ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, 150 ರೂ ಆದರೂ ಅಚ್ಚರಿಯಿಲ್ಲ!

First Published Oct 15, 2021, 4:17 PM IST
  • ಮತ್ತೆ ಇಂಧನ ಬೆಲೆ ಏರಿಕೆಯಿಂದ ಕಂಗಾಲಾದ ಜನ
  • ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
  • ಕೇಂದ್ರದ ವಿರುದ್ಧ ಜನರ ಹಿಡಿ ಶಾಪ, 150 ರೂ ಆದರೂ ಅಚ್ಚರಿಯಿಲ್ಲ
     

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಲ್ಲಾ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಶತಕ ದಾಟಿದ್ದ ಪೆಟ್ರೋಲ್ ಬೆಲೆ ಇದೀಗ 150 ರೂಪಾಯಿ ಆದರೂ ಅಚ್ಚರಿಯಿಲ್ಲ, ಇತ್ತ ಡೀಸೆಲ್ ಪೆಟ್ರೋಲನ್ನೇ ಹಿಂಬಾಸಿಲಿಕೊಂಡು ಬರುತ್ತಿದೆ. ಮೊದಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ಮತ್ತೆ ಪೆಟ್ರೋಲ್ ಹಾಗೂ ಡೀಸೆಲೆ ಬೆಲೆ ಏರಿಕೆ ಇನ್ನಷ್ಟು ಶಾಕ್ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ 

ಅಕ್ಟೋಬರ್ 15 ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 35 ಪೈಸೆ ಏರಿಕೆ ಕಂಡಿದೆ. ಪ್ರತಿ ದಿನ ಇಂಧನ ಬೈಲೆ ಏರಿಕೆಯಾಗುತ್ತಲೇ ಇದೆ. ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನೂತನ ಬೆಲೆ ಪ್ರಕಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ  105.14 ರೂಪಾಯಿ ಆಗಿದ್ದು, ಡೀಸೆಲ್ ಬೆಲೆ 93.87 ರೂಪಾಯಿ ಪ್ರತಿ ಲೀಟರ್‌ಗೆ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್  ಬೆಲೆ 36 ಪೈಸೆ ಎರಿಕೆಯಾಗಿದೆ. ಇತರ ಎಲ್ಲಾ ನಗರಗಳಿಗಿಂತ ಬೆಂಗಳೂರಿನಲ್ಲಿ ಗರಿಷ್ಠ ಏರಿಕೆಯಾಗಿದೆ. ಏರಿಕೆ ಬಳಿಕ ಅಕ್ಟೋಬರ್ 15 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 108.80 ರೂಪಾಯಿಗೆ ತಲುಪಿದೆ. ಇನ್ನು ಡೀಸೆಲ್ ಬೆಲೆ 37 ಪೈಸೆ ಎರಿಕೆಯಾಗಿದ್ದು, ಸದ್ 99.63 ರೂಪಾಯಿ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 34 ಪೈಸೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಬೆಲೆ ಗರಿಷ್ಠ 111.08 ರೂಪಾಯಿಗೆ ತಲುಪಿದೆ. ಇನ್ನು ಡೀಸೆಲ್ ಬೆಲೆ 101.78 ರೂಪಾಯಿ ಆಗಿದೆ. ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಮುಂಬೈನಲ್ಲಿ ಇಂಧನ ಬೆಲೆ ಗರಿಷ್ಠವಾಗಿದೆ.

ಚೆನ್ನೈ ನಗರದಲ್ಲಿ ಪೆಟ್ರೋಲ್ ಬೆಲೆ 102.40 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 98.26 ರೂಪಾಯಿ ಆಗಿದೆ. ಇನ್ನು ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 105.77 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 96.98 ರೂಪಾಯಿ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಸಾರವಾಗಿ ಪ್ರತಿ ದಿನ 6 ಗಂಟೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇಕಡಾ 0.58ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 84.50 ಅಮೆರಿಕ ಡಾಲರ್ ಹೆಚ್ಚುವರಿಯಾಗಿ ನೀಡಬೇಕಿದೆ. 
 

click me!