ಇತ್ತೀಚಿನ ಶಾರ್ಕ್ ಟ್ಯಾಂಕ್‌ನ ರಿತೇಶ್ ಅಗರ್ವಾಲ್ ಅವರೊಂದಿಗಿನ ಸಂದರ್ಶನದಲ್ಲಿ, ಮಾಸ್ಟರ್‌ಶೆಫ್ ರಣವೀರ್ ಬ್ರಾರ್ ಅವರು ತಮ್ಮ ರೆಸ್ಟೋರೆಂಟ್ ನಷ್ಟವಾದ ಬಳಿಕ ಆರ್ಥಿಕ ವಿಷಯದಲ್ಲಿ ಶಿಸ್ತನ್ನು ಕಲಿತಿರುವುದಾಗಿ ಹೇಳಿದ್ದಾರೆ. “ರೆಸ್ಟೋರೆಂಟ್‌ಗಳು ಆರ್ಥಿಕ ಶಿಸ್ತನ್ನು ಕಳೆದುಕೊಳ್ಳುವ ಸಾಧ್ಯತೆಗಳು ತುಂಬಾ ಇವೆ, ಅದನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಕೊಳಾಯಿಯಿಂದ ನೀರು ಸೋರಿಕೆಯಾಗುವಂತೆ, ಹಲವು ಕಡೆಗಳಲ್ಲಿ ಹಣ ಸೋರಿಕೆಯಾಗಬಹುದು, ರೆಸ್ಟೋರೆಂಟ್ ಆರಂಭಿಸುವಾಗ ಒಂದೇ ಅಲ್ಲದೆ, ಅದು ಲಾಭ ಗಳಿಸುವವರೆಗೂ ನಿರಂತರವಾಗಿ ಹೂಡಿಕೆ ಮಾಡಬೇಕು. ಆದರೆ ಬಹಳಷ್ಟು ಹೂಡಿಕೆದಾರರು ‘ನಾವು ರೆಸ್ಟೋರೆಂಟ್ ಆರಂಭಿಸಿದ್ದೇವೆ, ಈಗ ಲಾಭ ಮಾಡಿ’ ಎಂದುಕೊಂಡಿರುತ್ತದೆ.