ತಿಂಗಳು ಪೂರ್ತಿ ಕಷ್ಟಪಟ್ಟು ದುಡಿದ ನಂತರ ಸಂಬಳ ಬರುತ್ತೆ. ತಿಂಗಳ ಮೊದಲಲ್ಲೇ ಸಂಬಳ ಬಂದ್ರೆ ತಿಂಗಳಾಂತ್ಯದ ವೇಳೆ ಯಾವುದಕ್ಕೂ ಹಣವಿರುವುದಿಲ್ಲ, ಬಂದ ಸಂಬಳ ಹೇಗೆ ಖರ್ಚಾಗುತ್ತೆ ಅಂತಾನೂ ಗೊತ್ತಾಗಲ್ಲ. ಹೀಗಿರೋವಾಗ ನಾವು ಉಳಿತಾಯ ಮಾಡೋಕೆ ಆಗಲ್ಲ. ಆದ್ರೆ.. ನಾವು ಕೆಲವು ಬದಲಾವಣೆಗಳನ್ನು ಮಾಡಿಕೊಂಡ್ರೆ.. ನಮ್ಮ ಸಂಬಳದ ಹಣದಲ್ಲೇ ಖರ್ಚು ಕಡಿಮೆ ಮಾಡಿಕೊಂಡು ಉಳಿತಾಯ ಹೆಚ್ಚು ಮಾಡಬಹುದು. ಅದಕ್ಕೆ ಏನು ಮಾಡಬೇಕು ಅಂತ ತಜ್ಞರ ಸಲಹೆ ತಿಳಿದುಕೊಳ್ಳೋಣ…
ನಮ್ಮ ಸಂಬಳದಿಂದ ಸ್ವಲ್ಪ ದುಡ್ಡನ್ನ ಉಳಿಸಬೇಕು ಅಂದ್ರೆ ಕೆಲವು ವಿಷಯಗಳನ್ನು ಪಾಲಿಸಬೇಕಂತೆ. ನಮ್ಮ ಜೀವನದಲ್ಲಿ 50% ದೈನಂದಿನ ಅವಶ್ಯಕತೆಗಳಿಗೆ, 30% ಜೀವನಶೈಲಿಗೆ, ಉಳಿದ 20% ಉಳಿತಾಯಕ್ಕೆ ಮೀಸಲಿಡಬೇಕಂತೆ. ಒಂದು ಸಮೀಕ್ಷೆಯಲ್ಲಿ ತಿಳಿದುಬಂದ ವಿಷಯ ಏನಂದ್ರೆ ಸಂಬಳ ಹೆಚ್ಚಾಗ್ತಿದ್ದಂತೆ ಜನ ಹೆಚ್ಚು ಖರ್ಚು ಮಾಡ್ತಾರಂತೆ. ಅವರ ಜೀವನ ಮಟ್ಟ ಕೂಡ ಹೆಚ್ಚಾಗುತ್ತಂತೆ. ಹಬ್ಬಗಳು ಹೆಚ್ಚಾಗಿ.. ಅದೇ ರೀತಿ ಖರ್ಚುಗಳು ಕೂಡ ಹೆಚ್ಚಾಗುತ್ತಂತೆ. ಹೀಗೆ ಖರ್ಚು ಮಾಡ್ತಾ ಹೋದ್ರೆ.. ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ. ಅದಕ್ಕೆ ಕಡ್ಡಾಯವಾಗಿ ಉಳಿತಾಯ ಮಾಡ್ಬೇಕು
1. ಬಜೆಟ್ ರೂಪಿಸುವುದು…
ಉಳಿತಾಯ ಮಾಡಬೇಕಂದ್ರೆ ಬಜೆಟ್ ತುಂಬಾ ಮುಖ್ಯ. ನಮ್ಮ ಆದಾಯ, ಖರ್ಚುಗಳನ್ನ ಕರಾರುವಾಕ್ಕಾಗಿ ಲೆಕ್ಕ ಹಾಕಬೇಕು. ಮನೆ ಬಾಡಿಗೆ, ಬಿಲ್‌ಗಳು, ಸಾಲಗಳು, ಮಾಸಿಕ ದಿನಸಿ, ಮನರಂಜನೆ, ಕುಟುಂಬದ ಇತರೆ ಖರ್ಚುಗಳು ಹೀಗೆ ಎಲ್ಲವನ್ನೂ ಒಂದು ಪಟ್ಟಿ ಮಾಡಬೇಕು. ಈಗ ನಮ್ಮ ಸಂಬಳಕ್ಕೆ ತಕ್ಕಂತೆ.. ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನೇ ಮೀಸಲಿಡಬೇಕು. ಎಲ್ಲಿ ಹೆಚ್ಚು ಖರ್ಚು ಮಾಡ್ತಿದ್ದೀವಿ.. ಎಲ್ಲಿ ಕಡಿಮೆ ಮಾಡಬಹುದು.. ಅಂತ ಬಜೆಟ್ ಲೆಕ್ಕಾಚಾರ ಮಾಡಿದ್ರೆ ಖರ್ಚುಗಳನ್ನ ನಿಯಂತ್ರಿಸಬಹುದು. ಇದನ್ನ ಸರಿಯಾಗಿ ಪಾಲಿಸಿದ್ರೆ.. ದುಡ್ಡು ಉಳಿಸಬಹುದು.
2. ಸಾಲದ ವಿಷಯದಲ್ಲಿ ಎಚ್ಚರ..
ಈಗಿನ ಕಾಲದಲ್ಲಿ ಸಾಲ ಅನ್ನೋದು ಸರ್ವೇ ಸಾಮಾನ್ಯ ಪದ ಆಗಿದೆ. ನಿಮ್ಮ ಅರ್ಹತೆಗಿಂತ ಹೆಚ್ಚು ಸಾಲ ತೆಗೆದುಕೊಳ್ಳೋದು ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತೆ. ಹಾಗಾಗಿ ವೈದ್ಯಕೀಯ, ಶಿಕ್ಷಣ, ತುರ್ತು ಅವಶ್ಯಕತೆಗಳಿಗೆ ಮಾತ್ರ ಸಾಲ ತೆಗೆದುಕೊಳ್ಳಿ. ಸಾಲದ ಮೊತ್ತ ನಿಮ್ಮ ಸಂಬಳದ ಒಂದು ಭಾಗವನ್ನು ಮೀರದಂತೆ ನೋಡಿಕೊಳ್ಳಿ. ಸಾಲ ತೀರಿಸುವ ವಿಷಯದಲ್ಲಿ ಜಾಗರೂಕರಾಗಿರಿ. ಹಳೇ ಸಾಲ ತೀರುವವರೆಗೆ ಹೊಸ ಸಾಲಗಳನ್ನು ತೆಗೆದುಕೊಳ್ಳಬೇಡಿ.
ಖರ್ಚಿನ ಲೆಕ್ಕ…
ಪ್ರತಿದಿನ ಯಾವುದಕ್ಕೆ ಖರ್ಚು ಮಾಡಿದ್ದೀವಿ, ಎಷ್ಟು ಖರ್ಚು ಮಾಡಿದ್ದೀವಿ ಅಂತ ಲೆಕ್ಕ ಹಾಕಿ. ತಿಂಗಳಾಂತ್ಯದಲ್ಲಿ ನೀವು ಯಾವುದಕ್ಕೆ ಹೆಚ್ಚು ಖರ್ಚು ಮಾಡಿದ್ದೀರಿ ಅಂತ ನಿಮಗೆ ಗೊತ್ತಾಗುತ್ತೆ. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡ್ತಿದ್ರೆ ಅವುಗಳಿಗೆ ಕಡಿವಾಣ ಹಾಕಿ
ಮೊದಲು ಉಳಿತಾಯ, ನಂತರ ಖರ್ಚು
ಸಂಬಳ ಬಂದ ಮೇಲೆ ಮೊದಲು ಉಳಿತಾಯಕ್ಕೆ ಹಣ ಮೀಸಲಿಡಿ. ಆಮೇಲೆ ಖರ್ಚು ಮಾಡೋಕೆ ಶುರು ಮಾಡಿ. ನಿಮಗೆ ಬ್ಯಾಂಕ್‌ನಲ್ಲಿ RD, SIP ಇದ್ರೆ ಹೆಚ್ಚುವರಿ. ಉಳಿತಾಯದ ಮೇಲೆ ಗಮನವಿಡಿ. ಆಗ ಅನಗತ್ಯ ವಸ್ತುಗಳ ಮೇಲೆ ಖರ್ಚು ಮಾಡಬೇಕು ಅನ್ನೋ ಆಸೆ ಕಡಿಮೆಯಾಗುತ್ತೆ.