ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಹಲವು ವರ್ಷಗಳಿಂದ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಭಾರತದ ಉದ್ಯಮಿ ಮುಖೇಶ್ ಅಂಬಾನಿಗೆ ಈಗ ಚೀನಾದ ಟೆಕ್ ದಿಗ್ಗಜ ಸವಾಲು ಹಾಕಿದ್ದಾನೆ.
Bloomberg Billionaires Index ಪ್ರಕಾರ, ಜಾಂಗ್ ಯಿಮಿಂಗ್ ಅವರ ಒಟ್ಟು ಆಸ್ತಿ ಮೌಲ್ಯ 92.8 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದರಿಂದ ಅವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಅಂಬಾನಿಯವರ ಆಸ್ತಿ ಮೌಲ್ಯ 86.9 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
24
ಯಾರು ಈ ಜಾಂಗ್ ಯಿಮಿಂಗ್?
ಚೀನಾದ ಫುಜಿಯನ್ ಪ್ರಾಂತ್ಯದಲ್ಲಿ ಜನಿಸಿದ ಜಾಂಗ್ ಯಿಮಿಂಗ್, 2012ರಲ್ಲಿ ByteDance ಕಂಪನಿಯನ್ನು ಸ್ಥಾಪಿಸಿದರು. ನಂತರ TikTok ವಿಶ್ವದ ಅತ್ಯಂತ ಜನಪ್ರಿಯ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಆಗಿ ಬೆಳೆದಿತು. ಇಂದು TikTok ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದು, ByteDance ಜಾಗತಿಕ ಟೆಕ್ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿದೆ.
34
AI ಕ್ರಾಂತಿಯೇ ಆಸ್ತಿ ಹೆಚ್ಚಳಕ್ಕೆ ಕಾರಣ
ಜಾಂಗ್ ಯಿಮಿಂಗ್ ಅವರ ಸಂಪತ್ತಿನ ವೇಗದ ಏರಿಕೆಗೆ TikTok ಮಾತ್ರವಲ್ಲ, ByteDanceನ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಬೆಳವಣಿಗೆಯೂ ಪ್ರಮುಖ ಕಾರಣವಾಗಿದೆ. ಕಂಪನಿಯ Doubao AI ಚಾಟ್‌ಬಾಟ್ ಚೀನಾದಲ್ಲಿ ಅತ್ಯಂತ ಜನಪ್ರಿಯ AI ಸೇವೆಗಳಲ್ಲೊಂದಾಗಿ ಬೆಳೆದಿದ್ದು, ಕೋಟ್ಯಂತರ ಬಳಕೆದಾರರನ್ನು ಸೆಳೆದಿದೆ.
44
Bloomberg Billionaires Index ಪ್ರಕಾರ ಏಷ್ಯಾದ ಅಗ್ರ 10 ಶ್ರೀಮಂತರ ಪಟ್ಟಿ ಹೀಗಿದೆ
1. ಗೌತಮ್ ಅದಾನಿ – 117.4 ಬಿಲಿಯನ್ ಡಾಲರ್
2. ಜಾಂಗ್ ಯಿಮಿಂಗ್ – 92.8 ಬಿಲಿಯನ್ ಡಾಲರ್
3. ಮುಖೇಶ್ ಅಂಬಾನಿ – 86.9 ಬಿಲಿಯನ್ ಡಾಲರ್
4. ತಡಾಶಿ ಯನೈ – 72.5 ಬಿಲಿಯನ್ ಡಾಲರ್
5. ಮಸಯೋಶಿ ಸನ್ – 72 ಬಿಲಿಯನ್ ಡಾಲರ್
6. ಝೆಂಗ್ ಯುಕ್ವಿನ್ – 69.4 ಬಿಲಿಯನ್ ಡಾಲರ್
7. ಝಾಂಗ್ ಶಾನ್ಶಾನ್ – 64.9 ಬಿಲಿಯನ್ ಡಾಲರ್
8. ಮಾ ಹುವಾಟೆಂಗ್ – 56.2 ಬಿಲಿಯನ್ ಡಾಲರ್
9. ಲಿ ಕಾ-ಶಿಂಗ್ – 46.3 ಬಿಲಿಯನ್ ಡಾಲರ್
10. ಜಾಕ್ ಮಾ – 43.4 ಬಿಲಿಯನ್ ಡಾಲರ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.