ಚಿನ್ನ ಕೊಳ್ಳೋರಿಗೆ ಶುಕ್ರದೆಶೆ; ಮತ್ತೆ ಕುಸಿದ ಬಂಗಾರದ ಬೆಲೆ..! ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ

Published : May 22, 2026, 01:26 PM IST

ಬೆಂಗಳೂರು: ಚಿನ್ನ ಖರೀದಿಸುವವರ ಪಾಲಿಗೆ ಇಂದು ಶುಭಶುಕ್ರವಾರ ಎನಿಸಿಕೊಂಡಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ.

PREV
15
ಚಿನ್ನದ ಬೆಲೆ ಏರಿಕೆಗೆ ಬಿತ್ತು ಬ್ರೇಕ್

ಇರಾನ್-ಇಸ್ರೇಲ್ ಯುದ್ದದ ಕಾರ್ಮೋಡ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದಾಗಿ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡಿತ್ತು. ಇದು ಆಭರಣ ಖರೀದಿಸುವ ಸಾಮಾನ್ಯ ವರ್ಗದವರ ಮುಖದಲ್ಲಿ ಆತಂಕ ಮನೆ ಮಾಡುವಂತೆ ಮಾಡಿತ್ತು.

25
ಕಳೆದ ಮೂರು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಕುಸಿತ

ಆದರೆ ಬರೋಬ್ಬರಿ ಮೂರು ದಿನಗಳ ಬಳಿಕ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದು ಆಭರಣ ಖರೀದಿಸುವವರ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

35
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 440 ರುಪಾಯಿ ಕುಸಿತ

ಹೌದು, ಇಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 440 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಮೇ 22ರಂದು 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 15,949 ರುಪಾಯಿಗೆ ಇಳಿಕೆಯಾಗಿದೆ. ನಿನ್ನೆಯ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,993 ರುಪಾಯಿಗಳಾಗಿತ್ತು.

45
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 400 ರುಪಾಯಿ ಕುಸಿತ

ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲೂ 400 ರುಪಾಯಿ ಇಳಿಕೆಯಾಗಿದೆ. ಇಂದು 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,620 ರುಪಾಯಿಗಳಾಗಿವೆ. ನಿನ್ನೆ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,660 ರುಪಾಯಿಗಳಾಗಿತ್ತು.

55
ಬೆಳ್ಳಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆಯಾದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಂದು ಕೆಜಿ ಬೆಳ್ಳಿ ಬೆಲೆ 2,85,000 ರುಪಾಯಿಗಳಾಗಿದ್ದು, ಬೆಲೆಯಲ್ಲಿ ಸ್ಥಿರತೆ ಮುಂದುವರೆದಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories