ಭಾರತದ ಲಕ್ಷುರಿ ಶಾಪಿಂಗ್ ಮಾಲ್ ತೆರೆದ ಅಂಬಾನಿ, ಅಂಗಡಿಯ ತಿಂಗಳ ಬಾಡಿಗೆ 40 ಲಕ್ಷ ರೂ!

First Published Sep 17, 2023, 3:17 PM IST

ಮುಕೇಶ್ ಅಂಬಾನಿ ಮಾಲೀಕತ್ವದ ಶಾಪಿಂಗ್ ಮಾಲ್ ಆರಂಭಗೊಳ್ಳುತ್ತಿದೆ. ಇದು ಭಾರತದ ಅತ್ಯಂತ ಐಷಾರಾಮಿ ಶಾಪಿಂಗ್ ಮಾಲ್. ಅಂತಾರಾಷ್ಟ್ರೀಯ ಮಟ್ಟದ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳು ಮಾತ್ರ ಈ ಶಾಪಿಂಗ್ ಮಾಲ್‌ನಲ್ಲಿರಲಿದೆ. ಈ ಶಾಪಿಂಗ್ ಮಾಲ್‌ನಲ್ಲಿ ಒಂದು ಶಾಪ್‌ನ ತಿಂಗಳ ಬಾಡಿಗೆ 40 ಲಕ್ಷ ರೂಪಾಯಿ.

ಮುಕೇಶ್ ಅಂಬಾನಿಗೆ ಹೂಡಿಕೆ ಮಾಡಿದ ಹಣವನ್ನು ಡಬಲ್ ಆಗಿ ಹಿಂಪಡೆಯುವುದು ಹೇಗೆ ಅನ್ನೋದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಅಂಬಾನಿ ರಿಲಯನ್ಸ್ ಗ್ರೂಪ್ ಕೋಟಿ ಕೋಟಿ ಆದಾಯ ಗಳಿಸುತ್ತಿರುವುದು. ಇದೀಗ ಅಂಬಾನಿ ಭಾರತದ ಅತ್ಯಂತ ಲಕ್ಷುರಿ ಶಾಪಿಂಗ್ ಮಾಲ್ ಆರಂಭಿಸುತ್ತಿದ್ದಾರೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ವಲಯದಲ್ಲಿ ಹೊಚ್ಚ ಹೊಸ ಶಾಪಿಂಗ್ ಮಾಲ್ ತಲೆ ಎತ್ತಿದೆ. ಜಿಯೋ ವರ್ಲ್ಡ್ ಪ್ಲಾಜಾ ಹೆಸರಿನ ಈ ಶಾಪಿಂಗ್ ಮಾಲ್‌ನಲ್ಲಿ ಅತ್ಯಂತ ದುಬಾರಿ ವಸ್ತುಗಳು ಮಾತ್ರ ಇರಲಿದೆ.

Latest Videos


ಈ ಶಾಪಿಂಗ್ ಮಾಲ್‌ ಐಷಾರಾಮಿ ಹಾಗೂ ಎಕ್ಸ್‌ಕ್ಲೂಸೀವ್ ಬ್ರ್ಯಾಂಡ್‌ಗಳಿಗೆ ಮಾತ್ರ ಪ್ರವೇಶ. ಈ ಮಾಲ್ ಒಳಗಡೆ ಒಂದು ಶಾಪ‌ಗೆ ತಿಂಗಳ ಬಾಡಿಗೆ ಕನಿಷ್ಠ 40 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.

ಐಷಾರಾಮಿ ಕ್ಲೂಥ್ ಗುಕಿ, ಕಾರ್ಟಿಯರ್, ಲೂಯಿಸ್ ವಿಟ್ಟನ್ ಸೇರಿದಂತೆ ಅಂತಾರಾಷ್ಟ್ರೀಯ ಬ್ರಾಂಡೆಡ್ ಟೆಕ್ಸ್‌ಟೈಲ್ ಈಗಾಗಲೇ ಜಿಯೋ ವರ್ಲ್ಡ್ ಪ್ಲಾಜಾ ಜೊತೆ ಒಪ್ಪಂದ ಮಾಡಿಕೊಂಡಿದೆ.

ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮುಖ್ಯಸ್ಥೆಯಾಗಿರುವ ರಿಲಯನ್ಸ್ ರಿಟೇಲ್ ಜೊತೆ ಪಾರ್ಟ್ನರ್‌ಶಿಪ್‌ನಲ್ಲಿರುವ ಹಲವು ಅಂತಾರಾಷ್ಟ್ರೀಯ ಬ್ರಾಡೆಂಡ್ ಕಂಪನಿಗಳು ಶಾಪ್ ಈ ಮಾಲ್‌ನಲ್ಲಿ ಇರಲಿದೆ.

ಗುಕಿ, ಲೂಯಿಸ್ ವಿಟ್ಟನ್ ಸೇರಿದಂತೆ ಹಲವು ಬ್ರಾಡೆಂಡ್ ಕಂಪನಿಗಳು ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಶಾಪ್ ತೆರೆಯಲು ಒಪ್ಪಂದ ಮಾಡಿಕೊಂಡಿದೆ. 9 ವರ್ಷದ ಒಪ್ಪಂದ ಇದಾಗಿದ್ದು, ಪ್ರತಿ ತಿಂಗಳು ಒಂದು ಶಾಪ್‌ಗೆ 40.50 ಲಕ್ಷ ರೂಪಾಯಿಯಿಂತ ಬಾಡಿಗೆ ಪಾವತಿ ಮಾಡಬೇಕು.

ಬರ್ಬೆರಿ, ಬಲ್ಗಾರಿ, ಡಿಯೋರ್, ರಿಮೋವಾ, ರಿಚಮೊಂಟ್, ಕೆರಿಂಗ್ ಸೇರಿದಂತೆ 15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಖ್ಯಾತಿಯ ಬ್ರಾಂಡೆಡ್ ಕಂಪನಿಗಳು ಈಗಾಗಲೇ ರಿಲಯನ್ಸ್ ಜಿಯೋ ವರ್ಲ್ಡ್ ಪ್ಲಾಜಾ ಜೊತೆ ಒಪ್ಪಂದ ಮಾಡಿಕೊಂಡಿದೆ.

ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಈ ಐಷಾರಾಮಿ ಮಾಲ್ ಉದ್ಘಾಟನೆಗೊಳ್ಳಲಿದೆ.  ಈ ಶಾಪಿಂಗ್ ಮಾಲ್‌ಗೆ ಜನಸಾಮಾನ್ಯರಿಗೆ ಪ್ರವೇಶದ ಕುರಿತು ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

click me!