49,000 ಕೋಟಿ ರೂ. ಮೌಲ್ಯದ ಮಾರುಕಟ್ಟೆಗೆ ಲಗ್ಗೆ ಇಟ್ಟ ರಿಲಯನ್ಸ್‌: ಇನ್ಮೇಲೆ ಈ ಕ್ಷೇತ್ರದಲ್ಲೂ ಅಂಬಾನಿಯದ್ದೇ ದರ್ಬಾರ್‌!

First Published | Oct 5, 2023, 4:30 PM IST

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್ (RIL) ಇತ್ತೀಚೆಗೆ ಗ್ರೇಟರ್ ನೋಯ್ಡಾದಲ್ಲಿ ನಡೆದ 'ಬ್ಯಾಟರಿ ಶೋ' ಸಮಾರಂಭದಲ್ಲಿಎಲೆಕ್ಟ್ರಿಕ್ ವಾಹನಗಳಿಗಾಗಿ ತನ್ನ ಹೊಸ ಉತ್ಪನ್ನ, ಸ್ವಾಪ್ ಮಾಡಬಹುದಾದ ಮತ್ತು ವಿವಿಧೋದ್ದೇಶ ಬ್ಯಾಟರಿ ಸಂಗ್ರಹ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ.

ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ ಇತ್ತೀಚೆಗೆ ಹೊಸ ಹೊಸ ವಲಯಕ್ಕೆ ಲಗ್ಗೆ ಇಡುತ್ತಿದೆ. ಹಾಗೂ, ನಾನಾ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ತಿದೆ ಅಥವಾ ಹೆಚ್ಚು ಷೇರುಗಳನ್ನು ಖರೀದಿಸುತ್ತಿದೆ. ಈಗ 49000 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಮಾರುಕಟ್ಟೆಗೆ ಮುಖೇಶ್‌ ಅಂಬನಿ ಲಗ್ಗೆ ಇಟ್ಟಿದ್ದಾರೆ. 

ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ (ಇವಿ) ವಲಯದಲ್ಲಿ ದೊಡ್ಡ ಸಾಧಕನಾಗುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್ (RIL) ಇತ್ತೀಚೆಗೆ ಗ್ರೇಟರ್ ನೋಯ್ಡಾದಲ್ಲಿ ನಡೆದ 'ಬ್ಯಾಟರಿ ಶೋ' ಸಮಾರಂಭದಲ್ಲಿಎಲೆಕ್ಟ್ರಿಕ್ ವಾಹನಗಳಿಗಾಗಿ ತನ್ನ ಹೊಸ ಉತ್ಪನ್ನ, ಸ್ವಾಪ್ ಮಾಡಬಹುದಾದ ಮತ್ತು ವಿವಿಧೋದ್ದೇಶ ಬ್ಯಾಟರಿ ಸಂಗ್ರಹ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ.

Latest Videos


ಈ ಉತ್ಪನ್ನವು ಮುಖೇಶ್‌ ಅಂಬಾನಿ ನೇತೃತ್ವದ ಸಮೂಹದ ಬೃಹತ್ 10 ಬಿಲಿಯನ್ ಡಾಲರ್‌ ಮೌಲ್ಯದ ಶುದ್ಧ ಇಂಧನ (ಕ್ಲೀನ್ ಎನರ್ಜಿ) ಪುಶ್‌ನ ಒಂದು ಭಾಗವಾಗಿದೆ. ಕುತೂಹಲಕಾರಿಯಾಗಿ, ಹೊಸ RIL ಉತ್ಪನ್ನದ ವ್ಯಾಪ್ತಿಯು ಕೇವಲ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರವಲ್ಲ.. ಏಕೆಂದರೆ ತೆಗೆಯಬಹುದಾದ ಮತ್ತು ಬದಲಾಯಿಸಬಹುದಾದ ಬ್ಯಾಟರಿಗಳನ್ನು ಇನ್ವರ್ಟರ್ ಮೂಲಕ ಗೃಹೋಪಯೋಗಿ ಉಪಕರಣಗಳಿಗೆ ಶಕ್ತಿ ನೀಡಲು ಸಹ ಬಳಸಬಹುದು ಎಂದು ರಾಯಿಟರ್ಸ್ ವರದಿ ಮಾಡಿದೆ. 

 ಭಾರತೀಯ EV ಬ್ಯಾಟರಿ ಮಾರುಕಟ್ಟೆಯು 2023 ರಲ್ಲಿ 5.9 ಬಿಲಿಯನ್ ಡಾಲರ್‌ (49000 ಕೋಟಿ ರೂ. ಗಿಂತ ಹೆಚ್ಚು) ಹಾಗೂ 2028 ರ ವೇಳೆಗೆ ಇದು 10.14  ಬಿಲಿಯನ್ ಡಾಲರ್‌ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. 

ನವೀಕರಿಸಬಹುದಾದ ಇಂಧನ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಹೊಸ ಉತ್ಪನ್ನವು, ಒಬ್ಬ ವ್ಯಕ್ತಿಯು ಸಾರಿಗೆಗಾಗಿ ಮತ್ತು ಗೃಹೋಪಯೋಗಿ ಉಪಕರಣಗಳಿಗೆ ಶಕ್ತಿ ನೀಡಲು ಅದೇ ಬ್ಯಾಟರಿಯನ್ನು ಬಳಸಬಹುದು ಎಂಬ ಹೊಸ ಕಲ್ಪನೆಯನ್ನು ಉತ್ತೇಜಿಸುತ್ತದೆ. ಈ ಬ್ಯಾಟರಿಗಳನ್ನು ರಿಲಯನ್ಸ್‌ನ ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಅಥವಾ ಮೇಲ್ಛಾವಣಿಯ ಸೌರ ಫಲಕಗಳನ್ನು ಬಳಸಿಕೊಂಡು ಮನೆಯವರು ರೀಚಾರ್ಜ್ ಮಾಡುತ್ತಾರೆ ಎಂದು ಅನಾಮಧೇಯ ಕಾರ್ಯನಿರ್ವಾಹಕರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಹೊಸ ಉತ್ಪನ್ನವು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನಿಂದ ಎರಡು ಪ್ರಮುಖ ಸ್ವಾಧೀನಗಳನ್ನು ಅನುಸರಿಸುತ್ತದೆ. ಅಲ್ಲಿ ಅದು 2021 ಮತ್ತು 2022 ರಲ್ಲಿ ಸುಮಾರು 200 ಮಿಲಿಯನ್‌ ಡಾಲರ್‌ಗೆ ಎರಡು ಬ್ಯಾಟರಿ ಕಂಪನಿಗಳಾದ ಫ್ಯಾರಡಿಯನ್ ಮತ್ತು ಲಿಥಿಯಂ ವರ್ಕ್ಸ್ ಅನ್ನು ಖರೀದಿಸಿತು. ಈ ಪರಿಕಲ್ಪನೆಯು ಈಗಾಗಲೇ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಹಂತದಲ್ಲಿದೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರನ್ನು ತಲುಪಬಹುದು ಎಂದು ಸ್ಟಾಲ್‌ನಲ್ಲಿರುವ ರಿಲಯನ್ಸ್ ಕಾರ್ಯನಿರ್ವಾಹಕರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.

click me!