ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಇದು 1842000 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಕಂಪನಿಯಾಗಿದೆ. ಅಂಬಾನಿ ಗ್ರೂಪ್ ಹಲವಾರು ಬಿಸಿನೆಸ್‌ಗಳನ್ನು ನಿರ್ವಹಿಸುತ್ತಿದೆ.
ಅದರಲ್ಲೊಂದು ಜಿಯೋ ವರ್ಲ್ಡ್ ಪ್ಲಾಜಾ. ಇತ್ತೀಚಿಗೆ ಮುಕೇಶ್ ಅಂಬಾನಿ ಒಡೆತನದ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ಗೆ ಮುಂಬೈ ಪೊಲೀಸರು ದಾಳಿ ಮಾಡಿದ್ದಾರೆ. ಲಕ್ಸುರಿಯಸ್ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆದ್ರೆ ಇದ್ಯಾವುದೂ ಅಂಬಾನಿ ಫ್ಯಾಮಿಲಿಗೆ ಸೇರಿದ್ದಲ್ಲ.
ಮುಖೇಶ್ ಅಂಬಾನಿ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಭಾರತದ ಅತ್ಯಂತ ದೊಡ್ಡ ಮಾಲ್‌ಗಳಲ್ಲಿ ಒಂದಾಗಿದೆ. ಆಪಲ್ ಸ್ಟೋರ್ ಹೊಂದಿರುವ ದೇಶದ ಮೊದಲ ಮಾಲ್ ಇದಾಗಿದೆ. ಮುಕೇಶ್ ಅಂಬಾನಿ ಅವರ ಮಾಲ್ ಹೊಸ ಮಳಿಗೆಗಳನ್ನು ತೆರೆಯುವ ಮಧ್ಯೆಯೇ, ಮಾಲ್‌ನ ಪಾರ್ಕಿಂಗ್ ಸ್ಥಳದಿಂದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ,
ಮುಕೇಶ್ ಅಂಬಾನಿ ಒಡೆತನದ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನ ಪಾರ್ಕಿಂಗ್ ಸ್ಥಳದಿಂದ ಮುಂಬೈ ಪೊಲೀಸರು ಫೆರಾರಿಸ್, ಲಂಬೋರ್ಗಿನಿ, ಪೋರ್ಷೆ ಮತ್ತು ಇತರ ಉನ್ನತ ಮಟ್ಟದ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮುಂಬೈ ಪೊಲೀಸರು 41 ಸೂಪರ್ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮುಖೇಶ್ ಅಂಬಾನಿ ಮಾಲ್‌ನ ಪಾರ್ಕಿಂಗ್ ಸ್ಥಳದಿಂದ ದುಬಾರಿ ಕಾರುಗಳು. ಈ ಕಾರು ಅಂಬಾನಿ ಕುಟುಂಬದ ಯಾವುದೇ ಸದಸ್ಯರಿಗೆ ಸೇರಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ಈ ಕಾರು ರ್ಯಾಲಿಯನ್ನು ಆಯೋಜಿಸಲಾಗಿತ್ತು ಈವೆಂಟ್ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಯು ಇದನ್ನು ಆಯೋಜಿಸಿದೆ ಎಂದು ವರದಿ ಬಹಿರಂಗಪಡಿಸುತ್ತದೆ. ಆದರೆ ಮುಂಬೈ ಪೊಲೀಸರಿಂದ ಪೂರ್ವ ಅನುಮತಿ ಪಡೆದಿರಲಿಲ್ಲ.
ಫೆರಾರಿಸ್, ಲಂಬೋರ್ಘಿನಿಗಳು, ಪೋರ್ಷೆಗಳು, ಮೆಕ್ಲಾರೆನ್ಸ್, ಬಿಎಂಡಬ್ಲ್ಯುಗಳು, ಜಾಗ್ವಾರ್‌ಗಳು, ಆಡಿಸ್ ಮತ್ತು ಮರ್ಸಿಡಿಸ್ ಸೇರಿದಂತೆ 100ಕ್ಕೂ ಹೆಚ್ಚು ಕಾರುಗಳು ಜನವರಿ 26ರಂದು ರ್ಯಾಲಿಯಲ್ಲಿ ಭಾಗವಹಿಸಿವೆ.
ಮಹಾರಾಷ್ಟ್ರ ಪೊಲೀಸ್ ಕಾಯಿದೆ 1951 ರ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188 ರ ಅಡಿಯಲ್ಲಿ ಕಾರುಗಳ ಮಾಲೀಕರ ಮೇಲೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.