ವಿಶ್ವಕಪ್‌ ಕ್ರಿಕೆಟ್ 2023 ಎಫೆಕ್ಟ್‌: ಈ ಇಬ್ಬರು ಉದ್ಯಮಿಗಳಿಗೆ ಭರ್ಜರಿ ಹಣದ ಹೊಳೆ!

First Published | Oct 19, 2023, 4:09 PM IST

ವಿಶ್ವಕಪ್ ಏಕದಿನ ಕ್ರಿಕೆಟ್‌ ಪಂದ್ಯದಿಂದ ಖ್ಯಾತ ಉದ್ಯಮಿಗಳಾದ ಮುಖೇಶ್‌ ಅಂಬಾನಿ ಹಾಗೂ ಸುನೀಲ್‌ ಮಿತ್ತಲ್‌ಗೂ ಭರ್ಜರಿ ಆದಾಯ ಬರಲಿದೆ.

ಕೆಲ ದಿನಗಳಿಂದ ಭಾರತದಲ್ಲಿ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಪ್ರಾರಂಭವಾಗಿದ್ದು, ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇನ್ನು, ಇದರಿಂದ ಬಿಸಿಸಿಐ ಸೇರಿ ಕ್ರಿಕೆಟ್‌ ಸಂಸ್ಥೆಗಳಿಗೆ ಹಣದ ಹೊಳೆಯೂ ಹರಿದು ಬರಲಿದೆ. ಇದಿಷ್ಟೇ ಅಲ್ಲ, ವಿಶ್ವಕಪ್ ಏಕದಿನ ಕ್ರಿಕೆಟ್‌ ಪಂದ್ಯದಿಂದ ಖ್ಯಾತ ಉದ್ಯಮಿಗಳಾದ ಮುಖೇಶ್‌ ಅಂಬಾನಿ ಹಾಗೂ ಸುನೀಲ್‌ ಮಿತ್ತಲ್‌ಗೂ ಭರ್ಜರಿ ಆದಾಯ ಬರಲಿದೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅಹಮದಾಬಾದ್‌ನಲ್ಲಿ ಸಂಭ್ರಮದಿಂದ ಪ್ರಾರಂಭವಾಗಿದ್ದು, ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ಗೆಲುವಿನ ನಂತರ ಭಾರತದಲ್ಲಿ ವಿಶ್ವಕಪ್ ಉತ್ಸಾಹವು ಹಠಾತ್ತನೆ ಹೆಚ್ಚಾಗಿದೆ. ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ತಮ್ಮ ಮೊಬೈಲ್‌ಗಳಲ್ಲಿ ವಿಶ್ವಕಪ್‌ ಲೈವ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಮತ್ತು ಇದು ದೇಶದ ಉನ್ನತ ಟೆಲಿಕಾಂ ಆಪರೇಟರ್‌ಗಳ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದೆ. 

Tap to resize

ಈ ಹಿನ್ನೆಲೆ ಡಿಸೆಂಬರ್ ತ್ರೈಮಾಸಿಕದಲ್ಲಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತು ಸುನೀಲ್‌ ಮಿತ್ತಲ್‌ ಅವರ ಭಾರ್ತಿ ಏರ್‌ಟೆಲ್ ಮೊಬೈಲ್ ಡೇಟಾ ಬಳಕೆಯ ಮಟ್ಟದಲ್ಲಿ ಸುಮಾರು 6 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸುತ್ತದೆ ಎಂದು ವಿಶ್ಲೇಷಕರು ಮತ್ತು ಉದ್ಯಮದ ಅಧಿಕಾರಿಗಳು ಅಂದಾಜಿಸಿದ್ದಾರೆ.
 

5G ಸೇವೆಗಳನ್ನು ಬಳಸುತ್ತಿರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಪ್ರಬಲ ಡಿಜಿಟಲ್ ವೀಕ್ಷಕರನ್ನು ನೋಡಲಾಗುತ್ತಿದೆ. ಹಾಗೂ,  5G ಸೇವೆಗಳ ಕೊರತೆಯಿಂದಾಗಿ, Vodafone Idea ಮೊಬೈಲ್ ಡೇಟಾ ಬಳಕೆಯ ಬೆಳವಣಿಗೆಯು ವಿಶ್ವಕಪ್‌ ಸಮಯದಲ್ಲಿಯೂ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
 

ಇನ್ನೊಂದೆಡೆ, ಏಕೆಂದರೆ ವಿಶ್ವಕಪ್‌ನಿಂದಾಗಿ, 4G ಯಿಂದ 5G ಮತ್ತು 2G ನಿಂದ 4G ಗೆ ಅಪ್‌ಗ್ರೇಡ್‌ಗಳು ಹೆಚ್ಚಾಗಲಿವೆ. ಈ ಹಿನ್ನೆಲೆ, ಟೆಲಿಕಾಂ ಕಂಪನಿಗಳ ಕಾರ್ಯನಿರ್ವಾಹಕರು ಮೊಬೈಲ್ ಡೇಟಾ ಬಳಕೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಡಿಸ್ನಿ + ಹಾಟ್‌ಸ್ಟಾರ್‌ ಕ್ರಿಕೆಟ್‌ ಪಂದ್ಯಗಳನ್ನು ಉಚಿತವಾಗಿ ಲೈವ್‌ ಸ್ಟ್ರೀಮಿಂಗ್ ಮಾಡುತ್ತಿದ್ದು, ಇದನ್ನು ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಎಲ್ಲಿ ಬೇಕಾದ್ರೂ ನೋಡಬಹುದಾಗಿದೆ.

"ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಡಿಜಿಟಲ್ ವೀಕ್ಷಕರ ಸಂಯೋಜನೆ ಮತ್ತು ವೇಗವಾಗಿ ಬೆಳೆಯುತ್ತಿರುವ 5G ಬಳಕೆಯು Q3FY24 ರಲ್ಲಿ Jio ಮತ್ತು Airtel ಮೊಬೈಲ್ ಡೇಟಾ ಬಳಕೆಯ ಮಟ್ಟವನ್ನು ಮೀರಲು ಸಹಾಯ ಮಾಡುತ್ತದೆ" ಎಂದು ಅನಾಲಿಸಿಸ್ ಮೇಸನ್‌ನ ಮುಖ್ಯಸ್ಥ (ಭಾರತ ಮತ್ತು ಮಧ್ಯಪ್ರಾಚ್ಯ) ರೋಹನ್ ಧಮಿಜಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ 5G ಬಳಕೆಯಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಪ್ರತಿ ಚಂದಾದಾರರಿಗೆ ಸರಾಸರಿ ಮಾಸಿಕ ಡೇಟಾ ಬಳಕೆಯಲ್ಲಿ ಜಿಯೋ 8%, ಏರ್‌ಟೆಲ್ 4.2% ಮತ್ತು Vi ನಲ್ಲಿ 3.82% ಬೆಳವಣಿಗೆಯಾಗಿದೆ ಎಂದೂ ವರದಿಯಾಗಿದೆ.

ಹೆಚ್ಚಿನ ಫೀಚರ್ ಫೋನ್ ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ IPL ಅನ್ನು ಲೈವ್ ಆಗಿ ವೀಕ್ಷಿಸಲು ಹೆಚ್ಚಿನ ಬೆಲೆಯ 4G ಪ್ಯಾಕ್‌ಗಳಿಗೆ ಅಪ್‌ಗ್ರೇಡ್ ಮಾಡಿದ್ದರಿಂದ ಜೂನ್ ತ್ರೈಮಾಸಿಕದಲ್ಲಿ ಡೇಟಾ ಬಳಕೆಯಲ್ಲಿ ದೊಡ್ಡ ಬೆಳವಣಿಗೆಯಾಗಿದೆ ಎಂದು ತಿಳಿದುಬಂದಿದೆ. 

Latest Videos

click me!