ವರ್ಷ ಪೂರ್ತಿ ಕಂಟಿನ್ಯೂ ಮಾಡ್ತಾ ಹನಿಮೂನ್ & ಫ್ಯಾಮಿಲಿ ಟೂರ್ಸ್, ಟ್ರೆಕ್ಕಿಂಗ್ & ಅಡ್ವೆಂಚರ್ ಟೂರ್ಸ್, ಬಡ್ಜೆಟ್ ಟೂರ್ಸ್ ಅಂತ ಬೇರೆ ಬೇರೆ ಟೂರ್ಸ್ ಪ್ಲಾನ್ ಮಾಡಿ.