ಕೇಂದ್ರ ಸರ್ಕಾರ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿದ್ದ ಜಿಎಸ್‌ಟಿ ಪರಿಹಾರ ಸೆಸ್ ಬದಲಿಗೆ ಹೊಸ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಜಾರಿ ಮಾಡಿದೆ.
26
ಹೊಸ ತೆರಿಗೆ ಫೆಬ್ರವರಿ 01ರಿಂದಲೇ ಜಾರಿ
ಈ ಹೊಸ ತೆರಿಗೆ ಫೆಬ್ರವರಿ 1 ರಿಂದ ಜಾರಿಯಾಗಿದೆ. ಇದರಿಂದಾಗಿ ಒಂದು ಪ್ಯಾಕೆಟ್ ಸಿಗರೇಟ್ ಬೆಲೆ ರೂ. 22 ರಿಂದ ರೂ.25 ರಷ್ಟು ಹೆಚ್ಚಾಗಿದೆ.
36
ಒಂದು ಪ್ಯಾಕೆಟ್ ಸಿಗರೇಟ್ ರೂ.25 ವರೆಗೆ ಏರಿಕೆ
10 ಸಿಗರೇಟ್‌ಗಳ ಪ್ಯಾಕೆಟ್ ಬೆಲೆ ರೂ.25 ರಷ್ಟು ಹೆಚ್ಚಾಗಿದೆ. ವಿಲ್ಸ್ ನೇವಿ ಕಟ್ ಬೆಲೆ ರೂ.95 ರಿಂದ ರೂ.120 ಕ್ಕೆ ಏರಿದೆ. ಗೋಲ್ಡ್ ಫ್ಲೇಕ್, ವಿಲ್ಸ್ ಕ್ಲಾಸಿಕ್ ಬೆಲೆ ರೂ.170 ರಿಂದ ರೂ.225 ಕ್ಕೆ ಹೆಚ್ಚಳವಾಗಿದೆ.
ಒಂದು ಸಿಗರೇಟ್ ಬೆಲೆ ಗಾತ್ರಕ್ಕೆ ತಕ್ಕಂತೆ ಏರಿಕೆಯಾಗಿದೆ. 65mm ಫಿಲ್ಟರ್ ಇಲ್ಲದ ಸಿಗರೇಟ್‌ಗೆ ರೂ.2.5, ಫಿಲ್ಟರ್ ಇದ್ದರೆ ರೂ.2.10 ಏರಿಕೆ. 70-75mm ಸಿಗರೇಟ್‌ಗೆ ರೂ.5.40 ಹಾಗೂ ಪ್ರೀಮಿಯಂ ಸಿಗರೇಟ್‌ಗಳಿಗೆ ರೂ.8.50 ವರೆಗೆ ಬೆಲೆ ಹೆಚ್ಚಳವಾಗಿದೆ.
56
ಸಿಗರೇಟ್ ಬೆಲೆ ಏರಿಕೆಗೆ ಸ್ವಾಗತ
ಸಿಗರೇಟ್ ಸೇದುವುದು ಸೇದೋರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ಹಾನಿಕಾರಕ. ಹೀಗಾಗಿ ಬೆಲೆ ಏರಿಕೆಯನ್ನು ಹಲವರು ಸ್ವಾಗತಿಸಿದ್ದಾರೆ.
66
ಕಳ್ಳಸಾಗಾಣಿಕೆ ಹೆಚ್ಚಾಗಬಹುದು!
ಆದರೆ, ಈ ಬೆಲೆ ಏರಿಕೆಯಿಂದ ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳು ಹೆಚ್ಚಾಗಬಹುದು ಎಂದು ವಿತರಕರು ಎಚ್ಚರಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.