ನೆಟ್‌ಫ್ಲಿಕ್ಸ್‌ಲ್ಲಿನ ಸೆಕ್ಸ್ ಎಜುಕೇಶನ್ ಸೀರಿಸ್ ಭಾರಿ ಸಂಚಲನ ಮೂಡಿಸಿದೆ. ಅಸಾ ಬಟರ್‌ಫೀಲ್ಡ್ ಪಾತ್ರದಲ್ಲಿ ಒಟಿಸ್ ಮಿಲ್‌ಬರ್ನ್ ನಟಿಸಿದ ಈ ಸೀರಿಸ್ ಹಲವು ಕಾರಣಗಳಿಂದ ಪ್ರಸಿದ್ಧಿಯಾಗಿದೆ.
ಹೈಸ್ಕೂಲ್ ಹುಡುಗನ ಸೆಕ್ಸ್ ತಳಮಳ, ಕುತೂಹಲ, ಮನೆಯಲ್ಲಿ ಮುಕ್ತ ಲೈಂಗಿಕತೆ ಕುರಿತ ಸಂಭಾಷಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲವು ಸೀರಿಸ್ ಸೆಕ್ಸ್ ಎಜುಕೇಶನ್.
ಭಾರಿ ಜನಪ್ರಿಯ ಸೆಕ್ಸ್ ಎಜುಕೇಶನ್ ಸೀರಿಸ್ ಚಿತ್ರೀಕರಣಗೊಂಡಿರುವುದು ಯುಕೆಯ ಹೀಯರ್‌ಫೋರ್ಡ್‌ಶೈರ್ ಬಳಿ ಇರುವ ಸೈಮಂಡ್ ಯಾಟ್‌ನಲ್ಲಿನ ಐತಿಹಾಸಿಕ ಈ ಮನೆಯಲ್ಲಿ. ಇದೀಗ ಈ ಮನೆ ಮಾರಾಟಕ್ಕಿಡಲಾಗಿದೆ.
ಸುಂದರ ಪ್ರಕೃತಿ ತಾಣ, ನದಿ, ಕಾಡು, ಬೆಟ್ಟಗುಡ್ಡಗಳ ನಡುವಿರುವ ಮೂರು ಅಂತಸ್ತಿನ ಈ ಮನೆಯಲ್ಲಿ ಒಟಿಸ್ ಮಿಲ್‌ಬರ್ನ್ ಹಾಗೂ ಆತನ ತಾಯಿ ಸೆಕ್ಸ್ ಥರಪಿಸ್ಟ್ ನಡುವಿನ ಸಂಭಾಷಣೆ ಹಾಗೂ ಕೆಲ ಚಿತ್ರಗಣಳೇ ಈ ಸೀರಿಸ್ ಪ್ರಮುಖ ತಿರುಳು.
ಇದೀಗ ಇದೇ ಸೆಕ್ಸ್ ಎಜುಕೇಶನ್ ಚಿತ್ರೀಕರಣಗೊಂಡ ಈ ಮನೆ ಬರೋಬ್ಬರಿ 15 ಕೋಟಿ ರೂಪಾಯಿಗೆ ಮಾರಾಟಕ್ಕಿಡಲಾಗಿದೆ. ಮೂರು ಅಂತಸ್ತಿನ ಈ ಮನೆ 5 ಬೆಡ್‌ರೂಂ ಹಾಗೂ 3 ಬಾಥ್‌ರೂಂ ಹೊಂದಿದೆ.
ಕಳೆದ 21 ವರ್ಷದಿಂದ ಚಾಲೆಟ್ ಸೈಮಂಡ್ ಯಾಟ್ ಮಾಲೀಕತ್ವದಲ್ಲಿರುವ ಈ ಮನೆಯಲ್ಲಿ ಸೆಕ್ಸ್ ಎಜುಕೇಶನ್ ಮಾತ್ರವಲ್ಲ, ಹಲವು ಸಿನಿಮಾ ಹಾಗೂ ಸೀರಿಸ್‌ಗಳು ಇಲ್ಲೇ ಶೂಟ್ ಮಾಡಲಾಗಿದೆ.
ಈ ಮನೆಯಲ್ಲಿ 1912ರಲ್ಲಿ ನಿರ್ಮಿಸಲಾಗಿದೆ. ಅತ್ಯಂತ ಪುರಾತನ ಮನೆ ಇದಾಗಿದೆ. ಆದರೆ 2002ರಲ್ಲಿ ಈ ಮನೆ ಖರೀದಿಸಿದ ಬಳಿಕ ಸಂಪೂರ್ಣನವಾಗಿ ನವೀಕರಣ ಮಾಡಲಾಗಿದೆ.