ಮೋದಿ ಸರ್ಕಾರದ ಇನ್‌ಸ್ಟಾಂಟ್ ಸಾಲ
ಕ್ಷಣದ ಹಣದ ಅವಶ್ಯಕತೆಗೆ, ಜಾಸ್ತಿ ಬಡ್ಡಿಗೆ ಪ್ರೈವೇಟ್ ಆ್ಯಪ್‌ಗಳಿಗೆ ಹೋಗೋ ಬದಲು, ಸರ್ಕಾರ ಬೇಗ ಸಾಲ ಕೊಡುತ್ತೆ. ಸರ್ಕಾರ ಬೇಗ ಸಾಲ ಕೊಡುತ್ತಾ ಅಂತ ಡೌಟ್ ಇದೆಯಾ? ಹೌದು, 3 ರಿಂದ 4 ಗಂಟೆಯಲ್ಲಿ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ಸಿಗುತ್ತೆ. ಸಾಮಾನ್ಯವಾಗಿ ತಕ್ಷಣಕ್ಕೆ ಸಾಲಬೇಕಾದಾಗ ಆ್ಯಪ್ ಮೊರೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಖಾಸಗಿ ಆ್ಯಪ್‌ಗಳಿಂದ ಸಂಕಷ್ಟ ಅನುಭವಿಸಿದವರೇ ಹೆಚ್ಚು. ಸಾಲ ಅದಕ್ಕೆ ಚಕ್ರಬಡ್ಡಿ ಸೇರಿಸಿ ಕಟ್ಟಿದರೂ ಬೆದರಿಕೆಗಳು ನಿಲ್ಲುವುದಿಲ್ಲ. ಹೀಗಾಗಿ ಇದರಿಂದ ಮುಕ್ತಿ ಪಡೆಯಲು ಸರ್ಕಾರ ಯೋಜನೆ ಮೂಲಕ ಕೇವಲ 4 ಗಂಟೆಯಲ್ಲಿ ಸಾಲ ಪಡೆಯಲು ಸಾಧ್ಯವಿದೆ.
ಕ್ಷಿಪ್ರ ಸಾಲಗಳು
ಯಾವ ಡಾಕ್ಯುಮೆಂಟ್ಸ್ ಬೇಕಾಗಿಲ್ಲ. ಮೋದಿ ಸರ್ಕಾರದ ಹಣಕಾಸು ಇಲಾಖೆ ಈ ಸ್ಪೀಡ್ ಪರ್ಸನಲ್ ಲೋನ್ ಕೊಡುತ್ತೆ. ಈ ಡಿಜಿಟಲ್ ಯುಗದಲ್ಲಿ, ಯಾವ ಡಾಕ್ಯುಮೆಂಟ್ಸ್ ಇಲ್ಲದೆ, ಕಡಿಮೆ ಸಮಯದಲ್ಲಿ ಸರ್ಕಾರದಿಂದ ವೈಯಕ್ತಿಕ ಸಾಲ ಪಡೆಯಬಹುದು. ಎಲ್ಲಾ ದಾಖಲೆ ಹಿಡಿದು ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗೆ ಅಲೆದಾಡಬೇಕಿಲ್ಲ. ಎಲವೂ ಡಿಜಿಟಲ್ ಮೂಲಕ ಯಾವುದೇ ಪೇಪರ್ ವರ್ಕ್ ಇಲ್ಲದೆ ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಸರ್ಕಾರಿ ಸಾಲಗಳು
ಈ ಸಾಲ ಪಡೆಯಲು, ಸರ್ಕಾರಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಹೋಗಿ ನಿಮ್ಮ KYC ಮುಗಿಸಬೇಕು. KYCಯಲ್ಲಿ ನಿಮ್ಮ ಡಾಕ್ಯುಮೆಂಟ್ಸ್ ಮತ್ತು ಹಿಂದಿನ ಸಾಲದ ವಿವರಗಳು ಸರ್ಕಾರಕ್ಕೆ ಆನ್‌ಲೈನ್‌ನಲ್ಲಿ ಸಿಗುತ್ತೆ. ಕೆವೈಸಿ ಸಂಪೂರ್ಣಗೊಂಡರೆ ನಿಮಗೆ ಗರಿಷ್ಠ ಸಾಲದ ಮಿತಿ ಮಾಹಿತಿಯೂ ಲಭ್ಯವಾಗಲಿದೆ. ಇನ್‌ಸ್ಟಾಂಟ್ ಸಾಲದ ಮೂಲಕ ನೀವು ಎಷ್ಟು ಸಾಲಕ್ಕೆ ಅರ್ಹರು ಅನ್ನೋ ಸಂಪೂರ್ಣ ಮಾಹಿತಿ ಬ್ಯಾಂಕ್‌ಗೆ ಲಭ್ಯವಾಗಲಿದೆ.
ವೈಯಕ್ತಿಕ ಸಾಲಗಳು
ಡಾಕ್ಯುಮೆಂಟ್ ವೆರಿಫಿಕೇಶನ್ ಆದ ಬಳಿಕ 30 ನಿಮಿಷದಿಂದ 4 ಗಂಟೆಯೊಳಗೆ ಹಣ ನಿಮ್ಮ ಖಾತೆಗೆ ಬರುತ್ತೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿಂಗಳ EMI ಪಾವತಿಯನ್ನು ನೀವೇ ನಿಗದಿ ಮಾಡ್ಕೋಬಹುದು. ಹೀಗಾಗಿ ನಿಮ್ಮ ಬಜೆಟ್‌ಗೆ ತಕ್ಕಂತೆ ಸಾಲ ಸುಲಭವಾಗಿ ತೀರಿಸಬಹುದು.
ಆನ್‌ಲೈನ್ ಸಾಲಗಳು
ಆನ್‌ಲೈನ್‌ನಲ್ಲಿ ಸಾಲ ತೆಗೆದುಕೊಳ್ಳುವಾಗ, ನಂಬಿಕಸ್ತ ಸಂಸ್ಥೆಗಳನ್ನೇ ಆಯ್ಕೆ ಮಾಡಿ. ಬಡ್ಡಿ ದರವನ್ನು ಎಚ್ಚರಿಕೆಯಿಂದ ನೋಡಿ, ಮೋಸಗಾರರಿಂದ ನಿಮ್ಮನ್ನು ಕಾಪಾಡಿಕೊಳ್ಳಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿಯದ ಸೈಟ್‌ಗಳ ಜೊತೆ ಹಂಚಿಕೊಳ್ಳಬೇಡಿ. ಸರ್ಕಾರಿ ಅಧಿಕೃತ ವೆಬ್‌ಸೈಟ್, ಅಧೀಕೃತ ಬ್ಯಾಂಕ್ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಿದೆ. ಯಾವುದೇ ನಕಲಿ ಆ್ಯಪ್, ವೆಬ್‌ಸೈಟ್ ಅಥವಾ ಜಾಹೀರಾತು ನಂಬಿ ಮೋಸ ಹೋಗಬೇಡಿ.