ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ, ಮೇ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಪ್ರತಿ ತಿಂಗಳು ನಿಮಗೆ ಬರುತ್ತಿದ್ದ ಸ್ಯಾಲರಿ ಕಡಿಮೆಯಾಗಲಿದೆ.
ಸ್ಯಾಲರಿ ಉದ್ಯೋಗಿಗಳು ಹೊಸ ಲೇಬರ್ ಕೋಡ್ ಕುರಿತು ಅರಿತುಕೊಳ್ಳಲೇಬೇಕು. ಹೊಸ ಕಾರ್ಮಿಕ ನಿಯಮದ ಪ್ರಕಾರ ಪ್ರತಿ ತಿಂಗಳು ವೇತನ ಪಡೆಯುವ ಉದ್ಯೋಗಿಗಳ ವೇತನದಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಉದ್ಯೋಗಿಗಳ ಮೂಲ ವೇತನ (ಬೇಸಿಕ್ ಸ್ಯಾಲರಿ), ಪಿಎಫ್, ಗ್ರಾಚ್ಯುಟಿ ಸೇರಿದಂತೆ ಹಲವು ಬದಲಾವಣೆಯಾಗಿದೆ. ಇಂದಿನಿಂದಲೇ (ಮೇ.01) ಹೊಸ ಕೋಡ್ ಜಾರಿಯಾಗಿದೆ.
26
ಮೂಲಕ ವೇತನ ಒಟ್ಟು ಸಿಟಿಸಿಯ ಶೇಕಡಾ 50ರಷ್ಟು
ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ನಿಮಯದಲ್ಲಿ ತಿದ್ದುಪಡಿಯಿಂದ ಉದ್ಯೋಗಿಗಳ ಸ್ಯಾಲರಿ ಸ್ಟ್ರಕ್ಚರ್ ಸಂಪೂರ್ಣ ಬದಲಾವಣೆಯಾಗುತ್ತಿದೆ. ಪ್ರಮುಖವಾಗಿ ಬೇಸಿಕ್ ಸ್ಯಾಲರಿಯಲ್ಲಿ ಭಾರಿ ಬದಲಾವಣಯಾಗುತ್ತದೆ. ಈ ಪೈಕಿ ಒಬ್ಬ ಉದ್ಯೋಗಿಯ ಮೂಲ ವೇತನ (Basic salary) ಆತನ ಒಟ್ಟು ಸಂಬಳದ (CTC) ಶೇಕಾಡ 50ರಷ್ಟಿರಬೇಕು.
36
ಭತ್ಯೆ ಹೆಚ್ಚು ಮಾಡಿ, ಮೂಲ ವೇತನ ಕಡಿಮೆ ಮಾಡುವ ಸಂಪ್ರದಾಯಕ್ಕೆ ಬ್ರೇಕ್
ಹಲವು ಕಂಪನಿಗಳು ಮೂಲ ವೇತನ ಕಡಿಮೆ ನೀಡಿ, ಭತ್ಯೆಗಳನ್ನು ಹೆಚ್ಚು ಮಾಡುತ್ತದೆ. ಇದರ ಹಿಂದೆ ಹಲವು ಕಾರಣಗಳಿವೆ. ಆದರೆ ಹೊಸ ನಿಯಮದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ 50 ಸಾವಿರ ರೂಪಾಯಿ ಒಟ್ಟು ಸಿಟಿಸಿ ಆಗಿದ್ದರೆ, ಇದರಲ್ಲಿ ಮೂಲ ವೇತನ 25 ಸಾವಿರ ರೂಪಾಯಿ ಇರಬೇಕು. ಇದರಿಂದ ಉದ್ಯೋಗಿಯ ಪಿಎಫ್ ಮೊತ್ತ ಹೆಚ್ಚಾಗಲಿದೆ. ಗ್ರಾಚ್ಯುಟಿ ಮೊತ್ತ ಹೆಚ್ಚಾಗಲಿದೆ. ಇದು ಉದ್ಯೋಗಿಗೆ ಆರ್ಥಕ ಸೃಧೃಡತೆ ನೀಡಲಿದೆ.
ಈ ಮಹತ್ವದ ಬದಲಾವಣೆಯಿಂದ ಉದ್ಯೋಗಿಗಳ ಕೈಗೆ ಬರುವ ಸಂಬಳದಲ್ಲಿ ವ್ಯತ್ಯಾಸವಾಗಲಿದೆ. ಪ್ರಮುಖವಾಗಿ ವೇತನದಲ್ಲಿ ಪಿಎಫ್ ಮೊತ್ತ ಹೆಚ್ಚು ಕಡಿತಗೊಳ್ಳಲಿದೆ. ಪ್ರತಿ ತಿಂಗಳ ವೇತನದಲ್ಲಿ ಕಡಿತಗೊಂಡರೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸಲಿದೆ.
56
ಕೆಲಸದ ಸಮಯ, ರಜೆ ನಿಯಮ
ಲೇಬರ್ ಕೋಡ್‌ನಲ್ಲಿ ಕೆಲಸದ ಸಮಯ, ರಜೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ನಿಯಮ ಸರಳೀಕರಣ ಮಾಡಲಾಗಿದೆ. ವಾರಕ್ಕೆ 5 ದಿನ ಕೆಲಸ 2 ರಜೆ, ವಾರಕ್ಕೆ 4 ದಿನ ಕೆಲಸ 3 ದಿನ ರಜೆ ನೀಡುವ ಆಯ್ಕೆಯನ್ನು ಕಂಪನಿಗಳು ಮಾಡಲು ಅವಕಾಶವಿದೆ. ಆದರೆ ವಾರದಲ್ಲಿ ಒಟ್ಟು ಕೆಲಸ 48 ಗಂಟೆ ಮೀರಬಾರದು.
66
ಯಾರಿಗೆ ಹೊರೆ?
ಕಂಪನಿಗಳು ಇದೀಗ ಉದ್ಯೋಗಿಗಳಿಗೆ ಮೀಸಲಿಡುವ ಒಟ್ಟು ಸಿಟಿಸಿ ಮೊತ್ತ ಹೆಚ್ಚಿಗೆ ಮಾಡಬೇಕು. ಪ್ರಮುಖವಾಗಿ ಉದ್ಯೋಗಿ ಹಾಗೂ ಕಂಪನಿ ನೀಡುವ ಪಿಎಫ್ ಮೊತ್ತ ಹೆಚ್ಚಾಗಲಿದೆ. ಕಂಪನಿಗಳಿಗೆ ಹೊರೆಯಾಗಲಿದೆ. ಆದರೆ ಈ ಮೊತ್ತವನ್ನು ಒಟ್ಟು ಸಿಟಿಸಿಯಲ್ಲಿ ಹಾಕಿ ಕಂಪನಿಗಳು ಜಾಣ ನಡೆ ಅನುಸರಿಸಲಿದೆ.
ಯಾರಿಗೆ ಹೊರೆ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.