ಸಾಲ ತೆಗೆದುಕೊಂಡು ಸೀರೆ ಅಂಗಡಿ ಆರಂಭಿಸಿದ ವ್ಯಕ್ತಿ ಈಗ ಭಾರತದ ಶ್ರೀಮಂತ ಆಭರಣ ವ್ಯಾಪಾರಿ; 17,000 ಕೋಟಿ ಒಡೆಯ!

First Published | Oct 19, 2023, 5:32 PM IST

 ಸಣ್ಣ ಮೊತ್ತದಿಂದ ಆರಂಭಿಸಿ ದೊಡ್ಡದಾದ ಸಾಮ್ರಾಜ್ಯವನ್ನು ಕಟ್ಟಲು ಸಾಕಷ್ಟು ಪರಿಶ್ರಮ ಮತ್ತು ತಾಳ್ಮೆಯ ಅಗತ್ಯವಿದೆ. ಈ ವ್ಯಕ್ತಿಯೂ ಹಾಗೆ ಬಹಳ ಕಠಿಣ ಪರಿಶ್ರಮದ ನಂತರ ದೊಡ್ಡದೊಂದು ಉದ್ಯಮವನ್ನೇ ಕಟ್ಟಿದರು. ಕೇವಲ 50 ಲಕ್ಷ ಸಾಲ ತೆಗೆದುಕೊಂಡು ಉದ್ಯಮ ಆರಂಭಿಸಿ ಕೋಟ್ಯಾಧಿಪತಿಯಾದರು.

ಬಿಸಿನೆಸ್ ಮಾಡಿ ಸಕ್ಸಸ್ ಆಗುವುದು ಅಷ್ಟು ಸುಲಭದ ಕೆಲಸವಲ್ಲ. ಸಣ್ಣ ಮೊತ್ತದಿಂದ ಆರಂಭಿಸಿ ದೊಡ್ಡದಾದ ಸಾಮ್ರಾಜ್ಯವನ್ನು ಕಟ್ಟಲು ಸಾಕಷ್ಟು ಪರಿಶ್ರಮ ಮತ್ತು ತಾಳ್ಮೆಯ ಅಗತ್ಯವಿದೆ. ಈ ವ್ಯಕ್ತಿಯೂ ಹಾಗೆ ಬಹಳ ಕಠಿಣ ಪರಿಶ್ರಮದ ನಂತರ ದೊಡ್ಡದೊಂದು ಉದ್ಯಮವನ್ನೇ ಕಟ್ಟಿದರು. ಕೇವಲ 50 ಲಕ್ಷ ಸಾಲ ತೆಗೆದುಕೊಂಡು ಉದ್ಯಮ ಆರಂಭಿಸಿ ಕೋಟ್ಯಾಧಿಪತಿಯಾದರು.

ಭಾರತವು ಹೆಚ್ಚಿನ ಸಂಖ್ಯೆಯ ಆಭರಣ ಮಳಿಗೆಗಳನ್ನು ಹೊಂದಿದೆ. ಹಲವರು ಚಿನ್ನದ ವ್ಯಾಪಾರವನ್ನು ಮಾಡುತ್ತಲೇ ಕೋಟ್ಯಾಧಿಪತಿಗಳಾಗಿದ್ದಾರೆ. ಅಂಥವರಲ್ಲಿ ಒಬ್ಬರು ಕಲ್ಯಾಣ್ ಜ್ಯುವೆಲರ್ಸ್ ಸಂಸ್ಥಾಪಕ ಟಿ.ಎಸ್.ಕಲ್ಯಾಣರಾಮನ್. ಅವರ ಕಥೆ ತುಂಬಾ ವಿಭಿನ್ನವಾಗಿದೆ ಮತ್ತು ಸ್ಪೂರ್ತಿದಾಯಕವಾಗಿದೆ.

Tap to resize

TS ಕಲ್ಯಾಣರಾಮನ್ ಅವರು 1993ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ವ್ಯಾಪಕವಾಗಿ ಯಶಸ್ವಿಯಾದ ಕಲ್ಯಾಣ್ ಜ್ಯುವೆಲರ್ಸ್‌ನ್ನು ಸ್ಥಾಪಿಸಿದರು. ಕಲ್ಯಾಣರಾಮನ್ ಅವರು ದಕ್ಷಿಣದ ರಾಜ್ಯಗಳ ಪ್ರಮುಖ ಜವಳಿ ಉದ್ಯಮಿಯ ಪುತ್ರರಾಗಿದ್ದಾರೆ. ಆದರೆ ಉದ್ಯಮದಲ್ಲಿ ಹೆಚ್ಚು ಸಂಪತ್ತು ಗಳಿಸಲು ಜ್ಯುವೆಲ್ಲರಿ ಉದ್ಯಮ ಈ ಕುಟುಂಬಕ್ಕೆ ನೆರವಾಯಿತು.

ಕಲ್ಯಾಣರಾಮನ್, ತಮ್ಮ ಸ್ವಂತ ವೈಯಕ್ತಿಕ ಉಳಿತಾಯದ 25 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಬ್ಯಾಂಕಿನಿಂದ 50 ಲಕ್ಷ ರೂಪಾಯಿ ಸಾಲವನ್ನು ಪಡೆದರು, ಕೇರಳದಲ್ಲಿ ಮೊದಲ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯನ್ನು ತೆರೆಯಲು 75 ಲಕ್ಷ ರೂಪಾಯಿಗಳ ಬಂಡವಾಳವನ್ನು ಪಡೆದುಕೊಂಡರು. ಶೀಘ್ರದಲ್ಲೇ, ಜವಳಿ ವ್ಯಾಪಾರದಿಂದ ಅವರ ನಿಷ್ಠಾವಂತ ಗ್ರಾಹಕರು ತ್ರಿಶೂರ್‌ನಲ್ಲಿರುವ ಅವರ ಅಂಗಡಿಗೆ ಭೇಟಿ ನೀಡಲು ಪ್ರಾರಂಭಿಸಿದರು.

ಆಭರಣಗಳನ್ನು ಮಾರಾಟ ಮಾಡುವ ಹೈಪರ್‌ಲೋಕಲ್ ವಿಧಾನದ ಬಗ್ಗೆ ಕಲಿತ ಕಲ್ಯಾಣ್ ಜ್ಯುವೆಲ್ಲರ್ಸ್ ಮೊದಲು ಕೇರಳದಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿತು. ಆ ನಂತರ ಇತರ ರಾಜ್ಯಗಳಲ್ಲಿ ಬಿಸಿನೆಸ್‌ನ್ನು ಆರಂಭಿಸಲು ನಿರ್ಧರಿಸದರು. ಅದೇ ಕ್ಷೇತ್ರದ ಉದ್ಯಮಿಗಳೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸುವ ಕಲ್ಯಾಣರಾಮನ್ ತಮ್ಮ ಯಶಸ್ಸಿನ ಹಾದಿಯನ್ನು ರೂಪಿಸಿದರು.

ಟಿಎಸ್ ಕಲ್ಯಾಣರಾಮನ್ ಅವರು ಒಂದೇ ಗುರಿಯನ್ನು ಹೊಂದಿದ್ದರು. ಇಬ್ಬರು ಪುತ್ರರಿಗಾಗಿ ದೇಶದಲ್ಲಿ ಎರಡು ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಗಳನ್ನು ತೆರೆಯುವುದು. ಆದರೆ ಅವರ ಬಿಸಿನೆಸ್ ಇಂಟೆಲಿಜೆನ್ಸ್‌ ಯಶಸ್ಸಿನ ಹೊಸ ಮಟ್ಟಕ್ಕೆ ಕೊಂಡೊಯ್ದಿತು. ಪ್ರಸ್ತುತ ಕಲ್ಯಾಣ್‌ ಜ್ಯುವೆಲ್ಲರ್ಸ್‌, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಬರೋಬ್ಬರಿ 32 ಮಳಿಗೆಗಳನ್ನು ಹೊಂದಿದೆ.

72ನೇ ವಯಸ್ಸಿನಲ್ಲಿ, ಕಲ್ಯಾಣ್ ಜ್ಯುವೆಲರ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿಎಸ್ ಕಲ್ಯಾಣರಾಮನ್ ಅವರು 2 ಬಿಲಿಯನ್ USD ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಫೋರ್ಬ್ಸ್ ಪ್ರಕಾರ 16,200 ಕೋಟಿ ರೂ. ಕಲ್ಯಾಣ್ ಜ್ಯುವೆಲರ್ಸ್‌ನ ಮಾರುಕಟ್ಟೆ ಬಂಡವಾಳ ಪ್ರಸ್ತುತ 17,000 ಕೋಟಿ ರೂ. ಆಗಿದೆ.

Latest Videos

click me!