ಡ್ರೈವರ್ ಕೆಲಸ ಬಿಟ್ಟು ಚಾಯ್‌ವಾಲ ಆದ ಬೆಂಗಳೂರಿನ ಮುನಿಸ್ವಾಮಿ, ತಿಂಗಳಿಗೆ 3 ಲಕ್ಷ ಆದಾಯ!

First Published | Oct 3, 2023, 4:46 PM IST

ಕಡು ಬಡನತ, 4ನೇ ತರಗತಿಗೆ ಶಾಲೆ ಅಂತ್ಯ. ಪೋಷಕರಿಗೆ ನೆರವಾಗಲು ಕ್ಲೀನರ್, ಸಹಾಯಕ, ಕೂಲಿ ಸೇರಿದಂತೆ ಹಲವು ಕೆಲಸಗಳನ್ನು ಮಾಡಿ ಕೊನೆಗೆ ಡ್ರೈವರ್ ಆಗಿ 7 ವರ್ಷ ಕೆಲಸ ಮಾಡಿದ್ದ. ಆದರೆ ಈ ಕೆಲಸವನ್ನೂ ಬಿಟ್ಟು ಕೊನೆಗೆ ಚಾಯ್‌ವಾಲ ಆದ ಬೆಂಗಳೂರಿನ ಮುನಿಸ್ವಾಮಿ ಡೇನಿಯಲ್ ಅದೃಷ್ಠವೇ ಬದಲಾಗಿದೆ. ಇದೀಗ ತಿಂಗಳಿಗೆ 3 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. 

ಬೆಂಗಳೂರಿನ ಮುನಿಸ್ವಾಮಿ ಡೇನಿಯಲ್ ರೋಚಕ ಪಯಣ ಹಲವರಿಗೆ ಸ್ಪೂರ್ತಿಯಾಗಿದೆ. ಶೂನ್ಯದಿಂದ ಆರಂಭಿಸಿ, ಹಲವು ಏಳು ಬೀಳುಗಳನ್ನು ಕಂಡ ಮುನಿಸ್ವಾಮಿ ಡೇನಿಯಲ್ ಕೊನೆಗೆ ಚಾಯ್‌ವಾಲಾ ಆಗಿ ಸಕ್ಸಸ್ ಕಂಡ ಬದುಕಿನ ಕತೆ ಇದು.
 

ಬಾಲ್ಯದಲ್ಲಿ ಕಡು ಬಡತನದಿಂದ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. 4ನೇ ತರಗತಿಗೆ ಮುನಿಸ್ವಾಮಿ ಡೇನಿಯಲ್ ವಿದ್ಯಾಭ್ಯಾಸ ಅಂತ್ಯಗೊಂಡಿತು. ಬಳಿಕ ಪೋಷಕರ ಸಹಾಯಕನಾಗಿ, ಕೂಲಿ ಕೆಲಸಗಾರನಾಗಿ, ಕ್ಲೀನರ್ ಆಗಿ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗಿದ್ದರು.
 

Tap to resize

10ನೇ ವಯಸ್ಸಿನಿಂದ ಮುನಿಸ್ವಾಮಿ ಡೇನಿಯಲ್ ಒಂದೊಂದು ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ ಯಾವುದೂ ಕೂಡ ಕೈಹಿಡಿಯಲಿಲ್ಲ. ಜೊತೆಗೆ ಮುಂದುವರಿಸಲು ಮುನಿಸ್ವಾಮಿಗೆ ಮನಸ್ಸಾಗಲಿಲ್ಲ.

ಡ್ರೈವರ್ ಆಗಿ ಕೆಲಸಕ್ಕೆ ಸೇರಿದ ಮನಿಸ್ವಾಮಿ 7 ವರ್ಷ ಚಾಲಕನಾಗಿ ಕುಟುಂಬವನ್ನು ಸಾಕಿದ್ದ. ಆದರೆ ಈ ಕೆಲಸದಲ್ಲೂ ತೃಪ್ತಿ ಕಾಣಲಿಲ್ಲ. ಹೀಗಾಗಿ ಏನಾದರು ಸ್ವಂತ ಮಾಡಬೇಕು ಅನ್ನೋ ತುಡಿತ ಹೆಚ್ಚಾಯಿತು.

2007ರಲ್ಲಿ ಮುನಿಸ್ವಾಮಿ ಧೈರ್ಯ ಮಾಡಿ ಹೆಚ್ಚಿನ ಹಣ ಹೂಡಿಕೆ ಇಲ್ಲದೆ ಟೀ ಸ್ಟಾಲ್ ಆರಂಬಿಸಿದ್ದರು. ಟೀ ಸ್ಟಾಲ್ ಆರಂಭಿಸುವಾಗ ಮುನಿಸ್ವಾಮಿಗೆ ವ್ಯಾಪಾರದಲ್ಲಿ ಯಾವುದೇ ಅನುಭವ ಇರಲಿಲ್ಲ. 

ಬೆಳಗ್ಗೆ 4 ಗಂಟೆಗೆ ಎದ್ದು ಖುದ್ದು ಟೀ ತಯಾರಿಸಿ ಮಾರಾಟ ಮಾಡುತ್ತಿದ್ದ ಮುನಿಸ್ವಾಮಿ ಹಂತ ಹಂತವಾಗಿ ವ್ಯಾಪಾರ ವಿಸ್ತರಿಸಿದರು.  ಇದೀಗ ಬೆಂಗಳೂರಿನಲ್ಲಿ ಅತೀ ದೊಡ್ಡ 3 ಟೀ ರೆಸ್ಟೋರೆಂಟ್ ತೆರೆದಿದ್ದಾರೆ. 

ಮುನಿಸ್ವಾಮಿ ಪ್ರತಿ ತಿಂಗಳು ಎಲ್ಲಾ ಖರ್ಚುಗಳನ್ನು ಕಳೆದು 3 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಹಲವರಿಗೆ ಉದ್ಯೋಗ ನೀಡಿದ್ದಾರೆ. ಎಲ್ಲವನ್ನೂ ನಿಭಾಯಿಸುತ್ತಿರುವ ಮುನಿಸ್ವಾಮಿ ವ್ಯಾಪಾರ ದಿನದಿಂದ ದಿನಕ್ಕೆ ವೃದ್ಧಿಸಿದೆ.

Latest Videos

click me!