AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?

First Published | Sep 11, 2023, 12:07 PM IST

ಇತ್ತೀಚೆಗೆ AJIO ಹೆಸರಲ್ಲಿ ದೊಡ್ಡ ಹಗರಣವೊಂದು ಕೇಳಿಬಂದಿದೆ. ಈ ಹಿನ್ನೆಲೆ ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮುನ್ನ ಎಚ್ಚರ.. ಈ ಬಗ್ಗೆ ಇಲ್ಲಿದೆ ವಿವರ..

ಆನ್‌ಲೈನ್ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್ AJIO ಬಗ್ಗೆ ಬಹುತೇಕರಿಗೆ ಗೊತ್ತಿರುತ್ತೆ. ಹಲವರು ಇಲ್ಲಿ ಬಟ್ಟೆ ಮುಂತಾದುವನ್ನು ಶಾಪಿಂಗ್ ಮಾಡ್ತಾರೆ. ಆದರೆ, ಇತ್ತೀಚೆಗೆ ಆಜಿಯೋ ಹೆಸರಲ್ಲಿ ದೊಡ್ಡ ಹಗರಣವೊಂದು ಕೇಳಿಬಂದಿದೆ. ಈ ಹಿನ್ನೆಲೆ ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮುನ್ನ ಎಚ್ಚರ.

ಆನ್‌ಲೈನ್ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್ AJIO ಹೆಸರಿನಲ್ಲಿ ವಂಚನೆಯಿಂದ ಹಣ ವಸೂಲಿ ಮಾಡಿದ ದೊಡ್ಡ ಪ್ರಮಾಣದ ಹಗರಣದ ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ. ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ಕಾನೂನು ಪ್ರಕಾರ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಸ್ಥಿತಿ ವರದಿಯನ್ನು ಸಲ್ಲಿಸುವಂತೆ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.

Tap to resize

ಸಾರ್ವಜನಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಹೆಚ್ಚುವರಿ ನಿರ್ದೇಶನಗಳ ಅಗತ್ಯವಿದ್ದರೆ ಪೊಲೀಸರು ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಲು ಮುಕ್ತರಾಗಿದ್ದಾರೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಹೇಳಿದ್ದರೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ www.ajio.com ನ ಆಪರೇಟರ್ ರಿಲಯನ್ಸ್ ಇಂಡಸ್ಟ್ರೀಸ್ ಸಲ್ಲಿಸಿದ ದೂರನ್ನು ಅನುಸರಿಸಿ ನ್ಯಾಯಾಲಯ ಈ ಆದೇಶ ನೀಡಿದೆ. 

AJIO ಹಗರಣ ಎಂದರೇನು?
AJIO ಹಗರಣದಲ್ಲಿ ಅಪರಾಧಿಗಳು ಜನರನ್ನು ಮೋಸಗೊಳಿಸಲು ಸ್ಕ್ರ್ಯಾಚ್ ಕೂಪನ್‌ಗಳು/ಕಾರ್ಡ್‌ಗಳು ಮತ್ತು ಬಹುಮಾನದ ಹಣದ ಯೋಜನೆಗಳನ್ನು ಬಳಸುತ್ತಾರೆ ಎಂದು ಹೇಳಲಾಗುತ್ತಿದೆ. ವಂಚಕರು Ajio ಹೆಸರಿನಲ್ಲಿ ಸಂವಹನವನ್ನು ಕಳುಹಿಸುತ್ತಾರೆ ಮತ್ತು ಅಂತಹ ಯೋಜನೆಗಳಿಗೆ ಹಣವನ್ನು ಠೇವಣಿ ಮಾಡಲು ಜನರನ್ನು ಕೇಳುತ್ತಾರೆ. ಗ್ರಾಹಕರಿಗೆ 5,000 ರೂ.ಗಳಿಂದ 10,00,000 ರೂ.ವರೆಗಿನ ಮೊತ್ತವನ್ನು ಠೇವಣಿ ಮಾಡಲು ದುಷ್ಕರ್ಮಿಗಳು ಮನವಿ ಮಾಡುತ್ತಾರೆ. ಹಾಗೂ ಸ್ಕ್ರ್ಯಾಚ್ ಕಾರ್ಡ್‌ಗಳ  ಮೂಲಕ ಠೇವಣಿ ಮಾಡಿದ ಹಣವನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿಕೊಂಡು ವಂಚನೆ ಮಾಡ್ತಿದ್ದಾರೆ ಎಂದು  AJIO ಹೇಳಿದೆ. 

‘AJIO’ ಮತ್ತು ‘AJIO Online Shopping Private Limited’ ಹೆಸರಿನಲ್ಲಿ ಹಣ ಸಂಗ್ರಹಿಸುವ ಉದ್ದೇಶದಿಂದ ವಂಚಕರು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ಮನವರಿಕೆಯಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. 

ಪತ್ರಗಳು ಮತ್ತು ಸ್ಕ್ರ್ಯಾಚ್ ಕಾರ್ಡ್‌ಗಳನ್ನು ಒಳಗೊಂಡಂತೆ ಮೋಸದ ಸಂವಹನಗಳನ್ನು ಈ ಜನರು ಬಳಸುತ್ತಾರೆ. ಇದನ್ನು ಪಡೆಯುವವರಿಗೆ AJIO ನಿಂದ ಕಾನೂನುಬದ್ಧ ಸಂವಹನವನ್ನು ಕಳಿಸಲಾಗಿದೆ ಎಂದು ಬಹುತೇಕರಿಗೆ ಮನವರಿಕೆಯಾಗುತ್ತದೆ. ಅವರಿಗೆ ವ್ಯತ್ಯಾಸ ಗೊತ್ತಾಗಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆ ಸಂಬಂಧಿತ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ನ್ಯಾಯಾಲಯವು ಆದೇಶಿಸಿದೆ. ಹಾಗೂ, ಪ್ರಾರಂಭದಿಂದ ಇಲ್ಲಿಯವರೆಗಿನ ಖಾತೆಯ ಸಂಪೂರ್ಣ ಸ್ಟೇಟ್‌ಮೆಂಟ್‌, KYC ವಿವರಗಳು ಮತ್ತು ಲಭ್ಯವಿರುವ ಯಾವುದೇ ಮಾಹಿತಿ ನೀಡುವಂತೆಯೂ ಸೂಚಿಸಿದೆ.

ಅಲ್ಲದೆ, ಅವರು ಬಳಸ್ತಿರೋ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲು ಮತ್ತು ಈ ಸಂಖ್ಯೆಗಳನ್ನು ನೋಂದಾಯಿಸಿದ ವ್ಯಕ್ತಿಗಳ ಗುರುತಿನ ಬಗ್ಗೆ ದಾಖಲೆಗಳನ್ನು ಒದಗಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಸೂಚಿಸಲಾಗಿದೆ. ಕೋಲ್ಕತ್ತಾ ಮೂಲದ ವಿಳಾಸದಿಂದ AJIO ಹೆಸರಲ್ಲಿ ವಂಚನೆ ಮಾಡಲಾಗ್ತಿದೆ ಎಂದು ರಿಲಯನ್ಸ್‌ 6 ಜನರು ಹಾಗೂ ಸಂಸ್ಥೆ ವಿರುದ್ಧ ದೂರು ಸಲ್ಲಿಸಿದೆ. 

Latest Videos

click me!