ಅದಾನಿ ಗ್ರೂಪ್ ಭಾರತದ ಅತಿದೊಡ್ಡ ಬಹುರಾಷ್ಟ್ರೀಯ ಕಾರ್ಪೊರೇಟ್ ಗುಂಪುಗಳಲ್ಲಿ ಒಂದಾಗಿದೆ. ಗೌತಮ್ ಅದಾನಿ ಅವರಿಂದ ಪ್ರಾರಂಭಿಸಲ್ಪಟ್ಟಿದೆ. ಅಹಮದಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಅದಾನಿ ಗ್ರೂಪ್ ಆರ್ಥಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ 2024ರ ಮೇ ತಿಂಗಳಲ್ಲಿ 200 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿತ್ತು.
ಇಂಧನ, ಬಂದರು, ಸಿಮೆಂಟ್, ಅನಿಲ, ಕೃಷಿ, ಹಸಿರು ಶಕ್ತಿ ಮುಂತಾದ ವ್ಯಾಪಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಅದಾನಿ ಗ್ರೂಪ್ 2025ರ ವಾರ್ಷಿಕ ವರದಿ ಬಿಡುಗಡೆಯಾಗಿದೆ. ಅದರಲ್ಲಿ ಪ್ರಮುಖ ಅಂಶವೆಂದರೆ ಅದಾನಿ ಗುಂಪಿನ CEOಗಳ ಸಂಬಳದ ವಿವರಗಳು ಎಲ್ಲರ ಗಮನ ಸೆಳೆದಿವೆ.