ಬಾಯ್ಕಾಟ್ ಟ್ರೆಂಡ್ ಬೆನ್ನಲ್ಲೇ ಮುಕೇಶ್ ಅಂಬಾನಿ ಕೊಟ್ಟ ಹೊಡೆತಕ್ಕೆ ಕಂಗಾಲಾದ ಟರ್ಕಿ

Published : May 17, 2025, 08:58 PM IST

ಬಾಯ್ಕಾಟ್ ಟರ್ಕಿ ಅಭಿಯಾನ ತೀವ್ರಗೊಳ್ಳುತ್ತಿದೆ. ಟರ್ಕಿ ಜೊತೆಗಿನ ಹಲವು ಒಪ್ಪಂದಗಳು ರದ್ದಾಗುತ್ತಿದೆ. ಈ ನಡೆಯಿಂದ ಟರ್ಕಿ ಒಳಗೆ ಆತಂಕವಿದ್ದರೂ ಹೊರಗಡೆ ತೋರಿಸಿಕೊಂಡಿರಲಿಲ್ಲ. ಆದರೆ ಇದೀಗ ಮುಕೇಶ್ ಅಂಬಾನಿ ಕೊಟ್ಟ ಹೊಡೆತಕ್ಕೆ ಟರ್ಕಿ ಕಂಗಾಲಾಗಿದೆ.  

PREV
16
ಬಾಯ್ಕಾಟ್ ಟ್ರೆಂಡ್ ಬೆನ್ನಲ್ಲೇ ಮುಕೇಶ್ ಅಂಬಾನಿ ಕೊಟ್ಟ ಹೊಡೆತಕ್ಕೆ ಕಂಗಾಲಾದ ಟರ್ಕಿ

ಭಾರತದಲ್ಲಿ ಬಾಯ್ಕಾಟ್ ಟರ್ಕಿ ತೀವ್ರಗೊಳ್ಳುತ್ತಿದೆ.  ವ್ಯಾಪಾರಿಗಳು, ವರ್ತಕರು, ರೈತರು ಸೇರಿದಂತೆ ಹಲವರು ಟರ್ಕಿ ಜೊತೆ ತಮ್ಮ ತಮ್ಮ ಉತ್ಪನ್ನ, ಆಮದು, ರಫ್ತುಗಳನ್ನು ನಿಲ್ಲಿಸಿದ್ದಾರೆ. ಒಂದಡೆ ಭಾರತದ ವಿಶ್ವವಿದ್ಯಾಲಯಗಳು ಟರ್ಕಿ ಜೊತೆಗೆ ಶೈಕ್ಷಣಿಕ ಒಪ್ಪಂದ ರದ್ದುಗೊಳಿಸಿದೆ. ಇತ್ತ ಭಾರತ ಸರ್ಕಾರ ಕೂಡ ವಿಮನ ನಿಲ್ದಾಣಗಲ್ಲಿ ಟರ್ಕಿ ನೀಡುತ್ತಿದ್ದ ಸೇವೆಗೂ ನಿರ್ಬಂಧ ಹೇರಿದೆ. ಇನ್ನು ಹಲವು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಈ ಎಲ್ಲಾ ಬೆಳವಣಿಗೆಯಿಂದ ಟರ್ಕಿ ಆತಂಕಗೊಡಿದೆ. ಆದರೆ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಫ್ಲಿಪ್‌ಕಾರ್ಟ್ ಕೊಟ್ಟ ಹೊಡೆತಕ್ಕೆ ಟರ್ಕಿ ಕಂಗಾಲಾಗಿದೆ.

26

ಭಾರತದಲ್ಲಿ ಬಾಯ್ಕಾಟ್ ಟರ್ಕಿ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಮುಕೇಶ್ ಅಂಬಾನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಂಬಾನಿ ಜೊತೆಗೆ ಫ್ಲಿಪ್‌ಕಾರ್ಟ್ ಕೂಡ ಇದೇ ನಿರ್ಧಾರ ಕೈಗೊಂಡಿದೆ. ಮುಕೇಶ್ ಅಂಬಾನಿಯ ರಿಲಯನ್ಸ್ ಒಡೆತನ ಅಜಿಯೋ ಹಾಗೂ ಫ್ಲಿಪ್‌ಕಾರ್ಟ್ ಒಡೆತನದ ಮಿಂತ್ರ ಇದೀಗ ಟರ್ಕಿ ಉತ್ಪನ್ನಗಳನ್ನು ಬ್ಯಾನ್ ಮಾಡಿದೆ.

36

ಅಜಿಯೋ ಹಾಗೂ ಮಿಂತ್ರದಲ್ಲಿ ಇನ್ನು ಮುಂದೆ ಯಾವುದೇ ಟರ್ಕಿಶ್ ಉತ್ಪನ್ನಗಳು ಲಭ್ಯವಿಲ್ಲ. ಟರ್ಕಿ ಉತ್ಪನ್ನಗಳ ಮಾರಾಟವನ್ನು ಅಜಿಯೋ ಹಾಗೂ ಮಿಂತ್ರ ಬ್ಯಾನ್ ಮಾಡಿದೆ. ಅಜಿಯೋದಲ್ಲಿ ಟರ್ಕೀಶ್ ಬ್ರ್ಯಾಂಡ್‌ಗಳಾದ ಕೊಟೊನ್, ಎಲ್‌ಸಿ ವೈಕಿಕಿ, ಮಾವಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳನ್ನು ಬ್ಯಾನ್ ಮಾಡಿದೆ. ಟರ್ಕಿಯ ಯಾವುದೇ ಉತ್ಪನ್ನಗಳು ಅಜಿಯೋ ಮೂಲಕ ಖರೀದಿ ಸಾಧ್ಯವಿಲ್ಲ. ಇದೀಗ ವೆಬ್‌ಸೈಟ್, ಆ್ಯಪ್‌ಗಳಿಂದ ಈ ಟರ್ಕಿ ಉತ್ಪನ್ನಗಳನ್ನೇ ತೆಗೆದುಹಾಕಿದೆ.

46

ದೇಶದ ಹಿತಾಸಕ್ತಿ ಮುಖ್ಯ. ದೇಶಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ಭಾರತೀಯ ಸೇನೆಗೆ ಬೆಂಬಲ ಸೂಚಿಸಿದ್ದೇವೆ. ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಬೆಂಬಲವಾಗಿ ನಿಲುತ್ತೇವೆ. ಇದೇ ವೇಳೆ ಈ ದೇಶದ ಜನರ ಭಾವನೆಗೆ ಧಕ್ಕೆ ತರುವುದಿಲ್ಲ. ದೇಶಧ ಭದ್ರತೆಯಲ್ಲಿ ಒಂದಿಚು ರಾಜಿ ಇಲ್ಲ. ಅಧಿಕೃತವಾಗಿ ಟರ್ಕಿ ಉತ್ಪನ್ನಗಳನ್ನು ತೆಗೆದುಹಾಕಲಾಗಿದೆ ಎಂದು ರಿಲಯನ್ಸ್ ಹೇಳಿದೆ. 5 ವರ್ಷಗಳ ಹಿಂದೆ ಕೆಲ ಟರ್ಕಿ ಉತ್ಪನ್ನಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವು. ಆದರೆ ಕೆಲ ವರ್ಷಗಳ ಹಿಂದೆ ಈ ಒಪ್ಪಂದ ಅಂತ್ಯಗೊಂಡಿದೆ. ಸದ್ಯ ಯಾವುದೇ ಒಪ್ಪಂದ ಇಲ್ಲ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ. 

56

ಫ್ಲಿಪ್‌ಕಾರ್ಟ್ ಮಾಲೀಕತ್ವದ ಮಿಂತ್ರ ಪ್ಲಾಟ್‌ಫಾರ್ಮ್‌ನಲ್ಲಿದ್ದ ಟರ್ಕಿ ಮೂಲದ ಟ್ರೆಂಡಿಯೋಲ್ ಸೇರಿದಂತೆ ಎಲ್ಲಾ ಟರ್ಕಿ ಉತ್ಪನ್ನಗಳು ಬ್ಯಾನ್ ಆಗಿದೆ. ಈ ವಸ್ತುಗಳು ಮಾರಾಟಕ್ಕೆ ಲಭ್ಯವಿಲ್ಲ.  ಮಿಂತ್ರ ಭಾರತದಲ್ಲಿ ಬಟ್ಟೆ ಸೇರಿದಂತೆ ಇತರ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಇ ಕಾಮರ್ಸ್ ಮೂಲಕ ವಹಿವಾಟು ನಡೆಸುತ್ತಿದೆ. ಮಿಂತ್ರ ಕೂಡ ಟರ್ಕಿ ಉತ್ಪನ್ನ ಬ್ಯಾನ್ ಮಾಡಿದೆ. ಅಜಿಯೋ ಹಾಗೂ ಮಿಂತ್ರ ನಡೆಯಿಂದ ಟರ್ಕಿ ಕಂಗಾಲಾಗಿದೆ. 

66

ಟರ್ಕಿಯ ಪ್ರಮುಖ ವ್ಯಾಪಾರ ವಹಿವಾಟುಗಳಲ್ಲಿ ಭಾರತ ಕೂಡ ಒಂದು. ಈ ಪೈಕಿ ಟರ್ಕಿ ಉತ್ಪನ್ನಗಳು ಅತೀ ಹೆಚ್ಚಾಗಿ ಆನ್‌ಲೈನ್ ಮೂಲಕ ಮಾರಾಟವಾಗುತ್ತಿತ್ತು. ಆದರೆ ಭಾರತದಲ್ಲಿ ಬಾಯ್ಕಾಟ್ ಟರ್ಕಿ ಅಭಿಯಾನ ತೀವ್ರಗೊಳ್ಳುತ್ತಿದ್ದ ಕಾರಣ ಟರ್ಕಿ ಆರ್ಥಿಕ ಸ್ಥಿತಿಗತಿ ಮೇಲೂ ಹೊಡೆತ ಬೀಳಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

Read more Photos on
click me!

Recommended Stories