ನಾರಾಯಣ ಮೂರ್ತಿ, ಅಕ್ಷತಾ ಮೂರ್ತಿ ಅವರ 8320 ಕೋಟಿ ಮೌಲ್ಯದ ಸ್ಟಾರ್ಟಪ್‌ ಕಂಪನಿ ಬಂದ್‌! ಕಾರಣ ಹೀಗಿದೆ..

First Published | Sep 28, 2023, 9:20 PM IST

ಅವರ ಅತ್ಯಂತ ವಿವಾದಾತ್ಮಕ ವ್ಯವಹಾರಗಳಲ್ಲಿ ಒಂದಾದ ಕ್ಯಾಟಮರನ್ ವೆಂಚರ್ಸ್ ಯುಕೆ ಸ್ಟಾರ್ಟಪ್‌ ಕಂಪನಿಯನ್ನು ಮುಚ್ಚಲು ಅಕ್ಷತಾ ಮೂರ್ತಿ ಸಿದ್ಧರಾಗಿದ್ದಾರೆ. 

ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಪತ್ನಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು 5500 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಆದರೆ ಈಗ ಅವರ ಅತ್ಯಂತ ವಿವಾದಾತ್ಮಕ ವ್ಯವಹಾರಗಳಲ್ಲಿ ಒಂದಾದ ಕ್ಯಾಟಮರನ್ ವೆಂಚರ್ಸ್ ಯುಕೆ ಸ್ಟಾರ್ಟಪ್‌ ಕಂಪನಿಯನ್ನು ಮುಚ್ಚಲು ಸಿದ್ಧರಾಗಿದ್ದಾರೆ.

ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಈಗ ಹಲವಾರು ವರ್ಷಗಳಿಂದ ಪರಿಶೀಲನೆಯ ವಿಷಯವಾಗಿದ್ದ ತನ್ನ ವಿವಾದಾತ್ಮಕ ಸ್ಟಾರ್ಟಪ್ ಕಂಪನಿ ಕ್ಯಾಟಮರನ್ ವೆಂಚರ್ಸ್ ಅನ್ನು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಕಂಪನಿಯ ಫೈಲಿಂಗ್ಸ್ ಹೇಳುತ್ತದೆ ಎಂದು ದಿ ಟೈಮ್ಸ್ ವರದಿ ಮಾಡಿದೆ. 

Tap to resize

ಕ್ಯಾಟಮಾರನ್ ವೆಂಚರ್ಸ್ ಯುಕೆಯನ್ನು ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್ ಸಹ-ಸ್ಥಾಪಿಸಿದ್ದು, ಇನ್ಫೋಸಿಸ್ ಸಂಸ್ಥಾಪಕ ಮತ್ತು ಭಾರತೀಯ ಬಿಲಿಯನೇರ್ ನಾರಾಯಣ ಮೂರ್ತಿ ಅವರ ಬೆಂಬಲವೂ ಇದಕ್ಕಿದೆ .ಹೂಡಿಕೆ ಸಂಸ್ಥೆಯು USD 1 ಶತಕೋಟಿ ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತದೆ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 8320 ಕೋಟಿ ರೂ. ಎಂದು ಕಂಪನಿಯ ವೆಬ್‌ಸೈಟ್‌ ಹೇಳಿದೆ. 

ಇನ್ಫೋಸಿಸ್‌ನಲ್ಲಿನ ಅಕ್ಷತಾ ಮೂರ್ತಿ ಅವರ ಪಾಲಿನಿಂದ ಬಂದ ಸಂಪತ್ತನ್ನು ಅವುಗಳನ್ನು ಲಾಭದಾಯಕವಾಗಿಸಲು ಕ್ಯಾಟಮಾರನ್ ವೆಂಚರ್ಸ್ ಸ್ಟಾರ್ಟಪ್ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದೆ. ಕಂಪನಿಯ ಹೂಡಿಕೆಗಳು ಸುಮಾರು 4.6 ಮಿಲಿಯನ್ ಅಮೆರಿಕ ಮೌಲ್ಯದ್ದಾಗಿದೆ, ಇನ್ನೊಂದೆಡೆ, ಕಂಪನಿಯು ಅಕ್ಷತಾಗೆ 5.5 ಮಿಲಿಯನ್ ಅಮೆರಿಕ ಡಾಲರ್ (Rs 45.75 ಕೋಟಿ) ಹಣ ನೀಡುವುದು ಬಾಕಿ ಇದೆ ಎಂಬುದು ಬಹಿರಂಗಪಡಿಸಿದೆ.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಈ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದು, ಸ್ಟಾರ್ಟಪ್‌ಗಳಿಗೆ ತಮ್ಮ ಫಂಡಿಂಗ್‌ನೊಂದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಆದರೆ, ಕ್ಯಾಟಮರನ್ ವೆಂಚರ್ಸ್ ಸರ್ಕಾರದ ಬೆಂಬಲಿತ ಉಪಕ್ರಮಗಳೊಂದಿಗೆ ಸಂಪರ್ಕವನ್ನು ಹೊಂದಿರಬಹುದು ಎಂದು ಬಹಿರಂಗವಾದಾಗ ವಿವಾದವು ಸ್ಫೋಟಗೊಂಡಿದೆ.

ಕ್ಯಾಟಮಾರನ್ ವೆಂಚರ್ಸ್‌ನಿಂದ ಬೆಂಬಲಿತವಾದ ಕೆಲವು ಸಂಸ್ಥೆಗಳು ಸರ್ಕಾರದ ಯೋಜನೆಗಳು ಮತ್ತು ತೆರಿಗೆದಾರರ ಹಣದಿಂದ ನಿಧಿಯ ಉಪಕ್ರಮಗಳ ಮೂಲಕ ಹೆಚ್ಚಿನ ಹಣದ ಒಳಹರಿವುಗಳನ್ನು ಪಡೆಯುತ್ತಿವೆ. ಈ ಮೂಲಕ ಕಂಪನಿಯನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ ಮತ್ತು ಅಕ್ಷತಾ ಮೂರ್ತಿ ಅವರ ಸಂಸ್ಥೆಯನ್ನು ಯಶಸ್ವಿಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ.

ಇನ್ನು, ಕೇವಲ ತೆರಿಗೆದಾರರ ಹಣಕ್ಕೆ ಸಂಬಂಧಪಟ್ಟಂತೆ ಮಾತ್ರ ಅಲ್ಲ. ಕ್ಯಾಟಮಾರನ್‌ನಲ್ಲಿ ವಿಫಲವಾದ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳ ಮಾದರಿಯನ್ನು ಸಹ ಗಮನಿಸಲಾಗಿದ್ದು, ಇದು ಕಂಪನಿಯನ್ನು ಮುಚ್ಚುವ ಅಕ್ಷತಾ ಮೂರ್ತಿ ನಿರ್ಧಾರಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. 
 

ಆದರೆ, ಅಕ್ಷತಾ ಮೂರ್ತಿಯ ಏಕೈಕ ಆದಾಯದ ಮೂಲವೆಂದರೆ ಕ್ಯಾಟಮರನ್ ವೆಂಚರ್ಸ್ ಅಲ್ಲ. ಈ ಸಂಸ್ಥೆಯ ಹೊರತಾಗಿ, ರಿಷಿ ಸುನಕ್ ಅವರ ಪತ್ನಿ ನ್ಯೂ & ಲಿಂಗ್‌ವುಡ್ ಉಡುಪು ಕಂಪನಿ ಮತ್ತು ಜಿಮ್ ಚೈನ್ ಡಿಗ್ಮ್ ಫಿಟ್‌ನೆಸ್‌ ಕಂಪನಿಯ ಸಹ ನಿರ್ದೇಶಕರಾಗಿದ್ದಾರೆ. ಅಲ್ಲದೆ, ತನ್ನ ತಂದೆಯ ಕಂಪನಿಯಾದ ಇನ್ಫೋಸಿಸ್‌ನ 0.95 ಶೇಕಡಾ ಷೇರುಗಳನ್ನು ಸಹ ಅಕ್ಷತಾ ಮೂರ್ತಿ ಹೊಂದಿದ್ದಾರೆ. 

Latest Videos

click me!