ಮಾರ್ಚ್ 2025 ರ ಸಮಯದಲ್ಲಿ ಭಾರತವು ಕೇವಲ ಮೂರು ಸಕ್ರಿಯ ಚಿನ್ನದ ಗಣಿಗಳನ್ನು ಹೊಂದಿದೆ, ಕರ್ನಾಟಕದ ರಾಯಚೂರಿನಲ್ಲಿರುವ ಹಟ್ಟಿ ಮತ್ತು ಉಥಿ ಹಾಗೆ ಜಾರ್ಖಂಡ್‌ನಲ್ಲಿ ಹೀರಾಬುದ್ದಿನಿ ಮಾತ್ರ ಪ್ರಸ್ತುತ ಚಿನ್ನವನ್ನು ತೆಗೆಯುತ್ತಿದೆ. ಇತ್ತಿಚಿನ ವರದಿಯಂತೆ ದೇಶದ ಇದೊಂದು ರಾಜ್ಯದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಇರೋದು ಪತ್ತೆಯಾಗಿದೆ. ಒಡಿಶಾದ 7 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಭಾರತದ ಚಿನ್ನದ ಗಣಿಗಾರಿಕೆ ಇತಿಹಾಸದಲ್ಲೇ ಅತಿದೊಡ್ಡ ಚಿನ್ನದ ನಿಕ್ಷೇಪ ಎಂದು ಹೇಳಲಾಗುತ್ತಿದೆ. ಒಡಿಶಾದ ಜಾಶಿಪುರ್, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್, ಬಾದಂಪಹರ್ನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಚಿನ್ನದ ನಿಕ್ಷೇಪಗಳನ್ನ ಪತ್ತೆ ಹಚ್ಚಿದೆ. ಇದರ ಜೊತೆಗೆ ತಾಮ್ರದ ನಿಕ್ಷೇಪ ಇರುವುದು ಕೂಡ ಪತ್ತೆಯಾಗಿದೆ.