ಫ್ರೆಂಚ್ ಅರಮನೆಯಲ್ಲಿ ನಡೆದ ಭಾರತೀಯ ಉದ್ಯಮಿ ಮಗಳ ಅದ್ಧೂರಿ ಮದುವೆ ಗಿನ್ನೆಸ್‌ ರೆಕಾರ್ಡ್‌ಗೆ ಸೇರ್ಪಡೆ!

First Published | Oct 11, 2023, 1:11 PM IST

ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಭಾರತೀಯ ಉದ್ಯಮಿ ತನ್ನ ಮಗಳ ಮದುವೆಯನ್ನು ಅರಮನೆಯಲ್ಲಿ ನಡೆಸುವ ಮೂಲಕ ಸುದ್ದಿಯಾಗಿದ್ದರು. ಮಾತ್ರವಲ್ಲ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿತ್ತು.   ಈ ವಿವಾಹವು  ಜಗತ್ತಿನ ಅತೀ  ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಇದು ಅಂಬಾನಿ, ಅದಾನಿ ಕುಟುಂಬದ ವಿವಾಹವಲ್ಲ. ಹಾಗಾದ್ರೆ ಈ ದುಬಾರಿ ಮದುವೆ ಯಾರದ್ದು ಎಂಬ ವಿವರ ಇಲ್ಲಿದೆ.

ಭಾರತ ಉಕ್ಕು ಉದ್ಯಮದಲ್ಲಿ ತೊಡಗಿಸಿಕೊಂಡಿರು ಲಕ್ಷ್ಮಿ ನಿವಾಸ್ ಮಿತ್ತಲ್ ಅವರು ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.  ಇವರಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದು, ಅವರ ಮಗಳು ವನಿಶಾ ಮಿತ್ತಲ್  ಅವರು ಆರ್ಸೆಲರ್ ಮಿತ್ತಲ್‌ ಕಂಪೆನಿಯ ಸ್ವತಂತ್ರವಲ್ಲದ ನಿರ್ದೇಶಕರಾಗಿದ್ದಾರೆ. 

ಜೂನ್  2004 ರಲ್ಲಿ ವನಿಶಾ ಅವರು ಮಿತ್ತಲ್‌ ಕಂಪೆನಿಯ ಭಾಗವಾದ LNM ಹೋಲ್ಡಿಂಗ್ಸ್‌ ಲಿಮಿಟೆಡ್‌ನಲ್ಲಿ ನಿರ್ದೇಶಕರ ಮಂಡಳಿಗೆ ಆಯ್ಕೆಯಾದರು. ಖರೀದಿ ಮತ್ತು ಸಂಗ್ರಹಣೆ ವಿಭಾಗವನ್ನು ಅವರಿಗೆ ವಹಿಸಿಕೊಡಲಾಗಿತ್ತು. ಇದಾದ ಬಳಿಕ ಡಿಸೆಂಬರ್ 2004 ರಲ್ಲಿ, ವನಿಶಾ ಅವರನ್ನು ಮಿತ್ತಲ್ ಸ್ಟೀಲ್‌ನ ನಿರ್ದೇಶಕರ ಮಂಡಳಿಗೆ ನೇಮಕ ಮಾಡಲಾಯ್ತು.

Tap to resize

1980 ರಲ್ಲಿ ಜನಿಸಿರುವ ವನಿಶಾ ಮಿತ್ತಲ್ ಅವರ ಸಹೋದರನ ಹೆಸರು ಆದಿತ್ಯ ಮಿತ್ತಲ್. ವನಿಶಾ ಯುರೋಪಿಯನ್ ಬ್ಯುಸಿನೆಸ್ ಸ್ಕೂಲ್‌ನಿಂದ ಬ್ಯಾಚುಲರ್ ಆಫ್ ಸೈನ್ಸ್‌ ಮಾಡಿದ್ದಾರೆ.  ಅವರು ಏಪ್ರಿಲ್ 2011 ರಲ್ಲಿ ಅಪೇರಂ ಎಂಬ ಕಂಪನಿಗೆ ಸೇರಿದರು. 

43 ವರ್ಷದ ಮಹಿಳಾ ಉದ್ಯಮಿ ಅವರು 2004 ರಲ್ಲಿ ಫ್ರಾನ್ಸ್‌ನ ದಿ ಪ್ಯಾಲೇಸ್ ಆಫ್ ವರ್ಸೈಲ್ಸ್‌ನಲ್ಲಿ ದೆಹಲಿ ಮೂಲದ ಉದ್ಯಮಿ ಅಮಿತ್ ಭಾಟಿಯಾ ಅವರನ್ನು ವಿವಾಹವಾದರು. ಈ ಸಮಾರಂಭ ಅತ್ಯಂತ ದುಬಾರಿ ವಿವಾಹವಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿತು.  

ತಂದೆ  ಲಕ್ಷ್ಮೀ ನಿವಾಸ್‌ ಮಿತ್ತಲ್ ಮಗಳ ಮದುವೆಗೆ 55 ಮಿಲಿಯನ್ ಡಾಲರ್ ಖರ್ಚು ಮಾಡಿದರು. ಆಗ ಇದರ ಮೌಲ್ಯ 240 ಕೋಟಿ ರೂ. ಪ್ರಸ್ತುತ  ಇದರ ಮೌಲ್ಯ 550 ಕೋಟಿ ರೂ. ಆಗಿದೆ. ಇದು ವಿಶ್ವದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ.
 

ಫ್ರಾನ್ಸ್‌ನ ವೆರ್ಸೈಲ್ಸ್ ಅರಮನೆಯಲ್ಲಿ 6 ದಿಗಳ ಕಾಲ ನಡೆದ ಮದುವೆಯಲ್ಲಿ ಆಸ್ಟ್ರೇಲಿಯಾದ ಖ್ಯಾತ ಗಾಯಕಿ ಕೈಲಿ ಮಿನೋಗ್ ಕಾರ್ಯಕ್ರಮ ನೀಡಿದರು. 30 ನಿಮಿಷಗಳ ಪ್ರದರ್ಶನಕ್ಕಾಗಿ ಗಾಯಕಿಗೆ  330,000 ಡಾಲರ್‌ ಪಾವತಿಸಲಾಗಿದೆ ಎಂದು ವರದಿಯಾಗಿದೆ.
 

ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ಜೂಹಿ ಚಾವ್ಲಾ, ರಾಣಿ ಮುಖರ್ಜಿ, ಸೈಫ್ ಅಲಿ ಖಾನ್ ಮತ್ತು ಐಶ್ವರ್ಯಾ ರೈ ಕೂಡ ಮದುವೆಯಲ್ಲಿ ಕಾರ್ಯಕ್ರಮ ಕೊಟ್ಟಿದ್ದರು. ಸುಮಾರು 1000 ಅತಿಥಿಗಳಿಗೆ ಆತಿಥ್ಯ ಮತ್ತು ಪ್ರಯಾಣದ ವೆಚ್ಚವನ್ನು ಮಿತ್ತಲ್‌  ಭರಿಸಿದ್ದರು.
 

ಅರಮನೆಯಲ್ಲಿ ಆಯೋಜಿಸಲಾಗಿದ್ದ ಏಕೈಕ ಖಾಸಗಿ ಕಾರ್ಯಕ್ರಮ  ಇದಾಗಿತ್ತು. ಅತಿಥಿಗಳಿಗೆ ಊಟದ ವ್ಯವಸ್ಥೆಗೆ ಪ್ರಸಿದ್ಧ ಬಾಣಸಿಗ ಮುನ್ನಾ ಮಹಾರಾಜರನ್ನು ಕರೆಸಲಾಗಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ.  ಇಬ್ಬರು ಗಂಡು ಮತ್ತು ಒಂದು ಹೆಣ್ಣು  ಮಗುವಿದೆ.

ವನಿಶಾ ಮಿತ್ತಲ್ ಅವರ ತಂದೆ ಲಕ್ಷ್ಮಿ ಮಿತ್ತಲ್ ಅವರು ಅಮೇವಿ ಎಂಬ ಸೂಪರ್‌ಯಾಚ್ ಅನ್ನು ಹೊಂದಿದ್ದಾರೆ. ಇದನ್ನು 2007 ರಲ್ಲಿ ನಿರ್ಮಿಸಲಾಯಿತು. ಇದರ ಬೆಲೆ 125 ಮಿಲಿಯನ್ ಡಾಲರ್. ವನಿಶಾ ಮಿತ್ತಲ್ ಅವರ ತಂದೆ ಲಕ್ಷ್ಮಿ ನಿವಾಸ್ ಮಿತ್ತಲ್ ಅವರ ನಿವ್ವಳ ಮೌಲ್ಯ 1.38 ಲಕ್ಷ ಕೋಟಿ ರೂ. 2020 ರಲ್ಲಿ ಕಂಪನಿಯ ಆದಾಯ  53 ಬಿಲಿಯನ್ ಡಾಲರ್‌ ಆಗಿತ್ತು. ವನಿಶಾ ಮಿತ್ತಲ್ ವ್ಯವಹಾರದಲ್ಲಿ ಸುಮಾರು 38% ಪಾಲನ್ನು ಹೊಂದಿದ್ದಾರೆ.

Latest Videos

click me!