ಸೆಪ್ಟೆಂಬರ್ 1, 2025 ರಿಂದ ಕ್ರೆಡಿಟ್ ಕಾರ್ಡ್ ನಿಯಮಗಳು, ಬೆಳ್ಳಿ ಆಭರಣ ಹಾಲ್‌ಮಾರ್ಕ್, ಗ್ಯಾಸ್ ದರಗಳು ಮತ್ತು ಅಂಚೆ ಸೇವೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ.
ಪ್ರತಿ ತಿಂಗಳ ಆರಂಭದಲ್ಲಿ ಕೆಲವು ನಿಯಮಗಳು ಬದಲಾಗುವುದು ಸಾಮಾನ್ಯ. ಕೆಲವೊಮ್ಮೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ, ಕೆಲವೊಮ್ಮೆ ಹಳೆಯ ನಿಯಮಗಳನ್ನು ನವೀಕರಿಸಲಾಗುತ್ತದೆ.
ಈ ಬಾರಿ, ಸೆಪ್ಟೆಂಬರ್ 1, 2025 ರಿಂದ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಇವು ನಿಮ್ಮ ಖರ್ಚು ಮತ್ತು ಉಳಿತಾಯದ ಮೇಲೆ ನೇರ ಪರಿಣಾಮ ಬೀರುತ್ತವೆ.
25
ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ತನ್ನ ಕ್ರೆಡಿಟ್ ಕಾರ್ಡ್ ಸಂಬಂಧಿತ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಇನ್ಮುಂದೆ ಸೆಪ್ಟೆಂಬರ್ 1 ರಿಂದ, ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಕೆಲವು ವ್ಯಾಪಾರಿಗಳು ಮತ್ತು ಸರ್ಕಾರಿ ವಹಿವಾಟುಗಳಿಗೆ ಮಾಡಿದ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ. ಇದರಿಂದಾಗಿ, ಕಾರ್ಡ್ ಹೊಂದಿರುವವರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ.
35
ಬೆಳ್ಳಿ ಆಭರಣ ಹಾಲ್‌ಮಾರ್ಕ್
ಬೆಳ್ಳಿ ಆಭರಣಗಳ ಶುದ್ಧತೆ ಕುರಿತು ಹೊಸ ನಿಯಮ ಜಾರಿಗೆ ಬರಲಿದೆ. ಸೆಪ್ಟೆಂಬರ್ 1 ರಿಂದ ಬೆಳ್ಳಿ ಆಭರಣಗಳಿಗೆ ಹಾಲ್‌ಮಾರ್ಕ್ ನಿಯಮ ಜಾರಿಯಾಗಬಹುದು. ಆರಂಭದಲ್ಲಿ ಇದು ಐಚ್ಛಿಕವಾಗಿರುತ್ತದೆ. ಅಂದರೆ, ಗ್ರಾಹಕರು ಬಯಸಿದರೆ ಹಾಲ್‌ಮಾರ್ಕ್ ಆಭರಣಗಳನ್ನು ಖರೀದಿಸಬಹುದು ಅಥವಾ ಸಾಮಾನ್ಯ ಆಭರಣಗಳನ್ನು ಖರೀದಿಸಬಹುದು.
ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರಗಳು ಬದಲಾಗುತ್ತವೆ. ಕೆಲವು ತಿಂಗಳುಗಳಲ್ಲಿ ಹೆಚ್ಚಾಗುತ್ತವೆ, ಕೆಲವು ತಿಂಗಳುಗಳಲ್ಲಿ ಕಡಿಮೆಯಾಗುತ್ತವೆ. ಸೆಪ್ಟೆಂಬರ್ 1 ರಂದು ಮತ್ತೆ ದರ ಬದಲಾವಣೆಯಾಗಬಹುದು. ಇದಲ್ಲದೆ, ಸಿಎನ್‌ಜಿ ಮತ್ತು ಪಿಎನ್‌ಜಿ ದರಗಳಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ.
55
ಅಂಚೆ ಸೇವೆ ಬದಲಾವಣೆ
ಅಂಚೆ ಕಚೇರಿಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಇನ್ಮುಂದೆ ರಿಜಿಸ್ಟರ್ ಪೋಸ್ಟ್ (ನೋಂದಾಯಿತ ಪೋಸ್ಟ್) ಪ್ರತ್ಯೇಕವಾಗಿ ಇಲ್ಲದೆ, ಸ್ಪೀಡ್ ಪೋಸ್ಟ್ (ವೇಗದ ಪೋಸ್ಟ್) ಸೇವೆಯೊಂದಿಗೆ ವಿಲೀನಗೊಂಡಿದೆ.
ಅಂದರೆ, ಸೆಪ್ಟೆಂಬರ್ 1 ರಿಂದ ನೀವು ಕಳುಹಿಸುವ ಎಲ್ಲಾ ಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಲಾಗುತ್ತದೆ. ಪ್ರತ್ಯೇಕ ಸೇವೆಯಾಗಿ ರಿಜಿಸ್ಟರ್ ಪೋಸ್ಟ್ ಇನ್ನು ಮುಂದೆ ಇರುವುದಿಲ್ಲ.