ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹2.90ಪೈಸೆ ಏರಿಕೆ; 10 ದಿನದಲ್ಲಿ 8 ರೂಪಾಯಿ ಹೆಚ್ಚಳ

Published : May 25, 2026, 07:22 AM IST

ಕಳೆದ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿವೆ. ಇಂದಿನ ಭಾರಿ ಏರಿಕೆಯೊಂದಿಗೆ, ಪೆಟ್ರೋಲ್ ದರವು ₹110.99 ಮತ್ತು ಡೀಸೆಲ್ ದರವು ₹98.80 ಕ್ಕೆ ತಲುಪಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ.

PREV
14
ಪೆಟ್ರೋಲ್ ಮತ್ತು ಡೀಸೆಲ್ ದರ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರುತ್ತಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಬೆಲೆ ಏರಿಕೆ ಕಂಡುಬಂದಿದೆ. ಮೇ 15 ರಿಂದ ಇಂದಿನವರೆಗೂ ಒಟ್ಟಾರೆ 8 ರೂಪಾಯಿಯಷ್ಟು ದರ ಹೆಚ್ಚಳವಾಗಿದೆ.

24
ದರ ಏರಿಕೆಯ ಸರಣಿ ಆರಂಭ

ಮೇ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 3 ರೂಪಾಯಿ ಏರಿಕೆಯಾಗುವ ಮೂಲಕ ಈ ಸರಣಿ ಆರಂಭವಾಗಿತ್ತು. ತದನಂತರ ಮೇ 19 ರಂದು ಪೆಟ್ರೋಲ್ ದರ 94 ಪೈಸೆ ಹೆಚ್ಚಳ ಕಂಡರೆ, ಮೇ 23 ರಂದು ಪ್ರತಿ ಲೀಟರ್ ಪೆಟ್ರೋಲ್ ಗೆ 94 ಪೈಸೆ ಹಾಗೂ ಡೀಸೆಲ್ ಗೆ 60 ಪೈಸೆಯಷ್ಟು ದರ ಏರಿಕೆಯಾಗಿತ್ತು.

34
ನಾಲ್ಕನೇ ಬಾರಿಗೆ ಏರಿಕೆಯಾದ ದರ

ಇದೀಗ ಇಂದಿನ ನಾಲ್ಕನೇ ಬಾರಿಯ ಏರಿಕೆಯಲ್ಲಿ ಗ್ರಾಹಕರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದ್ದು, ಇಂದು ಒಂದೇ ದಿನ ಪ್ರತಿ ಲೀಟರ್ ಪೆಟ್ರೋಲ್ ಗೆ ಭಾರಿ 2.90 ರೂಪಾಯಿ ಹಾಗೂ ಡೀಸೆಲ್ ಗೆ 2.81 ರೂಪಾಯಿಯಷ್ಟು ಬೆಲೆ ಹೆಚ್ಚಳವಾಗಿದೆ.

44
ಹೊಸ ದರ

ಈ ಹೊಸ ಪರಿಷ್ಕರಣೆಯಿಂದಾಗಿ ಈ ಮೊದಲು ₹108.09 ಇದ್ದ ಪೆಟ್ರೋಲ್ ದರವು ಇಂದು ₹110.99ಗೆ ತಲುಪಿದೆ. ಹಾಗೆಯೇ, ₹95.99 ಪೈಸೆ ಇದ್ದ ಡೀಸೆಲ್ ದರವು ಇಂದಿನ ಏರಿಕೆಯ ನಂತರ ₹98.80 ಪೈಸೆಗೆ ಬಂದು ನಿಂತಿದೆ. ಇನ್ನು ಪ್ರಸ್ತುತ ಹೆಚ್.ಪಿ (HP) ಪೆಟ್ರೋಲ್ ಬಂಕ್‌ಗಳಲ್ಲಿ ಇಂದಿನ ನಿಖರ ದರವನ್ನು ನೋಡುವುದಾದರೆ, ಪ್ರತಿ ಲೀಟರ್ ಪೆಟ್ರೋಲ್ ₹110.93 ರೂ. ಹಾಗೂ ಡೀಸೆಲ್ ₹98.79 ರೂ. ನಷ್ಟು ದಾಖಲಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories