ಇವ್ರೇ ನೋಡಿ ಪಾಕಿಸ್ತಾನದ ಶ್ರೀಮಂತ ಹಿಂದೂಗಳು: ಅವರ ಆಸ್ತಿ ಮೌಲ್ಯ, ವೃತ್ತಿ, ಇತರ ವಿವರ ಇಲ್ಲಿದೆ..

First Published | Sep 26, 2023, 4:04 PM IST

ಪಾಕಿಸ್ತಾನದ ಶ್ರೀಮಂತ ಜನರಲ್ಲಿ ಕೆಲವು ಹಿಂದೂಗಳು ಇದ್ದಾರೆ. ಈ ಲೇಖನದಲ್ಲಿ ನಾವು ಬಿಲಿಯನೇರ್‌ ಆಗಿರುವ ಕೆಲವು ಪಾಕಿಸ್ತಾನಿ ಹಿಂದೂಗಳ ಬಗ್ಗೆ ತಿಳಿಸಿದ್ದೇವೆ ನೋಡಿ..

ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಹಸಿವು ಮತ್ತು ಬಡತನದಿಂದ ಹೋರಾಡುತ್ತಿದೆ. ಹಿಟ್ಟು, ಅಕ್ಕಿ, ಮೊಟ್ಟೆ ಮುಂತಾದ ಆಹಾರ ಪದಾರ್ಥಗಳ ಕೊರತೆಯು ತುಂಬಾ ಹೆಚ್ಚಾಗಿದೆ. ಜನರು ಈ ಆಹಾರ ಪದಾರ್ಥಗಳಿಗಾಗಿ ತಮ್ಮ ತಮ್ಮಲ್ಲೇ ಜಗಳವಾಡುತ್ತಿದ್ದಾರೆ. 
 

ಇನ್ನು, ಪಾಕಿಸ್ತಾನದಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆ ಎಂದು ಪರಿಗಣಿಸಲಾಗಿದೆ ಎಂಬುದು ತಿಳಿದಿರುವ ಸತ್ಯ. ಆದರೆ ಎಲ್ಲಾ ಕಷ್ಟಗಳ ಹೊರತಾಗಿಯೂ, ಪಾಕಿಸ್ತಾನದ ಶ್ರೀಮಂತ ಜನರಲ್ಲಿ ಕೆಲವು ಹಿಂದೂಗಳು ಇದ್ದಾರೆ. ಈ ಲೇಖನದಲ್ಲಿ ನಾವು ಬಿಲಿಯನೇರ್‌ ಆಗಿರುವ ಕೆಲವು ಪಾಕಿಸ್ತಾನಿ ಹಿಂದೂಗಳ ಬಗ್ಗೆ ತಿಳಿಸಿದ್ದೇವೆ ನೋಡಿ..

Tap to resize

1. ದೀಪಕ್ ಪೇರ್ವಾನಿ
ದೀಪಕ್ ಪೇರ್ವಾನಿ 1973 ರಲ್ಲಿ ಪಾಕಿಸ್ತಾನದ ಮೀರ್ಪುರ್ ಖಾಸ್‌ನಲ್ಲಿ ಜನಿಸಿದರು. ದೀಪಕ್ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ನಟ. ಇವರು ಪಾಕಿಸ್ತಾನದ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರು ಮತ್ತು ಫ್ಯಾಷನ್ ಉದ್ಯಮದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2022 ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರ ವಾರ್ಷಿಕ ನಿವ್ವಳ ಆಸ್ತಿಯ ಮೌಲ್ಯ ಸುಮಾರು 71 ಕೋಟಿ ರೂ.

2. ನವೀನ್ ಪೇರ್ವಾನಿ
ನವೀನ್ ಪೆರ್ವಾನಿ ದೀಪಕ್ ಪೆರ್ವಾನಿ ಅವರ ಸೋದರಸಂಬಂಧಿ. ಅವರು 30 ಅಕ್ಟೋಬರ್ 1971 ರಂದು ಜನಿಸಿದರು. ನವೀನ್ ಪಾಕಿಸ್ತಾನದ ಪ್ರಸಿದ್ಧ ಸ್ನೂಕರ್ ಆಟಗಾರರಾಗಿದ್ದಾರೆ. 2006ರಲ್ಲಿ ಕತಾರ್‌ನ ದೋಹಾದಲ್ಲಿ ಏಷ್ಯನ್ ಗೇಮ್ಸ್ ನಡೆದಾಗ ನವೀನ್ ಅದರಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. 2022 ರ ವರದಿಯ ಪ್ರಕಾರ, ನವೀನ್ ಅವರ ನಿವ್ವಳ ಮೌಲ್ಯ ಸುಮಾರು 60 ಕೋಟಿ ರೂ. ಎಂದು ತಿಳಿದುಬಂದಿದೆ.

3. ಸಂಗೀತಾ
ಸಂಗೀತಾ ಹುಟ್ಟಿದ್ದು ಪಾಕಿಸ್ತಾನದ ಕರಾಚಿಯಲ್ಲಿ. ಅವರು ಪಾಕಿಸ್ತಾನಿ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ನಟಿ ಮತ್ತು ನಿರ್ದೇಶಕಿಯಾಗಿದ್ದಾರೆ. 1969 ರಿಂದ ಇವರು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಗೀತಾ ಪಾಕಿಸ್ತಾನದಲ್ಲಿ ಪರ್ವೀನ್ ರಿಜ್ವಿ ಎಂದೇ ಪ್ರಸಿದ್ಧರಾಗಿದ್ದಾರೆ. ನಿಕಾಹ್, ಮುತ್ತಿ ಭರ್ ಚಾವಲ್, ಯೇ ಅಮಾನ್, ನಾಮ್ ಮೇರಾ ಬದ್ನಾಮ್ ನಂತಹ ಅನೇಕ ದೊಡ್ಡ ಚಿತ್ರಗಳಲ್ಲಿ ಪರ್ವೀನ್ ಕೆಲಸ ಮಾಡಿದ್ದಾರೆ. ಸಂಗೀತಾ ಅವರ ವಾರ್ಷಿಕ ಗಳಿಕೆ ಸುಮಾರು 39 ಕೋಟಿ ರೂ.
 

4. ರೀಟಾ ಈಶ್ವರ್
ರೀಟಾ ಈಶ್ವರ್ ಪಾಕಿಸ್ತಾನದ ಕರಾಚಿ ನಿವಾಸಿ. ಅವರು 16 ಮಾರ್ಚ್, 1981 ರಂದು ಜನಿಸಿದರು. ರೀಟಾ ರಾಜಕಾರಣಿಯಾಗಿದ್ದು 2013 ರಿಂದ 2018 ರವರೆಗೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರೂ ಆಗಿದ್ದಾರೆ. ಅವರು ಪಾಕಿಸ್ತಾನದ ಶ್ರೀಮಂತ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಆಕೆಯ ವಾರ್ಷಿಕ ಗಳಿಕೆ ಸುಮಾರು 30 ಕೋಟಿ ರೂ. ಎಂದೂ ವರದಿಯಾಗಿದೆ. 

Latest Videos

click me!