ಮುಖೇಶ್‌ ಅಂಬಾನಿ ಸೊಸೆಗೆ ಚಿನ್ನದ ಕಾರು ಕೊಟ್ಟಿದ್ದು ನಿಜವೇ?

First Published | Nov 26, 2020, 5:17 PM IST

ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಹಿರಿಯ ಮಗ ಆಕಾಶ್ ಅಂಬಾನಿ ವಿವಾಹವನ್ನು ಶ್ಲೋಕ ಮೆಹ್ತಾ ಜೊತೆ ನಿಶ್ಚಯವಾದಾಗ ಸೊಸೆಗೆ ಗೋಲ್ಡ್‌ ಪ್ಲೇಟೆಡ್ ಕಾರು ಗಿಫ್ಟ್‌ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಚಿನ್ನ ಲೇಪಿತ ಕಾರನ್ನು ದುಬೈನಲ್ಲಿ ತಯಾರಿಸಲಾಗುತ್ತಿದ್ದು, ಅದರ ಮೌಲ್ಯ 10 ಕೋಟಿ ರೂ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸುದ್ದಿ ಸುಳ್ಳೆನ್ನುವುದು ನಂತರ ಪತ್ತೆಯಾಯಿತು. ಶ್ಲೋಕಾ ಮೆಹ್ತಾ  ವಿಶ್ವದ ಅತ್ಯಂತ ದುಬಾರಿ ಬ್ರಾಂಡ್‌ಗಳ ಕಾರುಗಳನ್ನು ಹೊಂದಿದ್ದಾರೆ. ಮುಖೇಶ್ ಅಂಬಾನಿ, ಆಂಟಿಲಿಯಾದ 6 ಮಹಡಿಗಳ ಪಾರ್ಕಿಂಗ್ ಸ್ಥಳದಲ್ಲಿ 150ಕ್ಕೂ ಹೆಚ್ಚು ಕಾರುಗಳಿವೆ. ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಫೇವರೇಟ್‌ ಕಾರು ಯಾವುದು ಗೊತ್ತಾ?

ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿಯ ಮದುವೆಗೆ ಮುಂಚೆಯೇ, ಮುಖೇಶ್ ಅಂಬಾನಿ ಅವರು ತಮ್ಮ ಭಾವಿ ಸೊಸೆಗೆ ಚಿನ್ನದಿಂದ ಮಾಡಿದ ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.
ಈ ಕಾರಿನ ಆರ್ಡರ್‌ ದುಬೈನಲ್ಲಿ ಮಾಡಲಾಗಿದೆ ಎಂಬ ಸುದ್ದಿ ಸಖತ್‌ ವೈರಲ್‌ ಆಗಿತ್ತು.
Tap to resize

ಮುಖೇಶ್ ಮತ್ತು ನೀತಾ ಅಂಬಾನಿ ತಮ್ಮ ಸೊಸೆ ಶ್ಲೋಕಾ ಮೆಹ್ತಾ ಜೊತೆ ಉತ್ತಮ ಬಾಂಡಿಗ್‌ ಹೊಂದಿದ್ದಾರೆ.ಶ್ಲೋಕಾ ಮೆಹ್ತಾ ಅವರ ಜನ್ಮದಿನದಂದು ಮುಖೇಶ್ ಅಂಬಾನಿ ಅವರು ತಮ್ಮ ಕೈಗಳಿಂದ ಕೇಕ್ ತಿನ್ನಿಸುತ್ತಿದ್ದಾರೆ. ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅಂಬಾನಿ ಕುಟುಂಬದಲ್ಲಿ ಕಾರುಗಳ ಕೊರತೆ ಇಲ್ಲ.ವಿಶ್ವದ ಅತ್ಯಂತ ದುಬಾರಿ ಬ್ರಾಂಡ್‌ಗಳ ಕಾರುಗಳನ್ನು ಹೊಂದಿದ್ದಾರೆ. ಆದರೆ, ಶ್ಲೋಕಾ ಮೆಹ್ತಾ Mercedes Maybach 660 Guard ಓಡಿಸಲು ಇಷ್ಟಪಡುತ್ತಾರೆ. ನೀತಾ ಅಂಬಾನಿ ಕೂಡ ಈ ಕಾರನ್ನು ಇಷ್ಟಪಡುತ್ತಾರೆ. ಇದರ ಬೆಲೆ 4 ಕೋಟಿ ರೂ.
5 ಕೋಟಿ ರೂ ಬೆಲೆಯ Mercedes Maybach 62 ಸಹ ಶ್ಲೋಕಾರ ಫೇವರೇಟ್‌ ಕಾರು.
ಇದು ನೀತಾ ಅಂಬಾನಿಯವರ ನೆಚ್ಚಿನ ಕಾರು. ಶ್ಲೋಕಾ ಕೂಡ ಇದನ್ನು ಡ್ರೈವ್‌ ಮಾಡಲು ಇಷ್ಟಪಡುತ್ತಾರೆ. ಬಿಎಂಡಬ್ಲ್ಯು 760 ಲಿ ಹೆಸರಿನ ಈ ಕಾರಿನ ಬೆಲೆ ಸುಮಾರು 8.5 ಕೋಟಿ ರೂ. ಮತ್ತು ಇದು ಬುಲೆಟ್‌ ಪ್ರೂಫ್‌ ಕಾರು.
ಸುಮಾರು 4 ಕೋಟಿ ಮೌಲ್ಯದ Bentley Continental Flying Spurಅನ್ನು ಸಹ ಶ್ಲೋಕಾ ಇಷ್ಟ ಪಡುತ್ತಾರೆ. ಈ ಕಾರಿನಲ್ಲಿ ಅತ್ತೆ ನೀತಾ ಅಂಬಾನಿ ಜೊತೆ ಶ್ಲೋಕಾ ಮೆಹ್ತಾ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.
Bentley Bentayga ಅಂಬಾನಿ ಸೊಸೆಯ ಫೇವರೇಟ್‌ ಕಾರುಗಳಲ್ಲಿ ಒಂದಾಗಿದೆ. 301 ಕಿ.ಮೀ ವೇಗದಲ್ಲಿ ಚಲಿಸುವ ಇದರ ಬೆಲೆ ಸುಮಾರು 8 ಕೋಟಿ. ಆಕಾಶ್ ಅಂಬಾನಿ ಕೂಡ ಈ ಕಾರನ್ನು ಓಡಿಸಲು ಇಷ್ಟಪಡುತ್ತಾರೆ.
ಶ್ಲೋಕಾ ಮೆಹ್ತಾ Rolls Royce Phantom ಅನ್ನು ಸಹ ಪ್ರೀತಿಸುತ್ತಾರೆ. ಇದೊಂದು ದೊಡ್ಡ ಕಾರು. ಇದರ ಬೆಲೆ ಸುಮಾರು 4 ಕೋಟಿ.
Aston Martin Rapide ಇದು ವಿಶ್ವದ ಐಷಾರಾಮಿ ಕಾರುಗಳಲ್ಲಿ ಒಂದಾಗಿದ್ದು ಬೆಲೆ ಸುಮಾರು 4 ಕೋಟಿ.
ಅವರ ಕಾರು ಸಂಗ್ರಹದಲ್ಲಿ Rolls Royce Phantom Drophead ಸಹ ಒಳಗೊಂಡಿದೆ, ಇದು ವಿಶ್ವದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ ಸುಮಾರು 8 ಕೋಟಿ. ಈ ಕಾರು ಕೇವಲ 5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಹೆಚ್ಚಿಸುತ್ತದೆ.

Latest Videos

click me!