ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಬಿಲ್‌ಗೇಟ್ಸ್‌ನ್ನು ಹಿಂದಿಕ್ಕಿದ ಬೃಹತ್ ಉದ್ಯಮಿ!

First Published Feb 4, 2024, 1:27 PM IST

ಫೇಸ್‌ಬುಕ್ ಸಹ-ಸಂಸ್ಥಾಪಕ ಮತ್ತು ಮೆಟಾದ ಸಿಇಒ, ಮಾರ್ಕ್ ಜುಕರ್‌ಬರ್ಗ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ. ಈ ಮೂಲಕ 170.5 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿರುವ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 

ಮೆಟಾದ ಸಹ-ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ವಿಶ್ವದ ಶ್ರೀಮಂತ ವ್ಯಕ್ತಿ ಲಿಸ್ಟ್‌ನಲ್ಲಿ ಬಿಲ್‌ಗೇಟ್ಸ್‌ನ್ನು ಹಿಂದಿಕ್ಕಿದ್ದಾರೆ. ಫೋರ್ಬ್ಸ್ ಪ್ರಕಾರ, ಬರ್ನಾರ್ಡ್ ಅರ್ನಾಲ್ಟ್, ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ವರ್ಲ್ಡ್ಸ್‌ ರಿಚೆಸ್ಟ್ ಪರ್ಸನ್ಸ್‌ ಆಗಿದ್ದು, ಮಾರ್ಕ್ ಜುಕರ್‌ಬರ್ಗ್‌ ನಂತರದ ಸ್ಥಾನದಲ್ಲಿದ್ದಾರೆ.

ಪ್ರಸ್ತುತ, ಮಾರ್ಕ್‌ ಜುಕರ್‌ಬರ್ಗ್‌ 165 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಅವರು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ಗಿಂತ ಶ್ರೀಮಂತರಾಗಿದ್ದಾರೆ. ಮೆಟಾ ಸ್ಟಾಕ್ ಬೆಲೆಯಲ್ಲಿನ 22 ಪ್ರತಿಶತ ಏರಿಕೆ ಅವರನ್ನು 28 ಶತಕೋಟಿ ಶ್ರೀಮಂತನನ್ನಾಗಿ ಮಾಡಿದೆ.

Latest Videos


ಕಂಪನಿಯ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ಬಳಿಕ ಮೆಟಾ ಷೇರುಗಳು ಶೇ. 20ರಷ್ಟು ಹೆಚ್ಚಾಗಿದೆ. ಇದರಿಂದ ಜುಕರ್‌ಬರ್ಗ್‌ ಆಸ್ತಿ ಮೌಲ್ಯವು ಶುಕ್ರವಾರ 169 ಶತಕೋಟಿ ಡಾಲರ್ ದಾಟಿತು. ಇದರಿಂದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಬಿಲ್ ಗೇಟ್ಸ್ ಅವರನ್ನು ಕೆಳಗೆ ಇಳಿಸಿ ಮಾರ್ಕ್ ಜುಕರ್‌ಬರ್ಗ್ ನಾಲ್ಕನೇ ಸ್ಥಾನಕ್ಕೆ ಏರಿದರು.

ಮಾರ್ಚ್‌ನಲ್ಲಿ ವ್ಯವಹಾರವು ತನ್ನ ಮೊದಲ ಲಾಭಾಂಶವನ್ನು ವಿತರಿಸಿದಾಗ ಜುಕರ್‌ಬರ್ಗ್ ಸುಮಾರು 174 ಮಿಲಿಯನ್ ಹಣವನ್ನು ಪಡೆಯುವ ನಿರೀಕ್ಷೆಯಿದೆ. ಈ ಮೂಲಕ ಜುಕರ್‌ಬರ್ಗ್‌ ಆಸ್ತಿ ಮೌಲ್ಯ ಮತ್ತಷ್ಟು ಹೆಚ್ಚಲಿದೆ.

ಮೆಟಾದ CEO ಸಂಸ್ಥೆಯು ತನ್ನ ಮೊದಲ ಲಾಭಾಂಶವನ್ನು ಪಾವತಿಸಿದಾಗ ಸುಮಾರು 174 ಮಿಲಿಯನ್ ಹಣವನ್ನು ಗಳಿಸುತ್ತಾರೆ. ಮೆಟಾ ತನ್ನ 50 ಸೆಂಟ್ ತ್ರೈಮಾಸಿಕ ಲಾಭಾಂಶವನ್ನು ಪಾವತಿಸುತ್ತಿದ್ದರೆ ಜುಕರ್‌ಬರ್ಗ್ ವಾರ್ಷಿಕವಾಗಿ 690 ಮಿಲಿಯನ್‌ಗಿಂತ ಹೆಚ್ಚು ಗಳಿಸುತ್ತಾರೆ.

ಹಣದುಬ್ಬರ ಮತ್ತು ಬಡ್ಡಿದರ ಹೆಚ್ಚಳದಿಂದಾಗಿ ಟೆಕ್ ಷೇರುಗಳು ಕುಸಿತವಾಗಿ ಜುಕರ್‌ಬರ್ಗ್ ಸಂಪತ್ತು 2022 ಇಳಿಕೆಯಾಗಿತ್ತು. ವರ್ಷದ ಕೊನೆಯಲ್ಲಿ 35 ಶತಕೋಟಿ ಡಾಲರ್ ಗಿಂತ ಕಡಿಮೆಯಾಗಿತ್ತು.

Meta ಸುಮಾರು 21,000 ಜನರನ್ನು ವಜಾಗೊಳಿಸಿದ ನಂತರ 2023ರಲ್ಲಿ ಸ್ಟಾಕ್ ಸುಮಾರು ಮೂರು ಪಟ್ಟು ಹೆಚ್ಚಾಯಿತು. ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾ ಷೇರು ಒಂದೇ ದಿನದಲ್ಲಿ ಹೆಚ್ಚಿನ ಏರಿಕೆಯನ್ನು ಕಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೂಡಿಕೆದಾರರಿಂದ ಬರುವ ಲಾಭಾಂಶದಿಂದ ವರ್ಷಕ್ಕೆ ಸುಮಾರು 700 ಮಿಲಿಯನ್ ಡಾಲರ್ ಪಾವತಿಯನ್ನು ಸ್ವೀಕರಿಸುತ್ತಾರೆ.

click me!