ಜಿಯೋ ಆಫರ್‌ಗೆ ಏರ್‌ಟೆಲ್, BSNL ಸುಸ್ತು, ಕೇವಲ 86 ರೂಗೆ 28 ದಿನ ವ್ಯಾಲಿಟಿಡಿ, ಉಚಿತ ಡೇಟಾ!

First Published | Dec 4, 2024, 6:29 PM IST

ಭಾರತದ ಟೆಲಿಕಾಂ ಕ್ಷೇತ್ರದ ಪೈಪೋಟಿಯಿಂದ ಗ್ರಾಹಕರಿಗೆ ಇದೀಗ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್ ಲಭ್ಯವಾಗುತ್ತಿದೆ. ಇದೀಗ ಜಿಯೋ ಕೇವಲ 86 ರೂಪಾಯಿಗೆ 28 ದಿನ ವ್ಯಾಲಿಟಿಡಿ, ಉಚಿತ ಡೇಟಾ ಹಾಗೂ ಹತ್ತು ಹಲವು ಸೌಲಭ್ಯ ನೀಡುತ್ತಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಬೆಲೆ ಏರಿಕೆ ಮಾಡಿ ಕೈಸುಟ್ಟುಕೊಂಡಿರುವ ಖಾಸಗಿ ಟೆಲಿಕಾಂ ಕಂಪನಿಗಳು ಇದೀಗ  ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಆಫರ್ ನೀಡುತ್ತಿದೆ. ಪೈಪೋಟಿಗೆ ಬಿದ್ದಿರುವ ಖಾಸಗಿ ಕಂಪನಿಗಳು ಹೊಸ ಹೊಸ ಆಫರ್ ನೀಡುತ್ತಿದೆ. ಇದೀಗ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯ ರೀಚಾರ್ಜ್ ಆಫರ್ ನೀಡುತ್ತಿದೆ. ಇದು ಕೇವಲ 86 ರೂಪಾಯಿ ಮಾತ್ರ. 

ಹೌದು, ಜಿಯೋ 86 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಗ್ರಹಾಕರಿಗೆ ಒಂದು ತಿಂಗಳ ವ್ಯಾಲಿಟಿಡಿ ಅಂದರೆ 28 ದಿನ ಯಾವುದೇ ತಲೆನೋವು ಇರುವುದಿಲ್ಲ. 28 ದಿನ ವ್ಯಾಲಿಟಿಡಿ ಜೊತೆಗೆ ಜಿಯೋ ಒಟ್ಟು 14 ಜಿಬಿ ಡೇಟಾ ಉಚಿತವಾಗಿ ನೀಡುತ್ತಿದೆ. ಈ ಮೂಲಕ ಗ್ರಾಹಕರು ವ್ಯಾಲಿಟಿಡಿ ಹಾಗೂ ಡೇಟಾ ಆನಂದಿಸಬಹುದು.


14 ಜಿಬಿ ಪೈಕಿ ಪ್ರತಿ ದಿನದ ಮಿತಿ 0.5 ಜಿಬಿ. ಬಳಿಕ ಇಂಟರ್ನೆಟ್ ಡೇಟಾ ಸ್ಪೀಡ್ ಇಳಿಕೆಯಾಗಲಿದೆ. ಆದರೆ ಈ ಪ್ಲಾನ್‌ನಲ್ಲಿ ಯಾವುದೇ ವಾಯ್ಸ್ ಕಾಲ್ ಉಚಿತವಿಲ್ಲ. ಜೊತೆಗೆ ಎಸ್ಎಂಎಸ್ ಉಚಿತ ಸೌಲಭ್ಯವಿರುವುದಿಲ್ಲ. ವ್ಯಾಲಿಟಿಡಿ ಹಾಗೂ ಡೇಟಾ ಬೇಕಿದ್ದವರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಕಾರಣ ಕೇವಲ 86 ರೂಪಾಯಿ ಈ ಸೌಲಭ್ಯ ಆನಂದಿಸಬಹುದು.

ಇದರ ಜೊತೆಗೆ ರಿಲಯನ್ಸ್ ಜಿಯೋ ಅನ್‌ಲಿಮಿಟೆಡ್ ಜಡೇಟಾ ಆಫರ್ ಕೂಡ ಜಾರಿಗೆ ತಂದಿದೆ. ಕೇವಲ ನಿಮ್ಮ ಇರುವ ಪ್ಲಾನ್ ಮೇಲೆ 49 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಒಂದು ದಿನ ಅನ್‌ಲಿಮಿಟೆಡ್ ಡೇಟಾ ಆನಂದಿಸಬಹುದು. ಇನ್ನು ಇದೇ ರೀತಿ ಇರುವ ಪ್ಲಾನ್ ಮೇಲೆ 11 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 1 ಗಂಟೆ ಅನ್‌ಲಿಮಿಟೆಡ್ ಡೇಟಾ ಆಫರ್ ನೀಡುತ್ತಿದೆ.

ರಿಲಯನ್ಸ್ ಜಿಯೋ ಟ್ರು 5 ಜಿ ಪ್ಲಾನ್ ಕೂಡ ಭಾರಿ ಜನಪ್ರಿಯವಾಗಿದೆ. ಕೇವಲ 198 ರೂಪಾಯಿಯಿಂದ ಪ್ಲಾನ್ ಆರಂಭಗೊಳ್ಳುತ್ತಿದೆ. 198 ರೂಪಾಯಿ ಪ್ಲಾನ್‌ನಲ್ಲಿ ಪ್ರತಿ ದಿನ 2 ಜಿಬಿ ಟ್ರು5 ಜಿ ಡೇಟಾ ಉಚಿತವಾಗಿ ಸಿಗಲಿದೆ. ಇದರ ವ್ಯಾಲಿಟಿಡಿ 14 ದಿನ ಇರಲಿದೆ. ಕಡಿಮೆ ಮೊತ್ತದ ಪ್ಲಾನ್ ನೀಡುವ ಮೂಲಕ ಜಿಯೋ ಇದೀಗ ಗ್ರಾಹಕರನ್ನು ಇತರ ನೆಟ್‌ವರ್ಕ್‌ಗೆ ಪೋರ್ಟ್ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಬೇರೆ ನೆಟ್‌ವರ್ಕ್ ಗ್ರಾಹಕರನ್ನು ಸೆಳೆಯುವ ಪ್ಲಾನ್ ಕೂಡ ಅಡಗಿದೆ.

Latest Videos

click me!