ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತನಾದ ಎಲೋನ್ ಮಸ್ಕ್!‌

First Published Nov 26, 2020, 7:44 AM IST

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್‌, ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದಲ್ಲಿ ವಿಶ್ವದ ನಂಬರ್ 1 ಶ್ರೀಮಂತರಾಗಿದ್ದ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ಪಟ್ಟಕ್ಕೇರಿದ್ದಾರೆ.

ವಿಶ್ವದ ಬೃಹತ್ ಎಲೆಕ್ಟ್ರಿಕ್ ವಾಹನಗಳ ತಯಾರಕ ಟೆಸ್ಲಾ ಕಂಪನಿಯ ಮಾಲೀಕನಾದ ಎಲೋನ್‌ ಮಸ್ಕ್‌ ಒಟ್ಟು ಸಂಪತ್ತಿನ ನಿವ್ವಳ ಮೌಲ್ಯವು 7.2 ಬಿಲಿಯನ್‌ ಡಾಲರ್ ಏರಿಕೆಗೊಂಡು ಒಟ್ಟು 27.9 ಶತಕೋಟಿಗೆ ಏರಿದೆ. ಟೆಸ್ಲಾ ಷೇರು ಬೆಲೆಯಲ್ಲಿ ಇದರಿಂದ ಮತ್ತಷ್ಟು ಏರಿಕೆಗೆ ಕಾರಣವಾಗಿದೆ.
undefined
ಈ ವರ್ಷ ಕೋವಿಡ್-19 ಸಾಂಕ್ರಾಮಿಕದಿಂದ ಅನೇಕ ಬಿಲಿಯನೇರ್‌ಗಳು ತಮ್ಮ ಸಂಪತ್ತಿನ ನಷ್ಟ ಅನುಭವಿಸಿದ್ದರೆ, ಮಸ್ಕ್‌ ಈ ವರ್ಷ ತನ್ನ ನಿವ್ವಳ ಆಸ್ತಿಗೆ 100.3 ಶತಕೋಟಿ ಸೇರಿಸಿದ್ದಾರೆ.
undefined
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ವಿಶ್ವದ 500 ಶ್ರೀಮಂತರಲ್ಲಿ ಎಲೋನ್ ಮಸ್ಕ್‌ರಷ್ಟು ಸಂಪಾದನೆ ಮತ್ತೊಬ್ಬರು ಮಾಡಿಲ್ಲ.
undefined
ಜನವರಿಯಲ್ಲಿ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಎಲೋನ್ ಮಸ್ಕ್‌ 35ನೇ ಶ್ರೇಯಾಂಕ ಹೊಂದಿದ್ದರು. ಆದರೆ ಈಗ ಯಾರೂ ಊಹಿಸದ ರೀತಿಯಲ್ಲಿ ಮಸ್ಕ್‌ ವಿಶ್ವದ ಎರಡನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
undefined
ಇದು ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಕಾರ್ಪ್ ಅಥವಾ ಸ್ಪೇಸ್‌ಎಕ್ಸ್‌ನಲ್ಲಿನ ಪಾಲುಗಿಂತ ನಾಲ್ಕು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.
undefined
click me!