ಕೇಂದ್ರ ಬಜೆಟ್‌ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾ ಕುಸಿತ; ಕಳೆದ ನಾಲ್ಕು ದಿನದ ಚಿನ್ನದ ಬೆಲೆಯ ಟ್ರ್ಯಾಕ್ ರೆಕಾರ್ಡ್ ಇಲ್ಲಿದೆ

Published : Feb 02, 2026, 11:09 AM IST

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದ್ದ ಚಿನ್ನದ ಬೆಲೆ ಇದೀಗ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದು ಗ್ರಾಹಕರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಅಂದಹಾಗೆ ಕಳೆದ ಮೂರ್ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ ಹೇಗಿತ್ತು? ಈಗ ಹೇಗಿದೆ? ನೋಡೋಣ ಬನ್ನಿ 

PREV
16
ಭಾರತೀಯರ ಪಾಲಿಗೆ ಚಿನ್ನದ ನಂಟು ಬಿಡಿಸಲಾರದ್ದು

ಮದುವೆ, ಶುಭ ಸಮಾರಂಭಗಳಿಗೆ ಚಿನ್ನ ಬೇಕೇಬೇಕು. ಅದೊಂದು ರೀತಿ ಸಂಪ್ರದಾಯವಾಗಿಬಿಟ್ಟಿದೆ. ಇದರ ಜತೆಗೆ ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಬಿಂಬಿತವಾಗಿರುವುದರಿಂದ ಚಿನ್ನ ಖರೀದಿಸಲು ಎಲ್ಲರೂ ಮುಗಿ ಬೀಳುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಯುದ್ದ ಭೀತಿ, ಅರ್ಥಿಕ ಅಸ್ಥಿರತೆಯಿಂದಾಗಿ ಎಲ್ಲರೂ ಚಿನ್ನ ಖರೀದಿಸಲು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಇದೀಗ ಮದುವೆ ಸೀಸನ್ ಹತ್ತಿರವಾಗಿರುವುದರಿಂದ ಚಿನ್ನ ಖರೀದಿಗೆ ಭಾರತೀಯರು ಮುಂದಾಗುತ್ತಿದ್ದಾರೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರುತ್ತಿತ್ತು.

26
ಜನವರಿ 29ರಂದು ದಾಖಲೆ ಮೊತ್ತಕ್ಕೆ ತಲುಪಿದ್ದ ಚಿನ್ನದ ಬೆಲೆ

ಜನವರಿ 29ರಂದು ಚಿನ್ನದ ಬೆಲೆಯಲ್ಲೇ ಒಂದೇ ದಿನ ಗಣನೀಯವಾಗಿ ಏರಿಕೆ ಕಂಡಿತ್ತು. ಅಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 16,708 ರುಪಾಯಿಗೆ ತಲುಪಿತ್ತು. ಅದೇ ರೀತಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 1,080 ರುಪಾಯಿ ಒಂದೇ ದಿನ ಏರಿಕೆ ಕಂಡು 16,395 ರುಪಾಯಿ ತಲುಪಿತ್ತು.

36
ಕಳೆದ ನಾಲ್ಕು ದಿನದಿಂದ ಚಿನ್ನದ ಬೆಲೆಯಲ್ಲಿ ನಿರಂತರ ಕುಸಿತ

ಹೀಗಾಗಿ ಚಿನ್ನ ಸಾಮಾನ್ಯ ವರ್ಗದವರ ಪಾಲಿಗೆ ಕೈಗೆಟುಕದ ಗಂಟಾಗಲಿದೆ ಎನ್ನುವಂತೆ ಭಾಸವಾಗುತ್ತಿತ್ತು. ಆದರೆ ಇದೀಗ ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ಜನವರಿ 30ರಂದು ಚಿನ್ನದ ಬೆಲೆಯಲ್ಲಿ 24 ಕ್ಯಾರಟ್‌ಗೆ 965 ಹಾಗೂ 22 ಕ್ಯಾರಟ್‌ಗೆ 885 ರುಪಾಯಿ ಇಳಿಕೆ ಕಂಡಿತ್ತು.

46
ಜನವರಿ 30ರಿಂದ ಚಿನ್ನದ ಬೆಲೆಯಲ್ಲಿ ಇಳಿಮುಖ

ಇನ್ನು ಬಜೆಟ್ ಹಿಂದಿನ ದಿನ ಅಂದರೆ ಜನವರಿ 31ರಂದು 24 ಕ್ಯಾರಟ್‌ಗೆ ಪ್ರತಿ ಗ್ರಾಮ್‌ಗೆ 862 ಹಾಗೂ 22 ಕ್ಯಾರಟ್‌ಗೆ 790 ರುಪಾಯಿ ಪ್ರತಿ ಗ್ರಾಮ್‌ಗೆ ಇಳಿಕೆ ಕಂಡಿತ್ತು. ಫೆಬ್ರವರಿ 01ರಂದು ಭಾನುವಾರವಾಗಿದ್ದರಿಂದ ಅದೇ ಬೆಲೆ ಸ್ಥಿರವಾಗಿತ್ತು. ಅಂದರೆ 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನಕ್ಕೆ 16,058 ಹಾಗೂ 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಮ್‌ಗೆ 14,720 ರುಪಾಯಿಗಳಾಗಿದ್ದವು.

56
4 ದಿನದಲ್ಲಿ ಪ್ರತಿ ಹತ್ತು ಗ್ರಾಮ್‌ಗೆ 27,320 ರುಪಾಯಿ ಇಳಿಕೆ!

ಇದೀಗ ಕೇಂದ್ರ ಬಜೆಟ್‌ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, 24 ಕ್ಯಾರಟ್ ಪ್ರತಿ ಗ್ರಾಮ್‌ಗೆ 905 ರುಪಾಯಿ ಹಾಗೂ 22 ಕ್ಯಾರಟ್ ಪ್ರತಿ ಗ್ರಾಮ್‌ಗೆ 830 ರುಪಾಯಿ ಕುಸಿತ ಕಂಡಿದೆ. ಹೀಗಾಗಿ ಇಂದಿನ 24 ಕ್ಯಾರಟ್ ಚಿನ್ನದ ಬೆಲೆ 15,153 ಹಾಗೂ 22 ಕ್ಯಾರಟ್ ಚಿನ್ನದ ಬೆಲೆ 13,890 ರುಪಾಯಿಗಳಾಗಿವೆ. ಅಂದರೆ ಕಳೆದ ನಾಲ್ಕು ದಿನದಲ್ಲಿ 24 ಕ್ಯಾರಟ್ ಪ್ರತಿ ಗ್ರಾಮ್‌ ಚಿನ್ನಕ್ಕೆ 2,732, ಪ್ರತಿ ಹತ್ತು ಗ್ರಾಮ್‌ಗೆ 27,320 ರುಪಾಯಿ ಇಳಿಕೆಯಾಗಿದೆ.

66
ಆಭರಣ ಚಿನ್ನದ ಬೆಲೆಯಲ್ಲೂ ಗಣನೀಯ ಇಳಿಕೆ

ಇನ್ನು 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲೂ ಗಣನೀಯ ಪ್ರಮಾಣದ ಇಳಿಕೆ ಕಂಡಿದೆ. ಜನವರಿ 29ಕ್ಕೆ ಹೋಲಿಸಿದರೆ, ಇಂದಿನ ಬೆಲೆಗೆ ಪ್ರತಿ ಗ್ರಾಮ್ ಚಿನ್ನಕ್ಕೆ 2505 ರುಪಾಯಿ, ಪ್ರತಿ 10 ಗ್ರಾಮ್‌ಗೆ 25,050 ರುಪಾಯಿಗಳಷ್ಟು ಇಳಿಕೆಯಾಗಿರುವುದು ಚಿನ್ನ ಖರೀದಿಸುವ ಸಾಮಾನ್ಯ ಜನ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇನ್ನೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories