ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ರಿಷಿ ಸುನಕ್ ಜೊತೆ ಮಾತ್ರವಲ್ಲ, ತಂದೆ , ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಜೊತೆಗೂಡಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ತಂದೆ ನಾರಾಯಣ ಮೂರ್ತಿ ಸಹಯೋಗದೊಂದಿದೆ ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ ಆರಂಭಿಸಿದ ಕ್ಯಾಟಮಾರನ್ ವೆಂಚರ್ಸ್ ಸ್ಟಾರ್ಟ್ ಅಪ್ ಕಂಪನಿ ಸ್ಥಗಿತಗೊಳ್ಳುತ್ತಿದೆ.
ಬರೋಬ್ಬರಿ 8,320 ಕೋಟಿ ರೂ ಮೌಲ್ಯದ ಈ ಸ್ಟಾರ್ಟ್‌ಅಪ್ ಕಂಪನಿ ಸ್ಥಗಿತಗೊಳ್ಳಲು ಕಾರಣ ನಷ್ಟವಲ್ಲ. ಈ ಕಂಪನಿ ಭಾರಿ ಲಾಭದಲ್ಲಿದೆ. ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದೆ. ಆದರೆ ಈ ಕಂಪನಿ ಹಲವು ವಿವಾದಕ್ಕೆ ಗುರಿಯಾಗಿದೆ.
ರಿಷಿ ಸುನಕ್ ಪ್ರಧಾನಿಯಾಗುತ್ತಿದ್ದಂತೆ ಕ್ಯಾಟಮಾರನ್ ವೆಂಚರ್ಸ್ ಕಂಪನಿ ಸಂಕಷ್ಟ ಹೆಚ್ಚಾಗಿತ್ತು. ಕಾರಣ ಈ ಕಂಪನಿ ಬ್ರಿಟನ್ ಸರ್ಕಾರದ ಹಲವು ಪ್ರಾಜೆಕ್ಟ್ ಪಡೆದಿದೆ. ತೆರಿಗೆದಾರರ ಹಣವನ್ನು ಈ ಕಂಪನಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಅನ್ನೋ ಗಂಭೀರ ಆರೋಪವಿದೆ.
ಸರ್ಕಾರದ ಯೋಜನೆಗಳಿಂದ ಭಾರಿ ಮೊತ್ತದ ಹಣ ಸ್ಟಾರ್ಟ್ಅಪ್ ಕಂಪನಿ ಪಡೆಯುತ್ತಿದೆ.ಈ ಮೂಲಕ ಅಕ್ಷತಾ ಮೂರ್ತಿ ಕಂಪನಿ ಹೆಚ್ಚು ಆದಾಯ ಹಾಗೂ ಯಶಸ್ವಿಯಾಗಿ ಕಂಪನಿಯಾಗಿ ಬೆಳೆದಿದೆ ಅನ್ನೋ ಆರೋಪವಿದೆ.
Akshata Murthy
ಕಳೆದ ಕೆಲ ವರ್ಷಗಳಿಂದ ಕ್ಯಾಟಮಾರನ್ ವೆಂಚರ್ಸ್ ಮೇಲೆ ಆರೋಪ, ಟೀಕೆಗಳು ಕೇಳಿಬರುತ್ತಲೇ ಇದೆ. ರಿಷಿ ಸುನಕ್ ಪ್ರಧಾನಿಯಾಗುತ್ತಿದ್ದಂತೆ ಈ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿತು.
ತೀವ್ರ ತಲೆನೋವಿಗೆ ಕಾರಣವಾಗಿರುವ ಕ್ಯಾಟಮಾನರನ್ ವೆಂಚರ್ಸ್ ಸ್ಟಾರ್ಟ್ಅಪ್ ಕಂಪನಿಯನ್ನು ಇದೀಗ ಅಕ್ಷತಾ ಮೂರ್ತಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಅಕ್ಷತಾ ಮೂರ್ತಿ ಕ್ಯಾಟಮಾರನ್ ವೆಂಚರ್ಸ್ ಜೊತೆಗೆ ಲಿಂಗ್‌ವುಡ್, ಡಿಜಿಮ್ ಜಿಮ್ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.