ಇಂಗ್ಲೆಂಡ್‌ನಲ್ಲಿ 592 ಕೋಟಿ ರೂ ಮೌಲ್ಯದ ರಾಣಿ ಎಲಿಜಬೆತ್ ಐಶಾರಾಮಿ ನಿವಾಸ ಭಾರತೀಯ ಉದ್ಯಮಿ ಪಾಲು!

First Published Sep 3, 2023, 6:56 PM IST

ಭಾರತದ ಬಿಲಿಯನೇರ್ ಉದ್ಯಮಿ, ಶ್ರೀಮಂತ ಭಾರತವನ್ನು ಆಳಿದ ಬ್ರಿಟೀಷ್ ರಾಜಮನೆತನದ ಐಶಾರಾಮಿ ಆಸ್ತಿ, ಬ್ರಿಟನ್‌ನ ಮೊದಲ ಕಂಟ್ರಿ ಕ್ಲಬ್ ಅನ್ನು ಖರೀದಿ ಮಾಡಿದ್ದಾರೆ. ಬಕಿಂಗ್‌ಹ್ಯಾಮ್‌ ಶೈರ್ ಮೂಲದ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್‌ನ ಮಾಲೀಕರಾಗಿದ್ದಾರೆ, ಇದರ ಮೌಲ್ಯ 592 ಕೋಟಿ ರೂ. ಯಾರು ಆ ಉದ್ಯಮಿ ಎಂಬ ವಿವರಣೆ ಮತ್ತು ಕುತೂಹಲಕಾರಿ ಸಂಗತಿ ಇಲ್ಲಿದೆ.

ಏಷ್ಯಾದ ಅತೀ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಇದು ವಿವಿಧ ಕೈಗಾರಿಕೆಗಳಲ್ಲಿ ಅಂಗಸಂಸ್ಥೆಗಳನ್ನು ಹೊಂದಿದೆ.

ಆತಿಥ್ಯ ಅಥವಾ ಅತಿಥಿ ಸತ್ಕಾರ ಎಂದರೆ ಮುಖೇಶ್ ಅಂಬಾನಿ ಅವರ ಗುರಿಯೇ ಬೇರೆ. ಹೀಗಾಗಿ ಇತ್ತೀಚೆಗೆ ಅವರು ತಮ್ಮ ಕೆಲವು ಐಷಾರಾಮಿ ಆಸ್ತಿಗಳನ್ನು ನಿರ್ವಹಣೆ ಮಾಡಲು ಉದ್ಯಮಿ ವಿಕ್ರಮ್ ಒಬೆರಾಯ್ ಅವರೊಂದಿಗೆ ಪಾಲುದಾರರಾಗಿದ್ದಾರೆ. ಅಂಬಾನಿ ಅವರ ಐಷಾರಾಮಿ ಆಸ್ತಿಗಳ ಮೇಲಿನ ಅವರ ಪ್ರೀತಿ ಜನರಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. 

Latest Videos


ಆದರೆ ಭಾರತೀಯ ಬಿಲಿಯನೇರ್ ಅಂಬಾನಿ ಬ್ರಿಟನ್‌ನ ಮೊದಲ ಕಂಟ್ರಿ ಕ್ಲಬ್ ಅನ್ನು ಹೆಮ್ಮೆಯಿಂದ ಹೊಂದಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಉದ್ಯಮಿ ಅಂಬಾನಿ ಅವರು ಬಕಿಂಗ್‌ಹ್ಯಾಮ್‌ ಶೈರ್ ಮೂಲದ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್‌ನ ಮಾಲೀಕರಾಗಿದ್ದಾರೆ, ಇದರ ಮೌಲ್ಯ 592 ಕೋಟಿ ರೂ.

ಒಬೆರಾಯ್ ಗ್ರೂಪ್ ಜೊತೆಗಿನ ಪಾಲುದಾರಿಕೆಯ ಪರಿಣಾಮವಾಗಿ, ಅವರು ಈಗ ಮುಖೇಶ್ ಅಂಬಾನಿ ಒಡೆತನದ ಭಾರತ ಮತ್ತು ಯುಕೆಯಲ್ಲಿ ಮೂರು ಮಹತ್ವದ ಆಸ್ತಿಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಇದರರ್ಥ 2021 ರಲ್ಲಿ ಮುಖೇಶ್ ಅಂಬಾನಿ 500 ಕೋಟಿ ರೂ.ಗಳಿಗೆ ಖರೀದಿಸಿದ ಯುಕೆಯಲ್ಲಿರುವ ಪ್ರಸಿದ್ಧ ಸ್ಟೋಕ್ ಪಾರ್ಕ್ ಅನ್ನು ಈಗ ವಿಕ್ರಮ್ ಒಬೆರಾಯ್ ಅವರ ಕಂಪನಿಯು ನಿರ್ವಹಿಸುತ್ತದೆ.
 

ಈ ಆಸ್ತಿಯು ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ಹೊರವಲಯದಲ್ಲಿದೆ. ಈ ದುಬಾರಿ ಕಂಟ್ರಿ ಕ್ಲಬ್‌ನಲ್ಲಿ 300 ಎಕರೆಗಳಷ್ಟು ವಿಸ್ತಾರದಲ್ಲಿದ್ದು ಇಲ್ಲಿ ಐಶಾರಾಮಿ ಪರಿಕರಗಳು, ಸುಂದರವಾದ ಉದ್ಯಾನಗಳು, ಮ್ಯೂಸಿಯಂ ಮತ್ತು ಸರೋವರಗಳಿವೆ.

ಇಲ್ಲಿ ಸಿಗುವ  ಸೌಕರ್ಯಗಳ ಕಾರಣದಿಂದಾಗಿ, ಮುಖೇಶ್ ಅಂಬಾನಿಯವರ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್ ಯುರೋಪ್‌ನಾದ್ಯಂತ ಅತ್ಯಂತ ಪ್ರಸಿದ್ಧ ಮತ್ತು ವಿಶೇಷವಾದ ಹೋಟೆಲ್‌ಗಳಲ್ಲಿ ಒಂದಾಗಿದೆ. ಮನಸ್ಸಿಗೆ ಮುದ ನೀಡುವ ಅಲಂಕಾರಗಳು ಮತ್ತು ಅಮೃತಶಿಲೆಯ ಸ್ನಾನಗೃಹಗಳೊಂದಿಗೆ 49 ಸುಂದರವಾದ ಮಲಗುವ ಕೋಣೆಗಳನ್ನು ಹೊಂದಿದ್ದು, ರಜೆಯ ಮೇಲೆ ಇಲ್ಲಿ ಉಳಿಯುವುದು ಜೀವಿತಾವಧಿಯಲ್ಲಿ ಒಮ್ಮೆ ಅನುಭವಿಸುವ ಸುಂದರ ಅನುಭವವನ್ನು ನೀಡುತ್ತದೆ.

ಐಷಾರಾಮಿ ಕೊಠಡಿಗಳಲ್ಲದೆ, ಇದು 27 ಹೋಲ್ ಚಾಂಪಿಯನ್‌ಶಿಪ್ ಗಾಲ್ಫ್ ಕೋರ್ಸ್, ಪ್ರಶಸ್ತಿ ವಿಜೇತ ಸ್ಪಾಗಳು, ಅತ್ಯಾಧುನಿಕ ಜಿಮ್ನಾಷಿಯಂ, 13 ಟೆನ್ನಿಸ್ ಕೋರ್ಟ್‌ಗಳು ಮತ್ತು ಒಳಾಂಗಣ ಈಜುಕೊಳಗಳನ್ನು ಸಹ ಒಳಗೊಂಡಿದೆ. 

ಬ್ರಿಟನ್‌ನಲ್ಲಿರುವ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್ ಹಲವಾರು ವರ್ಷಗಳಿಂದ ಹಲವಾರು ಪ್ರಸಿದ್ಧ ಸಂದರ್ಶಕರು ಮತ್ತು ಅತಿಥಿಗಳನ್ನು ಕಂಡಿದೆ. ಇಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿದೆ. ಬ್ರಿಟನ್ ರಾಜಮನೆತನದ ಸದಸ್ಯರು ಸಹ ತಮ್ಮ ಮಹತ್ವದ ಆಚರಣೆಗಳು ಮತ್ತು ಸಂದರ್ಭಗಳಿಗಾಗಿ ಶ್ರೀಮಂತ ಮನೆಯಲ್ಲಿ ಉಳಿಯುತ್ತಿದ್ದರು. 

ರಾಣಿ ಎಲಿಜಬೆತ್ II

ರಾಣಿ ಎಲಿಜಬೆತ್ I ಈ ಹಿಂದೆ 1581 ರಲ್ಲಿ ಈ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂಬ ವಿಸ್ಮಯಕಾರಿ ಸತ್ಯವು ಹೆಚ್ಚಾಗಿ ತಿಳಿದಿಲ್ಲ. ಭಾರತದ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಪ್ರಸ್ತುತ ಈ ಆಸ್ತಿಯ ಹಕ್ಕುದಾರರಾಗಿದ್ದಾರೆ. ಅವರು ಅದನ್ನು ಹೆಸರಾಂತ ಕಿಂಗ್ ಬ್ರದರ್ಸ್, ಚೆಸ್ಟರ್, ಹರ್ಟ್‌ಫೋರ್ಡ್ ಮತ್ತು ವಿಟ್ನಿ ಅವರಿಂದ ಖರೀದಿ ಮಾಡಿದ್ದಾರೆ.
 

click me!